ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲಿಪ್‍ಕಾರ್ಟ್‍ನಿಂದ ಭಾರತದ ಮೊದಲ ರೋಬೋಟಿಕ್ ವೇರ್ ಹೌಸ್

|
Google Oneindia Kannada News

ಬೆಂಗಳೂರು, ಮಾರ್ಚ್ 20: ಭಾರೀ ಗಾತ್ರದ ವಸ್ತುಗಳನ್ನು ಲೋಡ್ ಮಾಡುವುದು, ಅನ್‍ಲೋಡ್ ಮಾಡುವುದು, ಪ್ಯಾಕಿಂಗ್ ಮಾಡುವುದು ಸೇರಿದಂತೆ ಇನ್ನಿತರೆ ಕೆಲಸಗಳನ್ನು ನಿರ್ವಹಿಸುವ ರೀತಿಯಲ್ಲಿ ನಮ್ಮ ತಂತ್ರಜ್ಞರು ರೋಬೋಟ್‍ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಇಂಥ ರೋಬೋಟ್ ಅನ್ನು ಇದೇ ಮೊದಲ ಬಾರಿಗೆ ವಸ್ತುಗಳನ್ನು ಪ್ಯಾಕ್ ಮಾಡುವುದು ಸೇರಿದಂತೆ ಇನ್ನಿತರೆ ಕಾರ್ಯಗಳಿಗಾಗಿ ಪರಿಚಯಿಸಲಾಗಿದೆ. ದೇಶದ ಅತ್ಯಂತ ದೊಡ್ಡ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್‍ಕಾರ್ಟ್ ತನ್ನ ವೇರ್ ಹೌಸ್ 'ಸೌಖ್ಯ'ದಲ್ಲಿ ಈ ರೋಬೋಟ್‍ನ ಬಳಕೆಯನ್ನು ಆರಂಭಿಸಿದೆ. ಕೈಗಾರಿಕಾ ಕ್ಷೇತ್ರ ಬದಲಾವಣೆಯತ್ತ ಸಾಗುತ್ತಿದ್ದರೆ ಫ್ಲಿಪ್‍ಕಾರ್ಟ್ ಕೂಡ ಬದಲಾವಣೆಗೆ ಪೂರಕವಾದ ಹೆಜ್ಜೆ ಇಟ್ಟಿದೆ.

ಮಿಂತ್ರಾ.ಕಾಂನ ಸಿಇಒ ಸ್ಥಾನ ತೊರೆದ ಅನಂತ್ ನಾರಾಯಣ್ ಮಿಂತ್ರಾ.ಕಾಂನ ಸಿಇಒ ಸ್ಥಾನ ತೊರೆದ ಅನಂತ್ ನಾರಾಯಣ್

ಈ ಮೂಲಕ ದೇಶದ ಮೊದಲ ರೋಬೋಟ್ ಆಧಾರಿತ ವಿಂಗಡಣೆ ತಂತ್ರಜ್ಞಾನವಾದ ಆಟೋಮೇಟೆಡ್ ಗೈಡೆಡ್ ವೆಹಿಕಲ್ಸ್ (ಎಜಿವಿ) ಅನ್ನು ತನ್ನ ಬೆಂಗಳೂರಿನ ಸೌಖ್ಯ ವಿಂಗಡಣಾ ಕೇಂದ್ರದಲ್ಲಿ ಅಳವಡಿಕೆ ಮಾಡಿಕೊಂಡಿದೆ.

Flipkart introduces 100 robots in its Bengaluru delivery centre

ಇ-ಕಾಮರ್ಸ್ ಕಡೆಗೆ ಹೆಚ್ಚು ಹೆಚ್ಚು ಗ್ರಾಹಕರು ಒಲವು ತೋರುತ್ತಿದ್ದಾರೆ ಮತ್ತು ಆನ್‍ಲೈನ್‍ಗೆ ಇನ್ನೂ 200 ದಶಲಕ್ಷ ಶಾಪರ್ ಗಳನ್ನು ತರಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಮತ್ತು ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಬೇಕಾದರೆ ಪೂರೈಕೆ ಜಾಲದಲ್ಲಿ ಆವಿಷ್ಕಾರಕ ಮತ್ತು ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

ತಂತ್ರಜ್ಞಾನ ಆಧಾರಿತ ಕಂಪನಿಯಾಗಿರುವ ಫ್ಲಿಪ್‍ಕಾರ್ಟ್ ನಿರಂತರವಾಗಿ ತನ್ನ ಪೂರೈಕೆ ಜಾಲದಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಈ ಎಜಿವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಉಪಕ್ರಮಗಳನ್ನು ಕೈಗೊಂಡಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಫ್ಲಿಪ್‍ಕಾರ್ಟ್ ಪಾತ್ರವಾಗಿರುವುದಲ್ಲದೇ ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಭವಿಷ್ಯದ ಅತ್ಯುತ್ಕೃಷ್ಠವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಇ-ಸಂಚಾರಕ್ಕಾಗಿ ಕಾರ್ಯತಂತ್ರಗಳೇನು : ಜಾರ್ಜ್ ರಿಂದ ರೂಪುರೇಷೆ ರಾಜ್ಯದಲ್ಲಿ ಇ-ಸಂಚಾರಕ್ಕಾಗಿ ಕಾರ್ಯತಂತ್ರಗಳೇನು : ಜಾರ್ಜ್ ರಿಂದ ರೂಪುರೇಷೆ

* ಸೌಖ್ಯದಲ್ಲಿ ಸುಮಾರು 1000 ಸಿಬ್ಬಂದಿ ಇದ್ದು, ದಿನವೊಂದಕ್ಕೆ ಲಕ್ಷಗಟ್ಟಲೆ ಶಿಪ್‍ಮೆಂಟ್‍ಗಳನ್ನು ನಿಭಾಯಿಸುತ್ತಿದ್ದಾರೆ.

* ಎಜಿವಿಗಳು ಇಲ್ಲಿರುವ ಸಿಬ್ಬಂದಿ ಜತೆಗೂಡಿ ಕೆಲಸ ಮಾಡಲಿವೆ. ಈ ಎಜಿವಿಗಳನ್ನು ಆಪರೇಟ್ ಮಾಡುವ ಸಂಬಂಧ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ.

* 100 ಎಜಿವಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಇವುಗಳು ಶೇ.60 ರಷ್ಟು ಪ್ರಕ್ರಿಯೆ ದಕ್ಷತೆಯನ್ನು ಹೆಚ್ಚಿಸುತ್ತವೆ ಎಂಬುದು ದೃಢಪಟ್ಟಿದೆ.

* ಈ ಎಜಿವಿಗಳು ಪ್ರತಿ ಗಂಟೆಗೆ 4,500 ಶಿಪ್‍ಮೆಂಟ್‍ಗಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದು, ಸಣ್ಣ ಪುಟ್ಟ ಬದಲಾವಣೆಯೊಂದಿಗೆ 5 ಪಟ್ಟಿಗೂ ಅಧಿಕ ಕೆಲಸ ಮಾಡಲಿವೆ. ಇವುಗಳ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಸ್ಥಳದಲ್ಲಿ ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದಾಗಿದೆ.

* ಭವಿಷ್ಯದ ಬೇಡಿಕೆಗಳನ್ನು ತ್ವರಿತವಾಗಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಈ ಎಜಿವಿಗಳು ನೆರವಾಗುತ್ತವೆ.

* ಇವುಗಳ ನೆರವಿನಿಂದ ಫ್ಲಿಪ್‍ಕಾರ್ಟ್ ತನ್ನ ಅಗತ್ಯಗಳನ್ನು ತ್ವರಿತವಾಗಿ ಪೂರೈಸಿಕೊಂಡು ಗ್ರಾಹಕರಿಗೆ ಕ್ಷಿಪ್ರಗತಿಯಲ್ಲಿ ತಲುಪಿಸಬಹುದಾಗಿದೆ ಮತ್ತು ಇದರ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಮತ್ತು ಕಂಪನಿಯ ಮೌಲ್ಯವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ.

ಸೌಖ್ಯದಲ್ಲಿ 100 ಕ್ಕೂ ಹೆಚ್ಚು ಸ್ವಯಂಚಾಲಿತ ರೋಬೋಟ್‍ಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ರೋಬೋಟ್‍ಗಳು ಪ್ರತಿ ಪ್ಯಾಕೇಜ್‍ನಲ್ಲಿ ನೀಡಿರುವ ಎನ್‍ಕೋಡೆಡ್ ಮಾಹಿತಿಗಳನ್ನು ಗುರುತಿಸುವ ಮೂಲಕ ಗ್ರಾಹಕರ ಪಿನ್‍ಕೋಡ್ ಆಧಾರದಲ್ಲಿ ವಿಂಗಡಿಸುತ್ತದೆ.

English summary
Flipkart has deployed a swarm of 100 odd robots to help sort packages at one of its delivery hubs in the outskirts of Bengaluru, the first such instance of the Walmart-owned e-commerce giant deploying robotics to streamline its supply chain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X