• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಿಂದ ಜಪಾನ್‌ಗೆ ಜೂನ್‌ನಿಂದ ನೇರ ವಿಮಾನ ಸೇವೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 7: ಬೆಂಗಳೂರು ಹಾಗೂ ಜಪಾನ್ ನಡುವೆ ನೇರ ವಿಮಾನ ಹಾರಾಟ ಜೂನ್‌ನಿಂದ ಪ್ರಾರಂಭವಾಗಲಿದೆ.

ಐಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ, ಸಿಲಿಕಾನ್‌ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ದೇಶ, ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನಿನ ಟೋಕಿಯೋ ನಡುವೆ ನೇರ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಲಾಗಿದೆ ಎಂದು ಜಪಾನ್‌ ಏರ್‌ಲೈನ್ಸ್‌ ಪ್ರಕಟಿಸಿದೆ.

ಇಂಡಿಗೋದಿಂದ 14 ಹೊಸ ವಿಮಾನಗಳು; ಇಲ್ಲಿದೆ ವಿವರ...ಇಂಡಿಗೋದಿಂದ 14 ಹೊಸ ವಿಮಾನಗಳು; ಇಲ್ಲಿದೆ ವಿವರ...

ಜಪಾನ್‌ಗೆ ನೇರವಾಗಿ ವಿಮಾನಗಳ ಹಾರಾಟ ಸೇವೆ ಕಲ್ಪಿಸುವುದರಿಂದ ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಬೋಯಿಂಗ್ 787-88, ಹಾಗೂ ಜೆಎಲ್‌753 ವಿಮಾನ ಈ ನಡುವೆ ಹಾರಾಟ ನಡೆಸಲಿವೆ.

ದೆಹಲಿ ಮತ್ತು ಮುಂಬೈ ನಂತರ ಅತಿ ಹೆಚ್ಚು ಪ್ರಯಾಣಿಕರು ಹಾರಾಟ ನಡೆಸುವ ಮೂರನೇ ವಿಮಾನ ನಿಲ್ದಾಣ ಎಂಬ ಪ್ರಶಂಸೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ದಕ್ಷಿಣ ಭಾರತದ ಇತರೆ ವಿಮಾನ ನಿಲ್ಧಾಣಗಳಿಗಿಂತ ಬೆಂಗಳೂರಿನ ವಾತಾವರಣ ಹಿತಕರವಾಗಿದೆ. ಇದರ ಜತೆಗೆ ಆಟೋಮೊಬೈಲ್‌, ಬಯೋಟೆಕ್ನಾಲಜಿ, ಟೆಲಿಕಮ್ಯೂನಿಕೇಷನ್‌ ನಂಥ ವಿಶ್ವದ ನಾನಾ ಸಂಸ್ಥೆಗಳು ಬೆಂಗಳೂರಿಗೆ ಹೆಚ್ಚಿಗೆ ಪ್ರಯಾಣ ಬೆಳೆಸುವುದರಿಂದ ಜಪಾನ್‌ಗೆ ನೇರ ವಿಮಾನ ಸೇವೆ ಕಲ್ಪಿಸಲಾಗಿದೆ ಎಂದು ಜಪಾನ್‌ ಏರ್‌ಲೈನ್ಸ್‌ ಪ್ರಕಟಣೆ ತಿಳಿಸಿದೆ.

   #Covid19Updates: ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ.. ಬರೋಬ್ಬರಿ 6976 ಜನರಿಗೆ ಸೋಂಕು | Oneindia Kannada

   ಟೋಕಿಯೋ ಮತ್ತು ಬೆಂಗಳೂರು ನಡುವೆ ನೇರ ವಿಮಾನಗಳು ಹಾರಾಟ ನಡೆಸುವುದರಿಂದ ಕರ್ನಾಟಕ ಮತ್ತು ಜಪಾನ್‌ ನಡುವಿನ ಆರ್ಥಿಕ ವೃದ್ಧಿಗೆ ಸಹಕಾರಿಯಾಗಿವುದು ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ. ಇದರ ಜತೆಗೆ ನೇರ ಮತ್ತು ಪರೋಕ್ಷವಾಗಿ ಸಾಕಷ್ಟು ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.

   English summary
   Come June, Bengaluru will be connected to a news international destination Tokyo. While flight services by Japan Airlines were to commence between the two cities last year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X