ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ 5 ಮಂದಿ ಹೊಸ ಪೊಲೀಸ್ ಕಮಿಷನರ್ ನೇಮಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿಗೆ ಇಂದು ಐದು ಮಂದಿ ಹೊಸ ಪೊಲೀಸ್ ಆಯುಕ್ತರ ನೇಮಕವಾಗಿದೆ. ಹಾಗಾದರೆ ಅವರು ಯಾರು ಅಂತೀರಾ.. ಅವರೇ ಪುಟ್ಟ ಮಕ್ಕಳು..ಮಕ್ಕಳು ಹೇಹೆ ಪೊಲೀಸ್ ಆಯುಕ್ತರಾಗ್ತಾರೆ ಎಂದು ತಿಳಿಯಲು ಸುದ್ದಿ ಓದಿ..

ಒಂದೇ ಬಾರಿಗೆ ಅಷ್ಟೂ ಪೊಲೀಸ್​ ಆಯುಕ್ತರು ಅಧಿಕಾರ ಚಲಾವಣೆ ಮಾಡಲಿದ್ದಾರೆ. ಆದರೆ ಈ ಬಾರಿ ಕಮಿಷನರ್​ ನೇಮಕ ಮಾಡುತ್ತಿರುವುದು ಸರ್ಕಾರ ಅಲ್ಲ, ಪೊಲೀಸ್​ ಆಯುಕ್ತ​ ಭಾಸ್ಕರ್​ ರಾವ್​ ಅವರು.

ಮಕ್ಕಳೊಂದಿಗೆ ಬುಗುರಿ ಆಡಿದ ಪೊಲೀಸ್ ಕಮೀಷನರ್ಮಕ್ಕಳೊಂದಿಗೆ ಬುಗುರಿ ಆಡಿದ ಪೊಲೀಸ್ ಕಮೀಷನರ್

ಗಂಭೀರ ಖಾಯಿಲೆಯಿಂದ ಬಳಲುತ್ತಿರುವ 5ಮಕ್ಕಳ ಕನಸು ಈಡೇರಿಸಲು ಬೆಂಗಳೂರು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಮುಂದಾಗಿದ್ದಾರೆ. ಹೀಗಾಗಿ ಆ 5 ಜನ ಮಕ್ಕಳು ಒಂದು ದಿನದ ಮಟ್ಟಿಗೆ ನಗರ ಪೊಲೀಸ್​ ಆಯುಕ್ತರಾಗಲಿದ್ದಾರೆ.

Five Childrens Become Bengaluru Police Commissioner

ಈ ಐದು 5 ಮುಗ್ಧ ಮಕ್ಕಳು ಪೊಲೀಸ್​ ಅಧಿಕಾರಿಯಾಗಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಆದರೆ ಅವರಿಗಿರುವ ಕಾಯಿಲೆಯು ಆ ಮಕ್ಕಳಿಗ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಿಡುವುದಿಲ್ಲ. ಹೀಗಾಗಿ ವಿಚಿತ್ರ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಕನಸನ್ನು ನನಸು ಮಾಡಲು ನಗರ ಪೊಲೀಸ್​ ಆಯುಕ್ತರು ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

'ಮೇಕ್​ ಎ ವಿಷ್​ ಫೌಂಡೇಶನ್​​' ಹೀಗೆ ಸಾವಿರಾರು ಮಕ್ಕಳ ಆಸೆಯನ್ನು ಈಡೇರಿಸುವ ದಾರಿಯಲ್ಲಿ ಸಾಗುತ್ತಿದ್ದಾರೆ. ಇವರ ಆಸೆಗೆ ಪೊಲೀಸ್ ಆಯುಕ್ತರು ಸಮ್ಮತಿ ಸೂಚಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ 5 ಮಕ್ಕಳಿಗೆ ಪೊಲೀಸ್​ ಸಿಬ್ಬಂದಿ ಪೊಲೀಸ್​ ಗೌರವ ವಂದನೆ ನೀಡಿದ್ದಾರೆ.

ಟ್ರಾಫಿಕ್ ಉಲ್ಲಂಘನೆ, ದುಬಾರಿ ಫೈನ್: ಬೆಂಗಳೂರು ಪೊಲೀಸ್ ಆಯುಕ್ತರ ಮಹತ್ವದ ಆದೇಶಟ್ರಾಫಿಕ್ ಉಲ್ಲಂಘನೆ, ದುಬಾರಿ ಫೈನ್: ಬೆಂಗಳೂರು ಪೊಲೀಸ್ ಆಯುಕ್ತರ ಮಹತ್ವದ ಆದೇಶ

ಬೆಂಗಳೂರು ಪೊಲೀಸ್​ ಕಮೀಷನರ್​ ಭಾಸ್ಕರ್​ ರಾವ್​ 5 ಮಕ್ಕಳಿಗೆ ಪೊಲೀಸ್​ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲು ಸಮಯಾವಕಾಶ ನೀಡಿದ್ದಾರೆ. ಭಾಸ್ಕರ್ ರಾವ್ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬಳಿಕ ಆ ಮಕ್ಕಳನ್ನು ತಮ್ಮ ಅಧಿಕೃತ ಸ್ಥಾನದಲ್ಲಿ ಕೂರಿಸಿ ಕರ್ತವ್ಯ ನಿರ್ವಹಿಸಲು ಸಲಹೆ ನೀಡಲಿದ್ದಾರೆ.
-ರುತನ್ ಕುಮಾರ್- 8 ವರ್ಷ ಹಾಸನ ಕಿಡ್ನಿ ಫೇಲ್, ಒಂದು ಕಿಡ್ನಿ 30% ಕಾರ್ಯಾಚರಣೆ.
-ಮೊಹಮ್ಮದ್ ಸಾಹೀಬ್- 11 ವರ್ಷ ಬ್ಲಡ್ ಕ್ಯಾನ್ಸರ್, 6ನೇ ತರಗತಿ ಬಿಜಾಪುರ.
-ಅರ್ಪದ್ ಪಾಷಾ, 8 ವರ್ಷ ಸಿಕಲ್ಸ್ ಸಮಸ್ಯೆ, 3ನೇ ತರಗತಿ ನೀಲಸಂದ್ರ ಬೆಂಗಳೂರು.
- ಶ್ರಾವಣಿ ಬಟಲಾ, 8 ವರ್ಷ, 1ನೇ ತರಗತಿ, ತಲಸ್ಮೀಯಾ ಕಾಯಿಲೆ ಅನಂತಪುರ ಆಂಧ್ರಪ್ರದೇಶ.
-ಸೈಯದ್ ಇಮಾನ್, 4 ವರ್ಷ ಬಿಪಿ ಮತ್ತು ಕಿಡ್ನಿ ಸೊಂಕು ಕಾಯಿಲೆ ಬೆಂಗಳೂರು.

English summary
The Children want to Become Police commissioner. The Make-a-wish foundation request Police Commissioner Bhaskar Rao Give permission to Five chidren to Become One Day Police Commissioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X