ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖ್ಯಾತ ಕೊಳಲುವಾದಕ ಎಸ್ ವಿ ಭಾಸ್ಕರ್ ನಿಧನ

|
Google Oneindia Kannada News

ಬೆಂಗಳೂರು, ಮೇ 13: ಖ್ಯಾತ ಕೊಳಲುವಾದಕ ಎಸ್.ವಿ. ಭಾಸ್ಕರ್ (54) ನಿಧನ ಹೊಂದಿದ್ದಾರೆ. ಅನರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಯಲಿದೆ.

ತಮ್ಮ ಕೊಳಲುವಾದನದ ಮೂಲಕ ಸಂಗೀತ ಕ್ಷೇತ್ರದಲ್ಲಿ ಎಸ್ ವಿ ಭಾಸ್ಕರ್ ದೊಡ್ಡ ಹೆಸರು ಮಾಡಿದ್ದರು. ದೊಡ್ಡ ಮಟ್ಟದ ಶಿಷ್ಯ ಬಳಗವನ್ನು ಹೊಂದಿದ್ದರು. ಎಷ್ಟೋ ಯುವ ಪ್ರತಿಭೆಗಳಿಗೆ ಕೊಳಲು ವಾದನವನ್ನು ಕಲಿಸಿದ್ದರು.

ಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶ

ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ವಾದ್ಯಗೋಷ್ಟಿಗಳಲ್ಲಿ ಎಸ್ ವಿ ಭಾಸ್ಕರ್ ಕೊಳಲು ನುಡಿಸಿದ ಖ್ಯಾತಿ ಪಡೆದಿದ್ದಾರೆ. ಸುಗಮ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ.

Flute Player SV Bhaskar Passes Away

ಕೊಳಲುವಾದನದ ಜೊತೆಗೆ ಸುವರ್ಣ ಕರ್ನಾಟಕ ಕಲಾವಿದರ ಸಂಘ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿಯಾಗಿದ್ದರು.

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ ಮನೆಯಲ್ಲಿಯೇ ಇದ್ದರು. ಇಂದು ಕೊನೆಯುಸಿರೆಳೆದಿದ್ದಾರೆ.

English summary
Flute player SV Bhaskar passes away Today (May 13th) in Banashankari Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X