ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲದಲ್ಲಿ ಶೀಘ್ರವೇ ನ್ಯಾನೊ ಪಾರ್ಕ್

|
Google Oneindia Kannada News

ಬೆಂಗಳೂರು, ಸೆ. 2 : ಮಹಾನಗರದ ಹೊರವಲಯದ ನೆಲಮಂಗಲದಲ್ಲಿ ರಾಜ್ಯ ಸರ್ಕಾರ ನ್ಯಾನೊ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದೆ.

ಇಡೀ ದೇಶದಲ್ಲೆ ಪ್ರಪ್ರಥಮ ಪ್ರಯತ್ನ ಇದಾಗಿದ್ದು ಸರ್ಕಾರ ಇದಕ್ಕೆ 16 ಕೋಟಿ ರೂ. ವೆಚ್ಚ ಮಾಡಲಿದ್ದು ಮೂರ್ನಾಲ್ಕು ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಿದೆ.

cnr rao

ಈ ಬಗ್ಗೆ ಮಾಹಿತಿ ನೀಡಿದ ನ್ಯಾನೊ ತಂತ್ರಜ್ಞಾನದ ಪ್ರಮುಖ ಮಾರ್ಗದರ್ಶಕ ವಿಜ್ಞಾನಿ ಪ್ರೊ. ಸಿಎನ್‌ಆರ್‌. ರಾವ್‌, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಜವಾಹರಲಾಲ್‌ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಜಂಟಿಯಾಗಿ ನ್ಯಾನೊ ಸಂಬಂಧಿಸಿದ ನೂತನ ಸಂಶೋಧನೆಗಳನ್ನು ಪ್ರೋತ್ಸಾಹಿಸಲಿದೆ ಎಂದು ತಿಳಿಸಿದರು.('ಭಾಭಾ ಬಂಗಲೆ ಉಳಿಸಲು ಮೋದಿ ಮನಸ್ಸು ಮಾಡಲಿಲ್ಲ')

ಮಾಹಿತಿ ತಂತ್ರಜ್ಙಾನ ಇಲಾಖೆ ಸಚಿವ ಎಸ್‌.ಆರ್‌.ಪಾಟೀಲ್‌ ಮಾತನಾಡಿ, ನ್ಯಾನೊ ತಂತ್ರಜ್ಞಾನಕ್ಕೆ ಸಂಬಂಧಿಸಿ ಅದ್ವೀತಿಯ ಸಾಧನೆ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಮಲ್ಹೋತ್ರಾ ವಿಕ್‌ ಫೀಲ್ಡ್‌ ಪೌಂಡೇಶನ್‌ನಿಂದ ಫೇಲೋಶಿಪ್‌ ನೀಡಲಾಗುವುದು. ಸಿಎನ್‌ಆರ್‌ ರಾವ್ ನೇತೃತ್ವದ ಮಂಡಳಿ ಅರ್ಹರನ್ನು ಗುರುತಿಸಲಿದೆ ಎಂದು ತಿಳಿಸಿದರು.

ಡಿಸೆಂಬರ್‌ 4ರಿಂದ ನ್ಯಾನೋ ಸಮಾವೇಶ
ನ್ಯಾನೋ ತಂತ್ರಜ್ಞಾನ ಪ್ರೋತ್ಸಾಹಿಸಲು ಡಿಸೆಂಬರ್‌ 4ರಿಂದ ನಗರದಲ್ಲಿ 'ಬೆಂಗಳೂರು ಇಂಡಿಯಾ ನ್ಯಾನೊ-2014' ಹೆಸರಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಂಶೋಧನೆ, ಕೌಶಲ್ಯ, ಹೂಡಿಕೆ, ಅಭಿವೃದ್ಧಿ ವಲಯದಲ್ಲಿ ಪಾತ್ರ ಮುಂತಾದ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಮಾಹಿತಿ ನೀಡಿದರು.

English summary
Karnataka will soon have its very first nano research institute near Nelamangala, Bangalore said S R Patil, Minister for Information Technology, Biotechnology and Science and Technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X