ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಕುಣಿತದಲ್ಲೇ ಬೆಂಗಳೂರಿಗರನ್ನು ಗೆದ್ದ ಈಜಿಪ್ಟಿನ ತನುರಾ

|
Google Oneindia Kannada News

ಬೆಂಗಳೂರು ನವೆಂಬರ್ 26: ಗಿರ ಗಿರನೆ ಸುತ್ತುತ್ತಾ, ತನ್ನ ಕೈ ಹಾಗೂ ವಿಶಿಷ್ಟ ಉಡುಪನ್ನು ತಿರುಗಿಸುತ್ತಾ ಪ್ರೇಕ್ಷಕರು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವಲ್ಲಿ ಈಜಿಪ್ಟಿನ ಸಾಂಪ್ರದಾಯಿಕ ನೃತ್ಯ "ತನುರಾ" ಡ್ಯಾನ್ ಯಶಸ್ವಿಯಾಯಿತು.

ಸೂಫೀ ಸಂಪ್ರದಾಯದ ಹಿನ್ನಲೆಯನ್ನು ಹೊಂದಿರುವ ಈ ತನುರಾ ನೃತ್ಯ, ಈಜಿಪ್ಟ್ ಹಾಗೂ ಸೌದಿ ದೇಶಗಳಲ್ಲಿ ಬಹಳ ಪ್ರಸಿದ್ದಿಯಾಗಿವೆ. ಇಸ್ಲಾಮಿಕ್ ದೇಶಗಳಲ್ಲಿ ಈ ನೃತ್ಯಕ್ಕೆ ಬಹಳ ಮಾನ್ಯತೆ ಇದೆ. ತುರ್ಕಿ ಹಾಗೂ ಈಜಿಪ್ಟಿನ ಸೂಫಿ ಸಂಪ್ರದಾಯಿಕ ನೃತ್ಯದಿಂದ ಪ್ರಭಾವಿತವಾಗಿರುವ ಈ ನೃತ್ಯ ಕಲೆ ಬಹಳ ಆಕರ್ಷಣೀಯ.

First time in Bengaluru Artist from Egypt Perform Tanura Dance

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯುತ್ತಿರುವ ದಿ ಸೋಕ್ ಮಾರ್ಕೇಟ್ ನ ಭಾಗವಾಗಿ ಆಯೋಜಿಸಿದ್ದ ಈ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಭಾನುವಾರದ ಸಂಜೆಗೆ ಮತ್ತಷ್ಟು ಮೆರಗು ನೀಡಿದ ಈ ಡ್ಯಾನ್ಸ್ ನ್ನು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಈ ನೃತ್ಯ ಪ್ರದರ್ಶನದಲ್ಲಿ ಎಲ್ ಈ ಡಿ ಲೈಟ್‍ಗಳಿಂದ ಆಲಂಕೃತಗೊಂಡಿರುವ ಸ್ಕರ್ಟ್‍ನ್ನು ಧರಿಸಿದ ನೃತ್ಯಗಾರರ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.

First time in Bengaluru Artist from Egypt Perform Tanura Dance

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನವೆಂಬರ್ 23 ರಿಂದ ಪ್ರಾರಂಭವಾಗಿರುವ ಕಲಾಕಾರರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಡಿಸೆಂಬರ್ 2 ರ ವರೆಗೆ ನಡೆಯಲಿದೆ. ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಂಗಳೂರು ಜನತೆಯ ಮುಂದೆ ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 7.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

English summary
For the first time ever in Bengaluru an artist from Egypt performing The Tanura Dance. Tanoura means skirt in English and Tanoura dance is a kind of folkloric dance which is very common in Islamic countries which is performed using LED light skirt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X