ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಡ್ರಾಯ್ಡ್ ಉಚಿತ ಕನ್ನಡ ಪದಬಂಧ ಅಪ್ಲಿಕೇಷನ್

By Mahesh
|
Google Oneindia Kannada News

ಪದಬಂಧವು ಪದಗಳ ರಂಗೋಲಿ. ಈ ಪದಗಳ ಚಿತ್ತಾರ ತುಂಬಾ ಪ್ರಾಚೀನವಾದುದು. ಇದು ಆಯಾ ಭಾಷೆ, ಸಂಸ್ಕೃತಿ, ಕಲೆ, ನಾಗರೀಕತೆಯ ಮತ್ತು ಅದರ ಸೃಷ್ಟಿಕರ್ತನ ಸೃಜನಶೀಲತೆಯ ಮೇಲೆ ವೈವಿಧ್ಯತೆಯನ್ನು ಪಡೆದುಕೊಳ್ಳುತ್ತದೆ. ಕನ್ನಡದಲ್ಲಿಯೂ ಕೂಡ ನಾವು ದಿನ, ವಾರ ಮತ್ತು ಮಾಸಪತ್ರಿಕೆಗಳಲ್ಲಿ ಪದಬಂಧಗಳನ್ನು ನೋಡಬಹುದು. ಇಂದೂ ಕೂಡ ಸಾಕಷ್ಟು ಜನ ಪದಬಂಧವನ್ನು ಆಡುತ್ತಾರೆ. ಇದು ನಮ್ಮ ಭಾಷೆಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಒರೆ ಹಚ್ಚುತ್ತದೆ.

ನಮ್ಮೆಲ್ಲರ ಕನ್ನಡ ಶಬ್ದ ಸಂಗ್ರಹವನ್ನು ಹೆಚ್ಚಿಸಲು ಈ ಒಂದು ಪ್ರಯತ್ನ ಕನ್ನಡಕ್ಕಾಗಿ ಮತ್ತು ಕನ್ನಡಿಗರಿಗಾರಿ ಈ ಕನ್ನಡಿಗನ ಅಳಿಲು ಸೇವೆ. ಸಲಹೆ ಸೂಚನೆ ಗಳೇನಿದ್ದರೂ ತಪ್ಪದೇ ತಿಳಿಸಿ ..

ಹೀಗೊಂದು ಒಕ್ಕಣೆಯಿದ್ದ ಇ ಮೇಲ್ ಕಳಿಸಿದ ಬೆಂಗಳೂರಿನ ಸಿಸ್ಕೋ ವಿಡಿಯೋ ಟೆಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಲ್ಬರ್ಗಾ ಮೂಲದ ಚಿನ್ನಯ್ಯ ಮಠ್ ಅವರು ಕನ್ನಡ ಪದಬಂಧ ಅಪ್ಲಿಕೇಷನ್ ರಚಿಸಿ ಮುಕ್ತ ಮಾರುಕಟ್ಟೆಯಲ್ಲಿ ಬಿಟ್ಟಿದ್ದಾರೆ. ಮೊಬೈಲ್ ನಲ್ಲಿ ಕನ್ನಡ ಬಳಕೆ ಹೆಚ್ಚಲು ಅಪ್ಲಿಕೇಷನ್ ಗಳ ಕೊರತೆ ಇದೆ. ಅದರಲ್ಲೂ ಸಿನಿಮಾ ಸಂಬಂಧಿತ ಅಪ್ಲಿಕೇಷನ್ ಗಳಲ್ಲದೆ ಕನ್ನಡ ಸಂಸ್ಖೃತಿ, ಕಲೆ, ಆಟಗಳನ್ನು ಬಿಂಬಿಸುವ ಆಪ್ ಗಳಿಲ್ಲ ಎಂಬ ಕೊರಗನ್ನು ಚಿನ್ನಯ್ಯ ಮಠ್ ರಂಥ ಉತ್ಸಾಹಿಗಳು ನೀಗಿಸಿದ್ದಾರೆ. ಚಿನ್ನಯ್ಯ ಮಠ್ ಹಾಗೂ ಅವರ ತಂಡ ವಿನ್ಯಾಸಗೊಳಿಸಿರುವ ಕನ್ನಡ ಪದಬಂಧ ಅಪ್ಲಿಕೇಷನ್ ಬಗ್ಗೆ ಮುಂದೆ ಓದಿ...

ಕನ್ನಡ ಪದಬಂಧ ಅಪ್ಲಿಕೇಷನ್ ವಿಶೇಷಗಳು

ಕನ್ನಡ ಪದಬಂಧ ಅಪ್ಲಿಕೇಷನ್ ವಿಶೇಷಗಳು

* 7 * 7 ಪದಬಂಧ ಆಯ್ಕೆ ಮಾಡಿದ ಮೇಲೆ ಸೆಲ್ ಗಳು ಬಿಳಿ ಮತ್ತು ಕಪ್ಪು ಬಣ್ಣ ಪಡೆದುಕೊಳ್ಳುತ್ತದೆ
* ಮೇಲಿನಿಂದ ಕೆಳಗೆ ನಮಗೆ ಸಹಾಯ ಪದಬಂಧ ಹಾಗೂ ಕೀ ಪ್ಯಾಡ್ ಕಂಡು ಬರುತ್ತವೆ
* ಸಹಾಯದ ಕೆಳಗೆ ಶಬ್ದಗಳ ವಿವರಣೆ ಬರುತ್ತದೆ, ಬಿಳಿ ಸೆಲ್ ಆಯ್ಕೆ ಮೇಲೆ ಅದು ಬದಲಾವಣೆ ಆಗುತ್ತಾ ಇರುತ್ತದೆ
* ಬಿಳಿ ಸೆಲ್ ಗಳನ್ನು ಮಾತ್ರ ಅಕ್ಷರಗಳಿಂದ ತುಂಬಲು ಸಾಧ್ಯ, ಒಂದು ಸೆಲ್ ಗೆ ಒಂದೇ ಅಕ್ಷರ ಬರೆಯಲು ಸಾಧ್ಯ
* ಬಿಳಿ ಸೆಲ್ ಮೊದಲ ಬಾರಿ ಆಯ್ಕೆ ಮಾಡಿದಾಗ ಎಡದಿಂದ ಬಲಕ್ಕೆ ಇರುವ ವಿವರಣೆ ಬರುತ್ತದೆ
* ಬಿಳಿ ಸೆಲ್ ಎರಡನೇ ಬಾರಿ ಆಯ್ಕೆ ಮಾಡಿದಾಗ ಮೇಲಿನಿಂದ ಕೆಳಕ್ಕೆ ಆಗುವ ವಿವರಣೆ ಬರುತ್ತದೆ.
* ಆಯ್ಕೆ ಮಾಡಿದ ಬಿಳಿ ಸೆಲ್ ಗೆ ಎಡದಿಂದ ಬಲಕ್ಕೆ ವಿವರಣೆ ಇಲ್ಲದಿದ್ದರೆ ಮೊದಲ ಬಾರಿಗೆ ಮೇಲಿನಿಂದ ಕೆಳಗೆ ವಿವರಣೆ ಬರುತ್ತದೆ.
* ಮೊದಲು ಸ್ವರ, ಕಾಗುಣಿತ, ವ್ಯಂಜನಗಳನ್ನು ಕೀಪ್ಯಾಡ್ ನಲ್ಲಿ ಕೊಡಲಾಗಿದೆ. 60 ಅಕ್ಷರಗಳು ಮೂರು ಸ್ಕ್ರೀನ್ ನಲ್ಲಿ ಸಿಗುತ್ತದೆ.
* ಟೈಪಿಂಗ್ ಸಹಾಯ ಪಡೆದು ಕೀ ಮಾಡಬಹುದು.

ಆಟದ ಸಹಾಯಗಳು ಹೇಗೆ

ಆಟದ ಸಹಾಯಗಳು ಹೇಗೆ

* ಇಲ್ಲಿ ಅಕ್ಷರ ಸಹಾಯ, ಶಬ್ದ ಸಹಾಯ, ಮೂರನೇ ಆಯ್ಕೆ ಸಂಪೂರ್ಣ ಸಮಾಧಾನ ಸಿಗಲಿದೆ.
* ಪದಬಂಧ ಸರಿ ಇದೆಯೇ ಎಂದು ಪರೀಕ್ಷಿಸಲು ನಾಲ್ಕನೇ ಆಯ್ಕೆ ಚೆಕ್ ಮಾಡಿ, ಸರಿಯಾದ ಹಸಿರು ಬಣ್ಣದಲ್ಲಿ ಹಾಗೂ ತಪ್ಪಾದ ಅಕ್ಷರಗಳು ಕೆಂಪು ಬಣ್ಣದಲ್ಲಿ ಮೂಡಿ ಬರುತ್ತದೆ
* ಹೆಚ್ಚಿನ ನೆರವು ಬೇಕಾದರೆ ಗೂಗಲ್ ಪ್ಲೇ ನಲ್ಲಿ ಈ ಅಪ್ಲಿಕೇಷನ್ ಕಾರ್ಯ ನಿರ್ವಹಿಸುವ ಬಗ್ಗೆ ವಿಡಿಯೋ ಪ್ರಾತ್ಯಕ್ಷಿಕೆ ನೀಡಲಾಗಿದೆ ತಪ್ಪದೇ ನೋಡಿ

ಸರಳ, ಸುಲಭ ಹಾಗೂ ವಿಶಿಷ್ಟ ಪದಬಂಧ

ಸರಳ, ಸುಲಭ ಹಾಗೂ ವಿಶಿಷ್ಟ ಪದಬಂಧ

* 5 ಮುಕ್ತ ಪದಬಂಧಗಳು 7*7 ಮಾದರಿಯಲ್ಲಿ ಸದ್ಯಕ್ಕೆ ಲಭ್ಯವಿದೆ. ಇನ್ನಷ್ಟು ಮಾದರಿಗಳು ಲಭ್ಯವಾಗಲಿದೆ. ಅಲ್ಲದೆ ಹಿಂದಿ ಇನ್ನಿತರ ಭಾಷೆಗಳಲ್ಲೂ ಪದಬಂಧ ರಚಿಸಲು ಅಪ್ಲಿಕೇಷನ್ ತಯಾರಿಸಲಾಗುವುದು ಎಂದು ಚಿನ್ನಯ್ಯ ಅವರು ಹೇಳಿದ್ದಾರೆ.
* ಜಾಹೀರಾತು ಮುಕ್ತ ಅಪ್ಲಿಕೇಷನ್ ಇದಾಗಿದೆ.
* ಅಪ್ಲಿಕೇಷನ್ ಕಾರ್ಯ ನಿರ್ವಹಣೆಗೆ ಸಕ್ರಿಯ ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ

ಪದಬಂಧ ರಚಿಸಿದ ತಂತ್ರಜ್ಞರನ್ನು ಸಂಪರ್ಕಿಸಿ

ಪದಬಂಧ ರಚಿಸಿದ ತಂತ್ರಜ್ಞರನ್ನು ಸಂಪರ್ಕಿಸಿ

ಚಿನ್ನಯ್ಯ ಮಠ್
ಮೊಬೈಲ್ : 99720 21599
ಇಮೇಲ್ ಐಡಿ: [email protected]
* ಫೇಸ್ ಬುಕ್ ಪುಟ
* ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ

English summary
An enthusiastic Android App developer Chinnayya Math and his group has come up with first FREE Kannada Android application called "Kannada Crossword Padabandha". This works on all versions of Android over 3000 Android devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X