ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮೊದಲ ಪ್ರಯೋಗ; ಕೋವಿಡ್ ಲಸಿಕೆ ಸಾಗಿಸಿದ ಡ್ರೋನ್

|
Google Oneindia Kannada News

ಬೆಂಗಳೂರು, ನವೆಂಬರ್ 14; ಬೆಂಗಳೂರು ನಗರದಲ್ಲಿ ಡ್ರೋನ್ ಮೂಲಕ ಕೋವಿಡ್ ಲಸಿಕೆ ಸಾಗಣೆ ಮಾಡುವ ಮೊದಲ ಪ್ರಯೋಗ ಮಾಡಲಾಗಿದೆ. 10 ನಿಮಿಷದಲ್ಲಿ 14 ಕಿ. ಮೀ. ದೂರಕ್ಕೆ ಡ್ರೋನ್ ಲಸಿಕೆಯನ್ನು ಯಶಸ್ವಿಯಾಗಿ ಪೂರೈಕೆ ಮಾಡಿದೆ.

ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೆಟರಿ (ಎನ್‌ಎಎಲ್‌) ಸ್ವದೇಶಿ ನಿರ್ಮಿತ ಅಕ್ಟಾಕಾಪ್ಟರ್ ಡ್ರೋನ್ ಮೂಲಕ ಚಂದಾಪುರದ ಆರೋಗ್ಯ ಕೇಂದ್ರದಿಂದ ಹರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ಲಸಿಕೆ ಸಾಗಣೆ ಮಾಡಿದೆ.

ಕರ್ನಾಟಕ; 2ನೇ ಡೋಸ್‌ ಲಸಿಕೆ ಪಡೆಯಲು 45 ಲಕ್ಷ ಜನರು ಗೈರು! ಕರ್ನಾಟಕ; 2ನೇ ಡೋಸ್‌ ಲಸಿಕೆ ಪಡೆಯಲು 45 ಲಕ್ಷ ಜನರು ಗೈರು!

ವಿಶೇಷ ಬಾಕ್ಸ್‌ನಲ್ಲಿ ಕೋವಿಡ್ ಲಸಿಕೆ ಇಡಲಾಗಿತ್ತು. ಶನಿವಾರ ಬೆಳಗ್ಗೆ 9.43ಕ್ಕೆ ಹೊರಟ ಡ್ರೋನ್ 14 ಕಿ. ಮೀ. ದೂರವನ್ನು ಕೇವಲ 10 ನಿಮಿಷದಲ್ಲಿ ತಲುಪಿತು. ಇಡೀ ಪ್ರಕ್ರಿಯೆ ಕೇವಲ 20 ನಿಮಿಷದಲ್ಲಿ ಪೂರ್ಣಗೊಂಡಿತು. ಸೆಕೆಂಡ್‌ಗೆ 10 ಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ.

 ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ

Drone Delivered Corona Vaccine

ರಸ್ತೆ ಮಾರ್ಗದಲ್ಲಿ ಚಂದಾಪುರದಿಂದ ಹಾರಗದ್ದೆಗೆ ಲಸಿಕೆ ಸಾಗಿಸಲು 30 ರಿಂದ 40 ನಿಮಿಷ ಅಗತ್ಯವಿದೆ. ಆದರೆ ಡ್ರೋನ್ ಮೂಲಕ ಸಾಗಣೆ ಮಾಡಿದಾಗ ಕೇವಲ 20 ನಿಮಿಷದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿತು.

ಮುಂದೆಯೋ ಪೂರೈಕೆ ಮಾಡಲಾಗುತ್ತದೆ; ಡ್ರೋನ್ ಮೂಲಕ ಲಸಿಕೆ ಸಾಗಣೆ ಮಾಡು ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೆಟರಿ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಎನ್‌ಎಎಲ್ ಜೊತೆಗಿನ ಸಹಭಾಗಿತ್ವ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಎನ್‌ಎಎಲ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ ಭಾಗವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಒಪ್ಪಿಗೆ ಬಳಿಕ ಡ್ರೋನ್ ಮೂಲಕ ಲಸಿಕೆ ಸಾಗಣೆ ಮಾಡಲಾಗಿದೆ. ಅಕ್ಟಾಕಾಪ್ಟರ್ 40 ನಿಮಿಷಗಳ ಕಾಲ 15 ಕೆಜಿ ಭಾರವನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 36 ಕಿ. ಮೀ. ವೇಗದಲ್ಲಿ ಹಾರಲಿದೆ.

ಅಕ್ಟಾಕಾಪ್ಟರ್ ಮೂಲಕ ಔಷಧಿ, ಆಹಾರ, ಅಂಚೆ, ಮಾನವನ ಅಂಗಾಂಗಗಳನ್ನು ಸಾಗಣೆ ಮಾಡಬಹುದಾಗಿದೆ ಎಂದು ಸಿಎಸ್‌ಐಆರ್ ಹೇಳಿದೆ. ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಆನೇಕಲ್ ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್ ಮುಂತಾದವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಡ್ರೋನ್ ಮೂಲಕ ಕೋವಿಡ್ ಲಸಿಕೆ ಸಾಗಣೆ ಮಾಡಲು ವಿಶೇಷ ಬಾಕ್ಸ್ ತಯಾರು ಮಾಡಲಾಗಿತ್ತು. 50 ವಯಲ್ ಲಸಿಕೆ ಸಾಗಣೆ ಮಾಡಲಾಯಿತು. ಸಿಎಸ್‌ಐಆರ್‌ನ ಮಾನವ ರಹಿತ ವಾಹನ ವಿಭಾಗದ ಮುಖ್ಯಸ್ಥ ಡಾ. ಪಿ. ವಿ. ಸತ್ಯನಾರಾಯಣಮೂರ್ತಿ ದೂರ ಪ್ರದೇಶಗಳಿಗೆ ಲಸಿಕೆ ಸಾಗಣೆ ಮಾಡುವ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ಎಲ್ಲರನ್ನೂ ಅಭಿನಂದಿಸಿದ್ದಾರೆ.

ಅಕ್ಟಾಕಾಪ್ಟರ್ ಮಾದರಿ ಡ್ರೋನ್ ನಿರ್ವಹಣೆ ಮಾಡುವುದು ಸಹ ಸರಳವಾಗಿದೆ. ತಾಂತ್ರಿಕ ನೈಪುಣ್ಯತೆ ಪಡೆದವರು ಸುಲಭವಾಗಿ ಇದನ್ನು ಹಾರಿಸಬಹುದಾಗಿದೆ. ಎನ್‌ಎಎಲ್ ಈಗಾಗಲೇ ಖಾಸಗಿ ಸಂಸ್ಥೆಗಳ ಜೊತೆಗೆ ಡ್ರೋನ್ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ಸಹಭಾಗಿತ್ವ ನೀಡಲು ಒಪ್ಪಂದ ಮಾಡಿಕೊಂಡಿದೆ.

ಈ ಡ್ರೋನ್‌ ಅನ್ನು ಹಗುರವಾದ ಕಾರ್ಬನ್‌ ಫೈಬರ್ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಡಿಟಿಟಲ್ ಆಟೋ ಪೈಲೆಟ್ ಸಹಿತ ಆಧುನಿಕ ತಂತ್ರಜ್ಞಾನವನ್ನು ಸಹ ಈ ಡ್ರೋನ್ ಹೊಂದಿದೆ. ಈ ವ್ಯವಸ್ಥೆಯಿಂದ ನಗರದಲ್ಲಿ ಲಸಿಕೆ ಪೂರೈಕೆ ಮಾಡಲು ಹೊಸ ವ್ಯವಸ್ಥೆ ಸಿಕ್ಕಿದಂತಾಗಿದೆ.

ನವೆಂಬರ್ 13ರ ಶನಿವಾರ ಕರ್ನಾಟಕದಲ್ಲಿ 1,41,188 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 33,938 ಡೋಸ್, ತುಮಕೂರಿನಲ್ಲಿ 10,441 ಡೋಸ್, ಬೆಳಗಾವಿಯಲ್ಲಿ 10,416 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 6,80,85,643 ಡೋಸ್ ಲಸಿಕೆ ನೀಡಲಾಗಿದೆ.

Recommended Video

ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada

English summary
First time in Bengaluru octacopter drone of CSIR-NAL delivered Corona vaccine to Haragadde primary health centre from Chandapura. Drone travel 14 km in 10 minute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X