ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ತ್ರೀಯರಿಗೆ ಪ್ರತ್ಯೇಕ ಬೋಗಿ ಫಲಕ ಹಾಕಲ್ಲ: ಮೆಟ್ರೋ ನಿಗಮ

By Nayana
|
Google Oneindia Kannada News

ಬೆಂಗಳೂರು, ಜೂನ್ 25: ನಮ್ಮ‌ ಮೆಟ್ರೊ ರೈಲಿಗೆ ಆರು ಬೋಗಿಗಳನ್ನು ಅಳವಡಿಸಿದ ಬೆನ್ನಲ್ಲೇ ಮಹಿಳೆಯರಿಗೆಂದೇ ಒಂದು ಬೋಗಿ ಮೀಸಲಿಡಲಾಗಿದೆ. ಆದರೆ 'ಮಹಿಳೆಯರ ಬೋಗಿ' ಎಂಬ ನಾಮಫಲಕ ಅಳವಡಿಸಲು ಸಾಧ್ಯ ಇಲ್ಲ ಎಂದು ಬಿಎಂಆರ್ ಸಿಎಲ್‌ ಸ್ಪಷ್ಟಪಡಿಸಿದೆ.

ನಮ್ಮ ಮೆಟ್ರೋ ಆರು ಬೋಗಿ ಬಂದಿದೆ ಆದರೂ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಎನ್ನುವ ನಾಮಫಲಕವಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ, ಆದರೆ ನಮ್ಮ ಮೆಟ್ರೋ ಯೂ ಟರ್ನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎರಡೂ ಮುಖಗಳತ್ತ ಮೆಟ್ರೋ ಚಲಿಸುವ ಕಾರಣ ಯಾವ ದಿಕ್ಕಿನಲ್ಲಿ ಚಲಿಸುತ್ತದೆಯೋ ಆ ದಿಕ್ಕಿನ ಮೊದಲ ಬೋಗಿ ಮಹಿಳೆಯರಿಗೆ ಮೀಸಲಾಗಿರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ರೈಲು ವ್ಯವಸ್ಥೆ ಸುಧಾರಣೆ ಸಮಿತಿ ರಚನೆಗೆ ಪ್ರಧಾನಿ ಒಪ್ಪಿಗೆ ಮೆಟ್ರೋ ರೈಲು ವ್ಯವಸ್ಥೆ ಸುಧಾರಣೆ ಸಮಿತಿ ರಚನೆಗೆ ಪ್ರಧಾನಿ ಒಪ್ಪಿಗೆ

ನಾಮಫಲಕಗಳಿದ್ದರೆ ಮಹಿಳೆಯರಿಗೆ ಕೇವಲ ಸುರಕ್ಷತೆ ಮಾತ್ರವಲ್ಲ ಪುರುಷರು ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ ಆದರೆ ನಾಮಫಲಕವಿಲ್ಲದಿದ್ದರೆ ಒಂದೊಮ್ಮೆ ಪುರುಷರು ಬಂದರೂ ಕೂಡ ಇದು ಮಹಿಳೆಯರಿಗೆ ಮೀಸಲು ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ.

First coaches of Metro trains can’t have ‘women-only’ board

ಆದರೆ ಮೆಟ್ರೋದಲ್ಲಿ ಮೊದಲ ಬೋಗಿ ಮಹಿಳೆಯರಿಗಾಗಿಯೇ ಮೀಸಲು ಎನ್ನುವ ಅನೌನ್ಸ್‌ಮೆಂಟ್‌ ಮಾಡಲಾಗುತ್ತದೆ. ಶೀಘ್ರದಲ್ಲಿ ಪ್ರತ್ಯೇಕ ಮಹಿಳಾ ಬೋಗಿಯಲ್ಲಿ ಪುರುಷರು ಕಾಣಿಸಿಕೊಂಡಲ್ಲಿ ಅವರಿಗೆ ದಂಡ ಹಾಕಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಂದ್ರ ಜೈನ್‌ ತಿಳಿಸಿದ್ದಾರೆ.

English summary
The first coach in the new six-coach Metro train may be reserved for women passengers,butBMRCL says it cannot install a signboard to that effect on it. Reason: The train does not take a U-turnattheterminal,instead, runs in the reverse while starting from the other end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X