ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲವರ್ ಶೋ: ನಮ್ಮ ಮೆಟ್ರೋಗೆ ಬಂದ ಆದಾಯ ಎಷ್ಟು ಗೊತ್ತಾ?

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಿಂದ ನಮ್ಮ ಮೆಟ್ರೋಗೆ ಅಧಿಕ ಆದಾಯ ಸಂದಾಯವಾಗಿದೆ.

ಜುಲೈ ಆಗಸ್ಟ್ ತಿಂಗಳಿನಿಂದ ಮೆಟ್ರೋ ಆದಾಯ ಗಣನೀಯ ಏರಿಕೆಯಾಗಿದೆ. ಆಗಸ್ಟ್ ತಿಂಗಳೊಂದರಲ್ಲೇ 33 ಕೋಟಿ ರೂಗೆ ತಲುಪಿದ್ದು, ಪ್ರಯಾಣಿಕರ ಸಂಖ್ಯೆ 1.24 ಕೋಟಿಗೆ ಏರಿಕೆಯಾಗಿದೆ.

ಲಾಲ್‌ಬಾಗ್‌ನಲ್ಲಿ ಮೈಸೂರು ದಸರಾ ದರ್ಬಾರ್ ನೋಡ ಬನ್ನಿ ಲಾಲ್‌ಬಾಗ್‌ನಲ್ಲಿ ಮೈಸೂರು ದಸರಾ ದರ್ಬಾರ್ ನೋಡ ಬನ್ನಿ

ಈ ಮೊದಲು ಅಪರೂಪಕ್ಕೆ ಗುಂಪು ಟಿಕೆಟ್ ಮಾರಾಟವಾಗುತ್ತಿತ್ತು. ಹಿಂದಿನ ಆರು ತಿಂಗಳಲ್ಲಿ ಗುಂಪು ಟಿಕೆಟ್ ಗೆ ಬೇಡಿಕೆ ಇರಲಿಲ್ಲ. ಜುಲೈ ನಲ್ಲಿ ನೂರಾರು ಗುಂಪು ಟಿಕೆಟ್‌ಗಳು ಮಾರಾಟವಾಗಿವೆ. ಕುಟುಂಬ ಸಮೇತರಾಗಿ ಬರುವವರು ಅಥವಾ ಕಾಲೇಜು ವಿದ್ಯಾರ್ಥಿಗಳು ಒಟ್ಟಿಗೆ ಪ್ರಯಾಣಿಸುವಾಗ ಶೇ.10ರಷ್ಟು ರಿಯಾಯಿತಿ ಟಿಕೆಟ್ ಪಡೆಯಬಹುದಾಗಿದೆ. ಜುಲೈನಲ್ಲಿ ಶೇ.62.75 ಮಂದಿ ಸ್ಮಾರ್ಟ್ ಕಾರ್ಡ್ ಬಳಸಿ, ಶೇ.37.21 ಮಂದಿ ಟೋಕನ್ ಖರೀದಿಸಿದ್ದಾರೆ.

Flower Show Do You Know Namma Metro Get How Much Revenue

ಮೆಟ್ರೋದಲ್ಲಿ ಪ್ರತಿನಿತ್ಯ ಬೆಳಗ್ಗೆ 3.80ರಿಂದ 4 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ನೇರಳೆ ಮಾರ್ಗದಲ್ಲಿ ಎಲ್ಲಾ ರೈಲುಗಳನ್ನು ಆರು ಬೋಗಿಗಳನ್ನಾಗಿ ಪರಿವರ್ತನೆಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ಮಾರ್ಚ್ ತಿಂಗಳಲ್ಲಿ ಹೆಚ್ಚಿದ್ದ ಆದಾಯ, ಏಪ್ರಿಲ್‌ನಲ್ಲಿ ಸ್ವಲ್ಪ ಇಳಿದಿತ್ತು, ಮೇ ತಿಂಗಳಲ್ಲಿ ಮತ್ತೆ ಏರಿಕೆಯಾಗಿ ಜೂನ್‌ನಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ 30 ಕೋಟಿ ರೂ ನಷ್ಟಿದ್ದ ಆದಾಯವು ಮೇ ಹಾಗೂ ಜೂನ್‌ನಲ್ಲಿ 32 ಕೋಟಿ ರೂಗೆ ಏರಿಕೆಯಾಗಿತ್ತು.

English summary
Namma metro has been earned a high income from Independence Day Flower Show at Lalbagh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X