ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಥಮ ಪಿಯುಸಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸೂಪರ್ ಚಾನ್ಸ್

|
Google Oneindia Kannada News

ಬೆಂಗಳೂರು, ಜುಲೈ 11: ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭಸುದ್ದಿಯನ್ನು ನೀಡಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಪೂರಕ ಪರೀಕ್ಷೆಯ ಫಲಿತಾಂಶ ಬರುವುದು ಬಾಕಿಯಿದೆ. ಇದರ ಜೊತೆಗೆ ಸಿಬಿಎಸ್ಇ ಮತ್ತು ಐಸಿಎಸ್‌ಸಿಯ ಹತ್ತನೇ ತರಗತಿಯ ಫಲಿತಾಂಶ ಪ್ರಕಟ ತಡವಾಗುತ್ತಿದೆ. ಇದರಿಂದಾಗಿ ಪ್ರಥಮ ಪಿಯುಸಿ ದಾಖಲಾತಿಯ ದಿನಾಂಕವನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶವನ್ನು ನೀಡಿದೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಇಂದಿನಿಂದ (ಜೂ.27) ಪ್ರಾರಂಭಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಇಂದಿನಿಂದ (ಜೂ.27) ಪ್ರಾರಂಭ

2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿಯ ದಿನಾಂಕವನ್ನು ದಂಡ ಶುಲ್ಕವಿಲ್ಲದೇ ದಿನಾಂಕ 12.06.2022 ರಿಂದ 30.06.2022 ವೆರಗೂ ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ ಸಿಬಿಎಸ್ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ ಹತ್ತನೇ ತರಗತಿಯ ಫಲಿತಾಂಶ ಪ್ರಕಟಣೆ ತಡವಾಗುತ್ತಿರುವುದರಿಂದ ಅನೇಕ ಪೋಷಕರು ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿಯನ್ನು ಮಾಡಿದ್ದರಿಂದ ಇಲಾಖೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ.

First year puc admission date Extended until July 30 with no fines

ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಅವಕಾಶ; ಎಸ್‌ಎಲ್‌ಎಲ್‌ಸಿ 2021-22 ಸಾಲಿನಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಜೂನ್ 27 ಜುಲೈ 4ರವರೆಗೂ ನಡೆದಿದೆ. ಜುಲೈ 11ರಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ನಡೆಯಲಿದೆ. ಇದೇ ತಿಂಗಳ ಕೊನೆಯ ವೇಳೆಗೆ ಫಲಿತಾಂಶವೂ ಪ್ರಕಟವಾಗುವ ಸಾಧ್ಯತೆಗಳಿವೆ ಇದರಿಂದ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಪ್ರಥಮ ಪಿಯುಸಿಗೆ ಸೇರಲು ಅನುಕೂಲವಾಗಲಿದೆ.

First year puc admission date Extended until July 30 with no fines

ಪ್ರಥಮ ಪಿಯುಸಿ ದಂಡ ಶುಲ್ಕದ ವಿವರ

*30.07.2022 ದಂಡ ಶುಲ್ಕವಿಲ್ಲದೇ ದಾಖಲಾತಿ ವಿಸ್ತರಿಸಿದ ಕೊನೆಯ ದಿನ

* 06.08.2022 ವಿಳಂಬ ದಾಖಲಾತಿ ರೂ. 670 ದಂಡ ಶುಲ್ಕದೊಂದಿಗೆ ವಿಸ್ತರಿಸಿದ ಕೊನೆೆಯ ದಿನ.

*12.08.2022 ವಿಶೇಷ ದಂಡ ಶುಲ್ಕ ರೂ. 2890ರೊಂದಿಗೆ ದಾಖಲಾತಿ ವಿಸ್ತರಿಸಿದ ಕೊನೆಯ ದಿನವಾಗಿರುತ್ತದೆ.

Recommended Video

Basavaraj Bommai ಇಂದಿನಿಂದ ಎರೆಡು ದಿನ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ | *Karnataka | OneIndia

English summary
Pre university Education board has ordered the first PUC enrollment date to be extended. The first PUC is allowed until July 30, with no fines, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X