ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಪುಷ್ಪ ಪ್ರದರ್ಶನ: 3 ದಿನ ಪೇಪರ್ ಟಿಕೆಟ್ ನೀಡಲಿದೆ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು ಆಗಸ್ಟ್ 11: ಲಾಲ್‌ ಬಾಗ್‌ ಉದ್ಯಾನದಲ್ಲಿ ನಡೆಯುತ್ತಿರುವ 'ಫಲಪುಷ್ಪ ಪ್ರದರ್ಶನಕ್ಕೆ' ವಾರಾಂತ್ಯಕ್ಕೆ ಹೆಚ್ಚು ಜನ ಆಗಮಿಸುವ ಸಾಧ್ಯತೆ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ದಿನ ಮೆಟ್ರೋ ರೈಲು ಸಂಚಾರಕ್ಕೆ ಪೇಪರ್ ಟಿಕೆಟ್ ನಿಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷ್‌ನ (ಬಿಎಂಆರ್‌ಸಿಎಲ್) ತಿಳಿಸಿದೆ.

ಆಗಸ್ಟ್ 13ರ ಶನಿವಾರದಿಂದ ಆಗಸ್ಟ್ 15ರ ಸೋಮವಾರದವರೆಗೆ ಮೂರು ದಿನ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಬೇರೆ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಸಂಚರಿಸಲು ನೆರವಾಗುವಂತೆ ಪ್ರಯಾಣಿಕರಿಗೆ ಟೋಕನ್, ಸ್ಮಾರ್ಟ್‌ಕಾರ್ಡ್‌ ಬದಲಾಗಿ ಪೇಪರ್ (ಕಾಗದ) ಟಿಕೆಟ್ ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಅಲ್ಲದೇ ಮೂರು ದಿನ ಬೆಳಗ್ಗೆ 10ಗಂಟೆಯಿಂದ ರಾತ್ರಿ 8ಗಂಟೆವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಬೇರಾವುದೇ ನಿಲ್ದಾಣಕ್ಕೆ ತೆರಳಲು ಟಿಕೆಟ್ ದರವನ್ನು 30ರೂ. ನಿಗದಿ ಮಾಡಲಾಗಿದೆ. ಸದರಿ ದಿನಗಳಲ್ಲಿ ನಿತ್ಯ ಬೆಳಗ್ಗೆ 8ಗಂಟೆಯಿಂದ ಸಂಜೆ 6ಗಂಟೆವರೆಗೆ ಪೇಪರ್ ಟಿಕೆಟ್ ಖರೀದಿಸಬಹುದು. ಇನ್ನು ಲಾಲ್‌ಬಾಗ್‌ ನಿಲ್ದಾಣದಲ್ಲಿ ಮಾತ್ರ ರಾತ್ರಿ 8ಗಂಟೆವರೆಗೆ ಪೇಪರ್ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

Flower show 3 day paper ticket by BMRCL

ಪೇಪರ್ ಟಿಕೆಟ್ ಖರೀದಿಗೆ ಮಟ್ರೋ ಮನವಿ; ಲಾಲ್‌ಬಾಗ್‌ಗೆ ಭೇಟಿ ನೀಡುವ ಎಲ್ಲ ಪ್ರಯಾಣಿಕರು ಅಲ್ಲಿಂದ ಮರಳಿ ತೆರಳುವಾಗ ಪೇಪರ್ ಟಿಕೆಟ್ ಖರೀದಿಸಬೇಕು. ಅವುಗಳನ್ನು ಇತರ ನಿಲ್ದಾಣಗಳಿಂದ ನಿರ್ಗಮಿಸುವಾಗ ಹಾಜರುಪಡಿಸಬೇಕು ಎಂದು ಮೆಟ್ರೋ ನಿಗಮ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

Flower show 3 day paper ticket by BMRCL

ನಗರದ ಬೇರಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್‌ಬಾಗ್‌ ಉದ್ಯಾನಕ್ಕೆ ಬರುವವರು ಮೊದಲಿನಂತೆ ಟೋಕನ್, ಸ್ಮಾರ್ಟ್‌ಕಾರ್ಡ್ ಬಳಸಿ ಬರಬಹುದು. ಎಂದಿನಂತೆ ಸ್ಮಾರ್ಟ್‌ಕಾರ್ಡ್ ರಿಯಾಯಿತಿ ಇರಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

English summary
Lalbagh flower show 3 day paper ticket by Bangalore Metro Rail Corporation Limited (BMRCL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X