ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KIAL: 2025ಕ್ಕೆ 'ಏರ್‌ಪೋರ್ಟ್ ಸ್ಮಾರ್ಟ್‌ಸಿಟಿ 1ನೇ ಹಂತ ಪೂರ್ಣ

|
Google Oneindia Kannada News

ಬೆಂಗಳೂರು ಆಗಸ್ಟ್ 08: ಕೊರೋನಾ ಸಾಂಕ್ರಾಮಿಕ ಪಿಡುಗು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಲಾಗುತ್ತಿರುವ 'ಫ್ಯೂಚರಿಸ್ಟಿಕ್ ಬೆಂಗಳೂರು ಏರ್‌ಪೋರ್ಟ್ ಸ್ಮಾಟಿ ಸಿಟಿ' ಯೋಜನೆ ಅಡ್ಡಿ ಪಡಿಸಿದರೂ ಸಹ ಮೊದಲ ಹಂತ ನಿರ್ಮಾಣ ಕಾರ್ಯ 2025ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಮನರಂಜನೆ, ವ್ಯಾಪಾರ, ವಹಿವಾಟು, ಸೆಂಟ್ರಲ್ ಪಾರ್ಕ್, ತಂತ್ರಜ್ಞಾನ ಕೇಂದ್ರ ಇನ್ನಿತರವುಗಳನ್ನು ಒಳಗೊಂಡ ಏರ್‌ಪೋರ್ಟ್ ಸ್ಮಾರ್ಟ್ ಸಿಟಿ ನಿರ್ಮಾಣ ಯೋಜನೆಯ ಕೆಲಸ ಕೋವಿಡ್ ಮಧ್ಯದಲ್ಲೂ ಭರದಿಂದ ಸಾಗಿದೆ. ಹೀಗಾಗಿ ಮುಂದಿನ ಎರಡೂವರೆ ವರ್ಷಗಳಲ್ಲಿ ಈ ಸ್ಮಾರ್ಟ್ ಸಿಟಿಯ ಮೊದಲ ಹಂತ ಮುಗಿಯಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2ದಶಕದಲ್ಲಿ ತಲೆಎತ್ತಲಿರುವ ನಗರ

ಏರ್‌ಪೋರ್ಟ್ ಸ್ಮಾರ್ಟ್ ಸಿಟಿಯಡಿಯಲ್ಲಿ ಕನ್ಸರ್ಟ್ ಅರೇನಾ, ರಿಟೇಲ್, ಡೈನಿಂಗ್, ಮನರಂಜನೆ, ಗ್ರಾಮ, ಪ್ರಥಮ ವ್ಯಾಪಾರ ಉದ್ಯಾನ, 700ಕ್ಕೂ ಹೆಚ್ಚು ಕೊಠಡಿವುಳ್ಳ ಕಾಂಬೊ ಹೋಟೆಲ್, ಸೆಂಟ್ರಲ್ ಕಿಚನ್ ಹಾಗೂ ಸೊಂಪಾದ್ ಸೆಂಟ್ರಲ್ ಪಾರ್ಕ್ ನಿರ್ಮಾಣದ ಕೆಲಸಗಳು 2025ರ ಹೊತ್ತಿಗೆ ಮುಗಿಯಲಿವೆ. ಇವೆಲ್ಲವುಗಳು ಜನರಿಗೆ ಅನೇಕ ಸೌಕರ್ಯಗಳನ್ನು ಏರ್‌ಪೋರ್ಟ್ ಆವರಣದಲ್ಲಿಯೇ ಒದಗಿಸಲಿವೆ. ಮುಂದಿನ ಎರಡು ದಶಕದಲ್ಲಿ ಬಹುತೇಕ ನಗರವು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ಎಂದು ವಿಮಾನ ನಿಲ್ದಾಣ ನಿರ್ವಹಿಸುವ 'ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ವ್ಯಾಪ್ತಿಯ 'ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿ.ನ ಅಧಿಕಾರಿಯೊಬ್ಬರು ತಿಳಿಸಿದರು.

First phase of KIA Smart City will be completed by 2025

ಈ ಏರ್‌ಪೋರ್ಟ್ ಸ್ಮಾರ್ಟ್ ಸಿಟಿಯಲ್ಲಿ ವ್ಯಾಪಾರ ಉದ್ಯಾನವ, ತಂತ್ರಜ್ಞಾನ ಕೇಂದ್ರಗಳನ್ನು ಒಳಗೊಂಡಿರಲಿದೆ. ಅವುಗಳನ್ನು ಅತ್ಯುತ್ತಮ ವ್ಯಾಪಾರ ತಾಣಗಳಾಗಿ ವಿನ್ಯಾಸಗೊಳಿಸಲಾಗಿದೆ. ಇದು ಭವಿಷ್ಯದ ಉದ್ಯೋಗದಾತರು, ಬಂಡವಾಳ ಹೂಡಿಕೆದಾರರು ಮತ್ತು ವ್ಯವಹಾರಗಳನ್ನು ಸೆಳೆಯುವ ಪ್ರಮುಖ ಸ್ಥಳವಾಗಿ ಹೊರ ಹೊಮ್ಮಲಿದೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿ ಮೊದಲ ಹಂತದ ಜತೆಗೆ 1.7ಲಕ್ಷ ಜನರಿಗೆ ಊಟ ಪೂರೈಸುವ ಸಿಂಗಾಪುರ್‌ನ ಡಿಪಿ ಆರ್ಕಿಟೆಕ್ಟ್ಸ್ ವಿನ್ಯಾಸಗೊಳಿಸಿದ ಸೆಂಟ್ರಲ್ ಕಿಚನ್ ಆರ್‌ಡಿಇ ವಿಲೇಜ್‌ಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಈ ಸೆಂಟ್ರಲ್ ಕಿಚನ್ ಅನ್ನು ನಿರ್ವಹಿಸುವ ಎಸ್‌ಎಟಿಎಸ್ (ಸಿಂಗಾಪೂರ್ ಏರ್‌ಪೋರ್ಟ್ ಟರ್ಮಿನಲ್ ಸರ್ವೀಸ್‌ ಲಿಮಿಟೆಡ್) ನಿತ್ಯ 1.7ಲಕ್ಷ ಆಹಾರ ತಯಾರಿಸಿ ಉಣಬಡಿಸಲಿದೆ.

First phase of KIA Smart City will be completed by 2025

ಸ್ಮಾರ್ಟ್ ಸಿಟಿಯಲ್ಲಿ ಆಧುನಿಕ ತಂತ್ರಜ್ಞಾನ

ಸುಧಾರಿತ ಎಲೆಕ್ಟ್ರಾನಿಕ್ಸ್ ತಯಾರಿಕೆ, ಬಾಹ್ಯಾಕಾಶ ತಂತ್ರಜ್ಞಾನ, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಚಿಪ್ ವಿನ್ಯಾಸ, ಡಿಜಿಟಲ್ ವಿಷಯ, ತ್ರಿಡಿ ಪ್ರಿಂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ಆನ್‌ಲೈನ್ ಗೇಮಿಂಗ್ಗಳು, ಆನ್‌ಲೈನ್ ಶಿಕ್ಷಣ ಹಾಗೂ ಕೃಷಿ ತಂತ್ರಜ್ಞಾನ ಮೊದಲಾದ ಸೇರಿದಂತೆ ಆಧುನಿಕ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ಈ ಕೆಐಎ ಆವರಣದಲ್ಲಿ ತಲೆ ಎತ್ತಲಿರುವ ಸ್ಮಾರ್ಟ್ ಸಿಟಿಯಲ್ಲಿ ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ.

ಸದ್ಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕೊಂಡಿಯಾಗಿರುವ ಮೆಟ್ರೋ, ರಸ್ತೆ ಮಾರ್ಗ, ಉಪನಗರ ರಲೈ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅವೆಲ್ಲವುಗಳು ಅಭಿವೃದ್ಧಿಯ ಭಾಗವೇ ಆಗಿವೆ. ಈ ಸ್ಮಾರ್ಟ್ ಸಿಟಿಯ ಅಭಿವೃದ್ಧಿಯ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಲೈವ್ ನೇಷನ್ ಯುಎಸ್ಎ ತಾಂತ್ರಿಕ ಸಹಯೋಗದಲ್ಲಿ ವಿನ್ಯಾಸಗೊಳಿಸಲಾದ ಕಾನ್ಸರ್ಟ್ ಅರೇನಾ ಇಲ್ಲಿನ ಒಂದು ಪ್ರಮುಖ ಆಕರ್ಷಣೆ ಆಗಿರಲಿದೆ. ವಿಶ್ವ ದರ್ಜೆಯ ಹಲವು ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದು ಕೆಐಎ ಮೂಲಗಳು ತಿಳಿಸಿವೆ.

Recommended Video

ಈ ಥರಾ ಬೌಂಡರಿ ಹೊಡಿಯೋಕೆ ಯಾರಿಂದಾನು ಸಾಧ್ಯ ಇಲ್ಲಾ !! | OneIndia Kannada

English summary
The first phase of Bengaluru Kempegowda International Airport (KIA) Smart City will be completed By Year of 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X