ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸ್ತುಗಳ ಬದಲು ಕಲ್ಲು, ಮಣ್ಣು ಪೊಲೀಸರ ಮೊರೆ ಹೋದ ಫ್ಲಿಪ್‌ಕಾರ್ಟ್

By Nayana
|
Google Oneindia Kannada News

ಬೆಂಗಳೂರು, ಜೂನ್ 8: ವಸ್ತುಗಳ ಬದಲಾಗಿ ಕಲ್ಲು ಮಣ್ಣುಗಳನ್ನು ಡೆಲಿವರಿ ಮಾಡಲಾಗುತ್ತಿದೆ ಎಂದು ಇ-ಕಾಮರ್ಸ್‌ನ ಮುಂಚೂಣಿಯಲ್ಲಿರುವ ಫ್ಲಿಪ್‌ ಕಾರ್ಟ್ ಕಂಪನಿ ಮೇಲೆ ಗ್ರಾಹಕರ ವಲಯಗಳಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಮೇಲೆ ಫ್ಲಿಪ್‌ ಕಾರ್ಟ್ ನೋಡಲ್ ಅಧಿಕಾರಿ ದೂರು ದಾಖಲಿಸಿದ್ದಾರೆ.

ಆನ್‌ಲೈನ್‌ ಮೂಲಕ ಮೊಬೈಲ್, ಕ್ಯಾಮರಾ ಇನ್ನಿತರೆ ವಸ್ತುಗಳನ್ನು ಬುಕ್ ಮಾಡಿದರೆ ಕಲ್ಲು, ಮಣ್ಣು ಗ್ರಾಕರಿಗೆ ಲಭ್ಯವಾಗಿರುವ ಕುರಿತು ಹಲವಾರು ದೂರುಗಳು ಬಂದಿವೆ. ಈ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ 1.6 ಕೋಟಿ ರೂ.ನಷ್ಟು ನಷ್ಟ ಅನುಭವಿಸುತ್ತಿದೆ. ಗ್ರಾಹಕರು ಆರ್ಡರ್‌ ಮಾಡಿದ ವಸ್ತುಗಳ ಬದಲು ಕಲ್ಲು, ಮಣ್ಣನ್ನು ನೀಡಿದ್ದಕ್ಕೆ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸಿದೆ. ಇದರಿಂದ ನಷ್ಟ ಅನುಭವಿಸಿದೆ.

ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್

ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, 2016 ರಿಂದ 2017 ರವರೆಗೆ ಎಷ್ಟು ನಷ್ಟವಾಗಿದೆ ಎನ್ನುವುದರ ಕುರಿತು ಮಾಹಿತಿ ನೀಡಿದ್ದು ಫ್ಲಿಪ್‌ಕಾರ್ಟ್‌ನ ನೋಡಲ್ ಆಫೀಸರ್ ಎಸ್‌ಎನ್ ಮೂರ್ತಿ ದೂರು ದಾಖಲಿಸಿದ್ದಾರೆ.

Flipkart smells racket in ‘stone’ delivery complaints

ಪೊಲೀಸರ ಮಾಹಿತಿ ಪ್ರಕಾರ ಗ್ರಾಹಕರು ಮೊಬೈಲ್‌, ಕ್ಯಾಮರಾದಂತಹ ಹೆಚ್ಚು ಬೆಲೆಯ ವಸ್ತುಗಳನ್ನು ಆನಲೈನ್‌ ಮೂಲಕ ಖರೀದಿಸಿದ್ದಾರೆ. ಆದರೆ ಗ್ರಾಹಕರು ನಂತರ ವಸ್ತುಗಳ ಬದಲಿಗೆ ಕಲ್ಲು, ಮಣ್ಣುಗಳನ್ನು ಪಡೆದಿರುವುದಾಗಿ ದೂರು ನೀಡಿದ್ದಾರೆ. ಕೆಲವು ತಮಗೆ ದೊರೆತ ಕಲ್ಲುಗಳ ಫೋಟೋವನ್ನು ತೆಗೆದು ಕಳುಹಿಸಿದ್ದಾರೆ.

ಕಂಪನಿಯು ಗ್ರಾಹಕರಿಂದ ಯಾವುದನ್ನೂ ಪ್ರಶ್ನಿಸಿದರೆ ಹಣವನ್ನು ಹಿಂದಿರುಗಿಸಿದ್ದಾರೆ. ಕಂಪನಿಯಲ್ಲಿ ಕೆಲವು ಟೀಮ್ ಈ ರೀತಿಯ ಕೆಲಸಗಳನ್ನು ಮಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

English summary
E-commerce major Flipkart alleged it suffered over Rs 1.6-crore loss in less than two years due to refunding customers who claimed they received stones and mud instead of the items ordered. Cybercrime police registered a case on Tuesday against unknown persons based on a complaint lodged by Murthy SN, nodal officer, Flipkart Internet Pvt Ltd. Flipkart had sustained these losses from January 1, 2016 to November 3, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X