ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಗೇರಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಐವರ ಬಂಧನ

|
Google Oneindia Kannada News

ಬೆಂಗಳೂರು, ಮೇ 27 : ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದ ಐವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದು, ಅವರಿಂದ ನಗದು ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಕೋಡಿಪಾಳ್ಯ-ಹೆಮ್ಮಿಗೆಪುರದ ಕೋಣೆಯೊಂದರಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಕೇಂದ್ರ ಅಪರಾಧ ವಿಭಾಗ (ಸಿ.ಸಿ.ಬಿ) ವಿಶೇಷ ವಿಚಾರಣಾ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದಾರೆ.

ಎಟಿಎಂಗೆ ತುಂಬಬೇಕಿದ್ದ 1 ಕೋಟಿ ಕದ್ದು ಪರಾರಿಯಾಗಿದ್ದವರ ಬಂಧನಎಟಿಎಂಗೆ ತುಂಬಬೇಕಿದ್ದ 1 ಕೋಟಿ ಕದ್ದು ಪರಾರಿಯಾಗಿದ್ದವರ ಬಂಧನ

ಹಣ ಪಣಕ್ಕಿಟ್ಟು ಜೂಜಾಟ ಆಡುತ್ತ ಸಿಕ್ಕಿಬಿದ್ದವರು, ಉಮೇಶ್ ಬಿನ್ ಮಾಯಿಗೌಡ, 32 ವರ್ಷ, ಶಶಿ ಕುಮಾರ್ ಬಿನ್ ಮಂಜುನಾಥ್, ವೆಂಕಟೇಶ ಬಿನ್ ಗೋವಿಂದ, 22 ವರ್ಷ, ನಾರಾಯಣ ಬಿನ್ ಮಾಯಣ್ಣಗೌಡ, 34 ವರ್ಷ ಮತ್ತು ಮಂಜೇಶ್ ಬಿನ್ ಪುಟ್ಟಸ್ವಾಮಿ, 31 ವರ್ಷ.

Five people arrested for playing andar-bahar in Kengeri

ಇವರುಗಳನ್ನು ವಶಕ್ಕೆ ಪಡೆದು ಇವರ ವಶದಿಂದ ಅಲ್ಲಿ ಜೂಜಾಟಕ್ಕೆ ತೊಡಗಿಸಿದ್ದ ನಗದು 43,530 ರು. ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಯಲ್ಲಿರುತ್ತದೆ.

ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ರವರಾದ ಅಲೋಕ್ ಕುಮಾರ್ ಐ.ಪಿ.ಎಸ್. ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ ವಿಭಾಗದವರಾದ ಎಸ್. ಗಿರೀಶ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಸಿಸಿಬಿ, ವಿಶೇಷ ವಿಚಾರಣಾ ದಳದ ವಿಶೇಷ ವಿಚಾರಣಾದಳದ ಎಸಿಪಿ ಎನ್. ಎಚ್.ರಾಮಚಂದ್ರಯ್ಯರವರ ಮುಂದಾಳತ್ವದಲ್ಲಿ ಇನ್ಸ್‌ಪೆಕ್ಟರ್ ಶರಣಪ್ಪ ಹದ್ಲಿ ಮತ್ತು ಸಿಬ್ಬಂದಿಯವರುಗಳಾದ ರವಿಕುಮಾರ್.ಪಿ, ಅಶೋಕ್, ರವಿಕುಮಾರ್ ಮತ್ತು ವಿನೋದ್ ಕುಮಾರ್ ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

English summary
Five people have been arrested by CCB police for playing andar-bahar in Kengeri police station limit. More than 40 thousand rupees too has been impounded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X