ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗೆ ಆದ್ಯತೆ: ನಂದನ್

By Mahesh
|
Google Oneindia Kannada News

ಬೆಂಗಳೂರು, ಏ.13: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಅವರು ನಗರಾಭಿವೃದ್ಧಿ, ಹೆಚ್ಚಿನ ಉದ್ಯೋಗ ಸೃಷ್ಟಿ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (‍ಫಿಕ್ಕಿ - ಫೆಡರೇಶನ್ ಆಫ್ ಕರ್ನಾಟಕ ಛೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ)ದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದರು.

ನಂದನ್ ಸಂಸದರಾಗಿ ಏನು ಮಾಡಬೇಕೆಂದಿರುವೆ ಎಂಬುದನ್ನು ವಿವರಿಸಿದ್ದು ಹೀಗೆ, ಬೆಂಗಳೂರಿನ ಅಭಿವೃದ್ಧಿಗೆ ನನ್ನ ಆದ್ಯತೆಗಳಲ್ಲಿ ಒಂದು ಎಂದರೆ ನಗರಕ್ಕೆ ಅಗತ್ಯವಿರುವ ಹೂಡಿಕೆಯು ಹರಿದು ಬರುವಂತೆ ಮಾಡುವುದು, ಉತ್ತಮ ಉದ್ಯೋಗಾವಕಾಶಗಳು ಮತ್ತು ಒಂದು ಆರೋಗ್ಯಕರ ಉದ್ಯಮದ ಬೆಳವಣಿಗೆಗಾಗಿ ಪ್ರಯತ್ನಿಸುತ್ತೇನೆ. ಇದು ನನ್ನ ಪ್ರಣಾಳಿಕೆಯ ಮೂರು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]

ನಂದನ್ ನಿಲೇಕಣಿ ಅವರಿಗೆ FKCCIನಿಂದ ಸನ್ಮಾನ

ನಂದನ್ ನಿಲೇಕಣಿ ಅವರಿಗೆ FKCCIನಿಂದ ಸನ್ಮಾನ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (‍ಫಿಕ್ಕಿ - ಫೆಡರೇಶನ್ ಆಫ್ ಕರ್ನಾಟಕ ಛೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ) ಸದಸ್ಯರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಅವರಿಗೆ ಸನ್ಮಾನ

ಜನರು ದೊಡ್ಡ ಕನಸುಗಳನ್ನು ಇಟ್ಕೊಂಡಿದ್ದಾರೆ

ಜನರು ದೊಡ್ಡ ಕನಸುಗಳನ್ನು ಇಟ್ಕೊಂಡಿದ್ದಾರೆ

ಜನರು ದೊಡ್ಡ ಕನಸುಗಳನ್ನು ಇಟ್ಕೊಂಡಿದ್ದಾರೆ. ನಾವು ಅವರಿಗೆ ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳೋ ಒಂದು ಅವಕಾಶವನ್ನು ಕೊಡಬೇಕಾಗಿದೆ ಅಷ್ಟೆ ಎಂದು ನಂದನ್ ತಮ್ಮ ಭಾಷಣದಲ್ಲಿ ಹೇಳಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

ನಂದನ್ ನಿಲೇಕಣಿಯವರು ಕೋರಮಂಗಲದ ಕೃಪಾನಿಧಿ ಕಾಲೇಜು ಮತ್ತು ಏಷ್ಯಾ ಪೆಸಿಫಿಕ್ ವರ್ಲ್ಡ್ ಸ್ಕೂಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ನಗರದಲ್ಲಿ ಪ್ರತಿಭೇಗೇನೂ ಬರವಿಲ್ಲ

ನಮ್ಮ ನಗರದಲ್ಲಿ ಪ್ರತಿಭೇಗೇನೂ ಬರವಿಲ್ಲ

ನಾನು ಭೇಟಿಯಾದ ಯುವಜನರು, ಶಿಕ್ಷಕರು, ಗಾರ್ಮೆಂಟ್ ಕಾರ್ಮಿಕರು, ಆಟೋ ಚಾಲಕರು, ವಿದ್ಯಾರ್ಥಿಗಳು, ಕೆಳ-ಆದಾಯ ವರ್ಗದವರು, ಹೀಗೆ ಎಲ್ಲರೂ ಹೇಳ್ತಾ ಇದ್ದಿದ್ದು ಒಂದೇ - ತಾವು ಏಳಿಗೆಯಾಗಲು ಸೂಕ್ತ ಅವಕಾಶಗಳು ಬೇಕಾಗಿದೆ ಎಂದರು.

ಬೆಂಗಳೂರಿನ ಅಭಿವೃದ್ಧಿಗೆ ನನ್ನ ಆದ್ಯತೆ

ಬೆಂಗಳೂರಿನ ಅಭಿವೃದ್ಧಿಗೆ ನನ್ನ ಆದ್ಯತೆ

ಬೆಂಗಳೂರಿನ ಅಭಿವೃದ್ಧಿಗೆ ನನ್ನ ಆದ್ಯತೆಗಳಲ್ಲಿ ಒಂದು ಎಂದರೆ ನಗರಕ್ಕೆ ಅಗತ್ಯವಿರುವ ಹೂಡಿಕೆಯು ಹರಿದು ಬರುವಂತೆ ಮಾಡುವುದು.

English summary
Bangalore South Congress candidate Nandan Nilekani addressed a gathering at FKCCI (Federation of Karnataka Chambers of Commerce and Industry) on Apr 12. He also met with hundreds of students from 'Krupanidhi College' and 'Asia Pacific World School.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X