ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!

|
Google Oneindia Kannada News

ಬೆಂಗಳೂರು, ಜನವರಿ 1 : ಈ ಬಾರಿ ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖವಾದ ಥೀಮ್ ಗೆ ಹೂವಿನ ಬಳಕೆ ಬದಲಾಗಿ ಫೈಬರ್ ನಿಂದ ನಿರ್ಮಿಸಲಾಗುತ್ತಿದೆ.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯನ್ನು ಮುಖ್ಯ ಥೀಮ್ ಆಗಿ ಆಯ್ಕೆ ಮಾಡಿಕೊಂಡಿದ್ದು. ಆದರೆ ಹೂವುಗಳಿಂದ ಮೂರ್ತಿ ನಿರ್ಮಿಸಿದರೆ ಅಂತಿಮ ಸ್ಪರ್ಶ ನೀಡುವುದು ಕಷ್ಟ ಎಂದು ಜತೆಗೆ ಅದೊಂದು ಧಾರ್ಮಿಕ ವಿಚಾರವಾದ್ದರಿಂದ ಯಾರ ಮನಸ್ಸಿಗೂ ನೋವುಂಟಾಗಬಾರದು ಎಂದು ಫೈಬರ್ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ.

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಪ್ರತಿಕೃತಿಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಪ್ರತಿಕೃತಿ

ಆದರೆ ಅದರ ಸುತ್ತಲೂ ನಿರ್ಮಿಸುವ ಎಲ್ಲಾ ಥೀಮ್ ಗಳನ್ನು ಹೂವುಗಳಲ್ಲೇ ನಿರ್ಮಿಸಲಾಗುವುದು ಎಂದು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ. ಗಣರಾಜ್ಯೋತ್ಸವ ಅಂಗವಾಗಿ ಜ 19 ರಿಂದ 28 ರವಚರೆಗೆ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಗಳ ಸಹಯೋಗದಲ್ಲಿ ನಡೆಯುವ 207 ನೇ ಫಲಪುಷ್ಪ ಪ್ರದರ್ಶನ ಇದಾಗಿದೆ.

೩೦ ಅಡಿ ಎತ್ತರದ ಬಾಹುಬಲಿ

೩೦ ಅಡಿ ಎತ್ತರದ ಬಾಹುಬಲಿ

ಈ ಬಾರಿ ಗಾಜಿನ ಮನೆಯಲ್ಲಿ30 ಅಡಿ ಎತ್ತರದ ಫೈಬರ್ ನ ಬಾಹುಬಲಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಸುಮಾರು 15 ಅಡಿ ಎತ್ತರದ ಬೆಟ್ಟವನ್ನು ನಿರ್ಮಿಸಲಾಗುತ್ತಿದೆ. ಬಾಹುಬಲಿಯ ಸುತ್ತಲೂ ನಾಲ್ಕೈದು ಜೈನ ಬಸದಿಗಳನ್ನು ಹೂವುಗಳಿಂದ ನಿರ್ಮಿಸಲಾಗುವುದು. ಎಡಭಾಗದಲ್ಲಿ ಗೊಮ್ಮಟೇಶ್ವರನ ಪಾದಗಳು ಹಾಗೂ ಗೊಮ್ಮಟೇಶ್ವರನ ಲಾಂಛನ ಬರಲಿದೆ. ಹಿಂಭಾಗದಲ್ಲಿ ಭರತ ಬಾಹುಬಲಿಯ ಕಥಾ ಸಂಗಮವಿರಲಿದೆ. ಇದಲ್ಲದೆ ಪರಿಮಿಡ್ ಶೈಲಿಯ ವರ್ಟಿಕಲ್ ಗಾರ್ಡನ್ , ಮಹಾಮಸ್ತಕಾಭಿಶೇಕದ ಅನುಭವ ನೀಡುವ ಥೀಮ್ ಗಳನ್ನು ನಿರ್ಮಿಸಲಾಗುತ್ತದೆ.

ಲಾಲ್ ಬಾಗ್ ನಲ್ಲಿ ಎರಡು ತಿಂಗಳಿನಿಂದ ಪ್ರದರ್ಶನಕ್ಕೆ ಸಿದ್ಧತೆ

ಲಾಲ್ ಬಾಗ್ ನಲ್ಲಿ ಎರಡು ತಿಂಗಳಿನಿಂದ ಪ್ರದರ್ಶನಕ್ಕೆ ಸಿದ್ಧತೆ

ಸುಮಾರು ಎರಡು ತಿಂಗಳಿನಿಂದ ಫಲಪುಷ್ಪ ಪ್ರದರ್ಶನದ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಸುಮಾರು 15 ದಿನಗಳಿಂದ ಉದ್ಯಾನದಲ್ಲಿ ಅಪಾಯದಂಚಿನಲ್ಲಿರುವ ಮರ, ರೆಂಬೆ, ಕೊಂಬೆಗಳು, ಕಲ್ಲುಗಳು, ಕಟ್ಟಡಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಸಿರಿಧಾನ್ಯಗಳ ಅಲಂಕಾರ

ಸಿರಿಧಾನ್ಯಗಳ ಅಲಂಕಾರ

ಇದೇ ಮೊದಲ ಬಾರಿಗೆ ಗಾಜಿನ ಮನೆಯ ಮುಖ್ಯ ಆಕರ್ಷಣೆಯನ್ನು ಸಿರಿಧಾನ್ಯಗಳಲ್ಲಿ, ತರಕಾರಿ ಕೆತ್ತನೆ ಹಾಗೂ ರಂಗೋಲಿಗಳ ಮೂಲಕವೂ ಬಿಂಬಿಸಲಾಗುತ್ತದೆ. ಶ್ರವಣ ಬೆಳಗೊಳದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದ ಪರಿಸರ ಹಾಗೂ ಧಾರ್ಮಿಕ ಭಕ್ತಿ, ವೈಭೋಗವನ್ನು ನಿರ್ಮಿಸಲಾಗುತ್ತದೆ.

ಲಾಲ್ ಬಾಗ್ ನಲ್ಲಿ ನಡೆಯುವ ಪುಷ್ಪ ಪ್ರದರ್ಶನದಲ್ಲಿ ತರಹೇವಾರಿ ಹೂವು ಬಳಕೆ

ಲಾಲ್ ಬಾಗ್ ನಲ್ಲಿ ನಡೆಯುವ ಪುಷ್ಪ ಪ್ರದರ್ಶನದಲ್ಲಿ ತರಹೇವಾರಿ ಹೂವು ಬಳಕೆ

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಆರ್ಕಿಡ್, ಕಾರ್ನೇಷನ್, ಗುಲಾಬಿ, ಜರ್ಬೆರಾ ಮತ್ತಿತರೆ ಕೆಲವು ವಿದೇಶಿ ತಳಿಗಳ ಹೂವುಗಳು ಸೇರಿದಂತೆ ಥೀಮ್ ಗಳಿಗಾಗಿ ಸುಮಾರು1.50 ಲಕ್ಷ ಹೂವುಗಳನ್ನು ಬಳಸುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಮೂಲಕ ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಲು ಆಯೋಜಕರು ಮುಂದಾಗಿದ್ದಾರೆ.

English summary
Replica of Gommateshwar will come up with fiber articles rather flower as theme of flower show in Lalbagh garden from January 19 to jan 26 organising by the Horticulture department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X