ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲಿಪ್ ಕಾರ್ಟ್ ಮತ್ತು ಗಿವ್ ಇಂಡಿಯಾದವರಿಂದ ಪಿಪಿಇ ಕಿಟ್ ದೇಣಿಗೆ

|
Google Oneindia Kannada News

ಬೆಂಗಳೂರು, ಮೇ 8: ದೇಶದ ಪ್ರಮುಖ ಇ-ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಹಾಗೂ ಗಿವ್ ಇಂಡಿಯಾ ಸಂಸ್ಥೆಯವರು ಇಂದ ಪಿಪಿಇ ಕಿಟ್ ಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.

Recommended Video

ಫ್ಲಿಪ್‌ಕಾರ್ಟ್ ನಲ್ಲಿ 70 ಸಾವಿರದ ಗೂಗಲ್ ಫೋನ್ 11 ಸಾವಿರಕ್ಕೆ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಜನತೆಗೆ ಎಲ್ಲ ರೀತಿಯ ನೆರವು ನೀಡಲು ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ.

ಬೆಂಗಳೂರಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಫ್ಲಿಪ್ ಕಾರ್ಟ್-ಮೆರು ಒಪ್ಪಂದ ಬೆಂಗಳೂರಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಫ್ಲಿಪ್ ಕಾರ್ಟ್-ಮೆರು ಒಪ್ಪಂದ

ಈ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ. ಫ್ಲಿಪ್ ಕಾರ್ಟ್ ಹಾಗೂ ಗಿವ್ ಇಂಡಿಯಾ ಸಂಸ್ಥೆಯವರು 2 ಲಕ್ಷ ಪಿಪಿಇ ಕಿಟ್ ಗಳನ್ನು ವಿತರಿಸಲು ಸಮ್ಮತಿಸಿದ್ದು, ಇಂದು 70500 ಪಿಪಿಇ ಕಿಟ್ ಗಳನ್ನು ನೀಡಿರುವುದು ರಾಜ್ಯದ ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲಿದೆ ಎಂದು ತಿಳಿಸಿದರು.

Flipkart and Give India donotes PPE Kits to Government of Karnataka

ಫ್ಲಿಪ್ ಕಾರ್ಟ್ ಸಂಸ್ಥೆಯ ಸಿಇಓ ಕಲ್ಯಾಣ್ ಕೃಷ್ಣಮೂರ್ತಿ ಅವರು ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್ 19 ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ವಹಿಸಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಫ್ಲಿಪ್ ಕಾರ್ಟ್ ಬೆಂಗಳೂರು ಮೂಲದ ಕಂಪೆನಿಯಾಗಿದೆ. ಆದ್ದರಿಂದ ರಾಜ್ಯದ ಕೋವಿಡ್ ನಿಯಂತ್ರಣದ ಪ್ರಯತ್ನಗಳಲ್ಲಿ ಕೈಜೋಡಿಸುತ್ತಿದೆ ಎಂದು ತಿಳಿಸಿದರು.

Flipkart and Give India donotes PPE Kits to Government of Karnataka

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಫ್ಲಿಪ್ ಕಾರ್ಟ್ ಕಂಪೆನಿಯ ನೀಲ್ ಕ್ಯಾಸ್ಟಲಿನೊ ಮೊದಲಾದವರು ಉಪಸ್ಥಿತರಿದ್ದರು.

English summary
Flipkart and Give India today donoted PPE Kits to Government of Karnataka, CM BS Yediyurappa received the kit and said, companies have joined hands to fight against covid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X