ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವೀಣ್ ಗೋಡ್ಖಿಂಡಿಗೆ ‘ಝೆಡ್‌ಎಂಆರ್’ ಸಂಗೀತ ಪ್ರಶಸ್ತಿಯ ಗರಿ

By Prasad
|
Google Oneindia Kannada News

ಬೆಂಗಳೂರು, ಮೇ 17 : ಸುರಮಣಿ, ನಾದನಿಧಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ.

ಅಂತಾರಾಷ್ಟ್ರೀಯ ಮಟ್ಟದ 'ಝೆಡ್‌ಎಂಆರ್ ಮ್ಯೂಜಿಕ್ ಅವಾರ್ಡ್'ನ (ಝೆಡ್‌ಎಂಆರ್ ಸಂಗೀತ ಪ್ರಶಸ್ತಿ) ಗರಿ ಗೋಡ್ಖಿಂಡಿ ಅವರ ಮುಡಿಗೇರಿದೆ. ಪ್ರವೀಣ್ ಅವರಿಗೆ ಅಭಿನಂದನೆಗಳು.

'ಝೋನ್ ಮ್ಯೂಸಿಕ್ ರಿಪೋರ್ಟರ್ (Zone Music Reporter)' ಅಮೆರಿಕಾದ ಪ್ರತಿಷ್ಠಿತ ಸಂಗೀತ ಸಂಸ್ಥೆ ಪ್ರತಿವರ್ಷ ವಿಶ್ವದ ಖ್ಯಾತ ಸಂಗೀತ ವಿದ್ವಾಂಸರಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ. [ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]

Flute musician Pravin Godkhindi bags ZMR music awards

'ಬೆಸ್ಟ್ ಕಾನ್‌ಟೆಂಪ್ರರಿ ಇನ್‌ಸ್ಟ್ರುಮೆಂಟಲ್ ಆಲ್ಬಂ' (ಅತ್ಯುತ್ತಮ ಸಮಕಾಲೀನ ವಾದ್ಯ ಸಂಗೀತ ಆಲ್ಬಂ) ವಿಭಾಗದಲ್ಲಿ ಪ್ರವೀಣ್ ಗೋಡ್ಖಿಂಡಿ ಅವರ 'ಇಮ್ಯಾಜಿನಿಂಗ್ಸ್' ಎಂಬ ವಾದ್ಯ ಸಂಗೀತದ ಆಲ್ಬಂಗೆ 2015ನೇ ಸಾಲಿನ 'ಝೆಡ್‌ಎಂಆರ್ ಸಂಗೀತ ಪ್ರಶಸ್ತಿ' ನೀಡಿ ಗೌರವಿಸಿದೆ. ಒಟ್ಟು 13 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಈ ಆಲ್ಬಂನಲ್ಲಿ ಪ್ರವೀಣ್ ಗೋಡ್ಖಿಂಡಿ ಅವರ ಜತೆ ವಿದೇಶಿ ಖ್ಯಾತ ಸಂಗೀತಗಾರರಾದ ಪೌಲ್ ಆಡಮ್ಸ್, ಡೇವಿಡ್ ಹಾಫ್‌ಮ್ಯಾನ್ ಮತ್ತು ಎಲಿಜಬೆತ್ ಗೇರ್ ಅವರ ಸಂಗೀತ ಸಹಯೋಗವಿದೆ. [ಕಾರು ಚಾಲಕನ ಸಂಗೀತ ಪ್ರತಿಭೆಗೆ ತಲೆದೂಗಿದ ಕಲಾಂ]

ಮಾಹಿತಿಗೆ ಸಂಪರ್ಕಿಸಿ : +91-9845329954

English summary
New feather has been added to Indian Classical Music with world renowned Bansuri (Flute) musician from the city Pravin Godkhindi winning prestigious international music award ZMR music awards under Best Contemporary Instrumental Album.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X