ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹದ ಭೀತಿ ಎದುರಿಸಿದ್ದ ಬೆಂಗಳೂರಿಗೆ ಶುಭ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 04: ಕರ್ನಾಟಕ ನೈಸರ್ಗಿಕ ನಿರ್ವಹಣಾ ಕೇಂದ್ರದಿಂದ ಸೋಮವಾರದಂದು ಬೆಂಗಳೂರಿಗರಿಗೆ ಶುಭ ಸುದ್ದಿ ಸಿಕ್ಕಿದೆ. ಹವಾಮಾನ ಕೇಂದ್ರ(KSNMDC) ನೀಡಿದ್ದ 24 ಗಂಟೆಗಳ ಪ್ರವಾಹ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸತತ ಮಳೆ ಸುರಿದಿದ್ದರಿಂದ ಪ್ರವಾಹ ಭೀತಿ ಎದುರಾಗಲಿದೆ, ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹವಾಮಾನ ಕೇಂದ್ರದಿಂದ ಭಾನುವಾರದಂದು ಮುನ್ಸೂಚನೆ ನೀಡಲಾಗಿತ್ತು.

ವಿವಿಧ ರಾಜ್ಯಗಳಲ್ಲಿ ಭಾರಿ ಮಳೆ, ಚಂಡಮಾರುತದ ಎಚ್ಚರಿಕೆವಿವಿಧ ರಾಜ್ಯಗಳಲ್ಲಿ ಭಾರಿ ಮಳೆ, ಚಂಡಮಾರುತದ ಎಚ್ಚರಿಕೆ

ಆದರೆ, ಬುಧವಾರ(ಜೂನ್ 06) ದ ತನಕ ಯಾವುದೇ ಪ್ರವಾಹ ಭೀತಿ ಇಲ್ಲ ಎಂದು ಕೆಎಸ್ಎನ್ ಡಿಎಂ ಕೇಂದ್ರದ ಯೋಜನಾ ವಿಜ್ಞಾನಿ ಶುಭ ಅವಿನಾಶ್ ಅವರು ಹೇಳಿದ್ದಾರೆ.

Flood Alert to Bengaluru withdrawn by KSNDMC

ಭಾನುವಾರದಂದು ಕೆಎಸ್ಎನ್ ಡಿಎಂ ಕೇಂದ್ರ ನೀಡಿದ್ದ ಎಚ್ಚರಿಕೆಯಿಂದ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ತಂಡ, ಟ್ರಾಫಿಕ್ ಪೊಲೀಸ್, ಬಿಬಿಎಂಪಿ ಅಲರ್ಟ್ ಆಗಿತ್ತು. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿತ್ತು.

ರಾಜ್ಯದೆಲ್ಲಡೆ ಮುಂಗಾರು ಆರಂಭ: ಜೂ.6ರಿಂದ ಮತ್ತಷ್ಟು ಚುರುಕುರಾಜ್ಯದೆಲ್ಲಡೆ ಮುಂಗಾರು ಆರಂಭ: ಜೂ.6ರಿಂದ ಮತ್ತಷ್ಟು ಚುರುಕು

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೂಡಾ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಳಿ, ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿತ್ತು.

ಅತಿ ಮಳೆಯಿಂದ ಸಂಕಷ್ಟ ಅನುಭವಿಸಬಾರದು ಎಂದರೆ ಹೀಗೆ ಮಾಡಿಅತಿ ಮಳೆಯಿಂದ ಸಂಕಷ್ಟ ಅನುಭವಿಸಬಾರದು ಎಂದರೆ ಹೀಗೆ ಮಾಡಿ

2017ರಲ್ಲಿ ಬೆಂಗಳೂರು ತತ್ತರಿಸುವಂಥ ಮಳೆ ಬಿದ್ದಿತ್ತು. ಈ ಬಗ್ಗೆ ಸರಿಯಾದ ಮುನ್ಸೂಚನೆ ನೀಡದ ಹವಾಮಾನ ಕೇಂದ್ರ (ಐಎಂಡಿ) ಬಗ್ಗೆ ಬಿಬಿಎಂಪಿ ಕಿಡಿಕಾರಿತ್ತು.

ರಾಜರಾಜೇಶ್ವರಿ ನಗರ, ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ವಲಯ, ಮಹದೇವಪುರ ವಲಯ, ಬೊಮ್ಮನಹಳ್ಳಿ ವಲಯಗಳ ಜನಭಾರಿ ಸಮಸ್ಯೆ ಎದುರಿಸಲಿದ್ದಾರೆ, ನಗರದ ತಗ್ಗು ಪ್ರದೇಶಕ್ಕೆ ಭಾರಿ ನೀರು ನುಗ್ಗಿ ಜನಜೀವನ ಅಸ್ಥವ್ಯಸ್ತಗೊಳ್ಳಬಹುದು ಎಂದು ರಾಷ್ಟ್ರೀಯ ವಿಪತ್ತು ನಿಗಾ ಸಂಸ್ಥೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Monsoon 2018: The 24-hour-flood alert issued by the Karnataka State Natural Disaster Monitoring Centre for Bengaluru(KSNDMC) has now been withdrawn said KSNDMC project scientist Subha Avinash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X