ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ?

|
Google Oneindia Kannada News

ಬೆಂಗಳೂರು, ಜನವರಿ 27: ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವದಲ್ಲೇ ಆತಂಕ ಸೃಷ್ಟಿಸಿದೆ.

ಈಗ ಬೆಂಗಳೂರಿನಲ್ಲೂ ಕರೋನಾ ವೈರಸ್​ನ ಭೀತಿ ಎದುರಾಗಿದ್ದು, ವುಹಾನ್​ನಿಂದ ಬಂದ ಇಬ್ಬರು ವ್ಯಕ್ತಿಗಳಿಗೆ ಕರೋನಾ ಸೋಂಕು ತಗುಲಿರುವ ಅನುಮಾನ ಬಂದಿದ್ದರಿಂದ ಅವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.

ರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿ

ನಿನ್ನೆ ರಾತ್ರಿ ವುಹಾನ್​ನಿಂದ ಬೆಂಗಳೂರಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿ ಕಳುಹಿಸಲಾಗಿತ್ತು. ಆದರೆ, ಆ ಇಬ್ಬರು ಪ್ರಯಾಣಿಕರಿಗೆ ನೆಗಡಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ.

First Suspected Case Quarantined In Bengaluru Kempegowda International Airport

ಚೀನಾದಲ್ಲಿ ಸಾವಿನ ಭೀತಿಯನ್ನು ಸೃಷ್ಟಿಸಿರುವ ಕರೋನಾ ಎಂಬ ಮಾರಣಾಂತಿಕ ವೈರಸ್ ಬಗ್ಗೆ ವಿಶ್ವದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಕರೋನಾ ವೈರಸ್​ಗೆ ತುತ್ತಾದ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಬೆಂಗಳೂರು ಮೂಲದ ಇಬ್ಬರು ಪ್ರಯಾಣಿಕರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿಗೆ ಕಳುಹಿಸಲಾಗಿದೆ. ನಾಳೆ ರಕ್ತದ ಮಾದರಿಯ ಫಲಿತಾಂಶ ಸಿಗಲಿದೆ.

ಬೆಂಗಳೂರು ಸೇರಿ 7 ಏರ್‌ಪೋರ್ಟ್‌ಗಳಲ್ಲಿ ಕೊರೊನಾ ವೈರಸ್ ಕಟ್ಟೆಚ್ಚರಬೆಂಗಳೂರು ಸೇರಿ 7 ಏರ್‌ಪೋರ್ಟ್‌ಗಳಲ್ಲಿ ಕೊರೊನಾ ವೈರಸ್ ಕಟ್ಟೆಚ್ಚರ

ವರದಿ ಬರುವವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಆ ಇಬ್ಬರನ್ನು ಆಸ್ಪತ್ರೆಯಲ್ಲೇ ದಾಖಲು ಮಾಡಲಾಗುವುದು. ಇದುವರೆಗೆ ಚೀನಾದಿಂದ ನಾನಾ ಭಾಗಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ 392 ಪ್ರಯಾಣಿಕರ ರಕ್ತ ಪರೀಕ್ಷೆ ಮಾಡಲಾಗಿದೆ.

English summary
A middle-aged person from Bengaluru, who returned from Wuhan city in China on January 19, has been kept under observation at the State-run Rajiv Gandhi Institute of Chest Diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X