ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ, 5 ನೈಜೀರಿಯಾ ಪ್ರಜೆಗಳ ಬಂಧನ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 22: ಮಾದಕ ವಸ್ತು ಜಾಲವನ್ನು ಭೇದಿಸಿರುವ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಬುಧವಾರ ಐವರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಬುಧವಾರ ರಾತ್ರಿ ದೊರೆತ ಖಚಿತ ಮೂಲದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನ ಕಲ್ಕೆರೆ ಮುಖ್ಯ ರಸ್ತೆಯ ಮನೆಯಲ್ಲಿ ಈ ಐವರನ್ನು ಬಂಧಿಸಿದ್ದಾರೆ.

Five Nigerians arrested for selling drugs in Bengaluru

ಬಂಧಿತರಿಂದ ಮಾದಕ ವಸ್ತುಗಳಾದ 6.4 ಗ್ರಾಂ ತೂಕದ ಕೊಕೇನ್, 0.8 ಗ್ರಾಂ ತೂಕದ ಕೆಟಮಿನ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 14 ಮೊಬೈಲ್‍ಗಳು, ಮೂರು ಪಾಸ್‍ಪೋರ್ಟ್, 03 ದ್ವಿಚಕ್ರ ವಾಹನಗಳು, ನಗದು ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಆರೋಪಿಗಳ ವಿರುದ್ದ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

English summary
The Bengaluru City Crime Branch Police arrested five Nigerian youth for allegedly selling cocaine and drugs in the city. Cocaine, Ketamin and items worth Rs 2.5 lakh was recovered from the home of the accused in Ramamurthy Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X