• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಭೂಮಿ ಪ್ರೀತಿ ಬೆಳೆಸಿದ್ದು ಬೆಂಗಳೂರು: ಶ್ರದ್ಧಾ ಶ್ರೀನಾಥ್

By Mahesh
|

ಬೆಂಗಳೂರು, ಜೂನ್ 19: ರಂಗಭೂಮಿಯೆಡೆಗಿನ ನನ್ನ ಪ್ರೀತಿಯನ್ನು ನಾನು ಬೆಂಗಳೂರಿನಲ್ಲಿ ಮತ್ತೊಮ್ಮೆ ಕಂಡುಕೊಂಡೆ ಎಂದು ನಟಿ ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಭರವಸೆಯ ನಟಿ, ಕಲೆಯ ಕುರಿತು ಒಲವು ಹೊಂದಿರುವ ಶ್ರದ್ಧಾ, ಬೆಂಗಳೂರು ಮತ್ತು ಕಲೆ ಒಟ್ಟಾಗಿಯೇ ಸಾಗಬೇಕು ಎನ್ನುತ್ತಾರೆ.

ಬೆಂಗಳೂರು ಟೈಮ್ಸ್ ಹಮ್ಮಿಕೊಂಡಿರುವ #FlirtWithYourCity ಅಭಿಯಾನದಲ್ಲಿ ಕನ್ನಡದ ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸುಮಾರು 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ, "ನಾನು ಸೈನಿಕ ಕುಟುಂಬದವಳಾದ ಕಾರಣ ಒಂದು ಸ್ಥಳದಿಂದ ಇನ್ನೊಂದೆಡೆಗೆ ವರ್ಗಾವಣೆ ಆಗುತ್ತಲೇ ಇರುತ್ತೇನೆ. ನಾನು ಬೆಂಗಳೂರಿಗೆ ಬಂದ ಬಳಿಕವೇ ನಾನು ಹಲವಾರು ವಿಷಯಗಳನ್ನು ಮಿಸ್ ಮಾಡಿಕೊಂಡೆ ಎಂದು ನನಗನಿಸಿದ್ದು, ಸದ್ಯ ನಾನು ನನ್ನನ್ನು ಬೆಂಗಳೂರಿಗಳು ಎಂದು ಕರೆಸಿಕೊಳ್ಳುತ್ತೇನೆ" ಎಂದರು.

ಬಳಿಕ ಮಾತನಾಡಿದ ಶ್ರದ್ಧಾ, ಕಲಾವಿದೆಯಾಗಿ ನನ್ನ ಮೇಲೆ ಬೆಂಗಳೂರು ತುಂಬಾನೇ ಪ್ರಭಾವ ಬೀರಿದೆ. ನಾನು ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಎರಡನ್ನೂ ಇಷ್ಟಪಡುತ್ತೇನೆ. ಹೆಚ್ಚಾಗಿ ನಾನು ರಂಗಭೂಮಿಯನ್ನು ಇಷ್ಟಪಡಲು ಪ್ರಾರಂಭಿಸಿದೆ. ಓರ್ವ ವ್ಯಕ್ತಿಯು ತನ್ನನ್ನು ಕಂಡುಕೊಳ್ಳಬೇಕೆಂದರೆ ರಂಗಭೂಮಿಯು ಸಹಕಾರಿಯಾಗಿದೆ ಎನ್ನುತ್ತಾರೆ ಶ್ರದ್ದಾ.

ಬೆಂಗಳೂರಿನ ಕುರಿತು ತನ್ನಲ್ಲಿರುವ ಒಲವಿನ ಕುರಿತು ಮಾತನಾಡುವ ಶ್ರದ್ದಾ, ಯಾರಾದರೂ ಬೆಂಗಳೂರಿನ ಕುರಿತು ಏನಾದರೂ ಕೆಟ್ಟದ್ದನ್ನು ಹೇಳಿದ ಕೂಡಲೇ ತಮ್ಮ ನಗರದ ರಕ್ಷಣೆಗೆ ನಿಲ್ಲುತ್ತಾರೆ. ಹಲವಾರು ಪ್ರದೇಶಗಳಿಗೆ ಶ್ರದ್ಧಾ ತೆರಳುತ್ತಿದ್ದರೂ ಕೊನೆಗೆ ಬೆಂಗಳೂರಿಗೆ ಬಂದು ತಲುಪುತ್ತಾರೆ. ಬೆಂಗಳೂರು ನಗರವು ಅಭಿವೃದ್ಧಿ, ಬದಲಾವಣೆಗಳನ್ನು ಕಾಣುತ್ತಿದ್ದರೂ, ನಗರದಲ್ಲಿ ನಡೆಯುವ ಯಾವುದೇ ಕಾರ್ಯವನ್ನೂ ಮಿಸ್ ಮಾಡಲು ಶ್ರದ್ಧಾ ತಯಾರಿಲ್ಲ. ಶ್ರದ್ಧಾ ಬೆಂಗಳೂರನ್ನು ಪ್ರೀತಿಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prominent Kannada actress, Shraddha Srinath has an avid love for art. She believes that the city of Bangalore and art go hand-in-hand.In conversation with Shraddha about Bangalore Times’ #FlirtWithYourCity campaign, she shared that she came to Bangalore almost 10 years ago
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more