ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲೇ ಇದು ಅತಿ ವೈಶಿಷ್ಟ್ಯ ಕಾರ್ ಪಾರ್ಕ್: ಆರ್ ಅಶೋಕ್

|
Google Oneindia Kannada News

ಬೆಂಗಳೂರು ಫೆಬ್ರವರಿ 27: ರಾಜ್ಯದಲ್ಲೇ ಅತಿ ವಿಶಿಷ್ಟವಾದ ಕಾರ್ ಪಾರ್ಕ್ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿದೆ. ಇದನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಶ್ಲಾಘಿಸಿದರು.

ನಗರದ ಬೊಮ್ಮನಹಳ್ಳಿ ವಾರ್ಡ್‍ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾರ್ ಪಾರ್ಕಗೆ ಚಾಲನೆ ನೀಡಿ ಮಾತನಾಡಿದರು. ಯಾವಾಗಲೂ ಹೊಸತನ್ನೇ ನೀಡಬೇಕು ಎನ್ನುವ ಕನಸು ಕಾಣುವ ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್ ಬಹಳ ಅತ್ಯದ್ಭುತವಾದ ಪಾರ್ಕನ್ನು ನಿರ್ಮಿಸಿದ್ದಾರೆ. ಈ ಪಾರ್ಕನ್ನು ನೋಡಲು ಎರಡು ಕಣ್ಣುಗಳೂ ಸಾಲದು ಎಂದರು.

ಬೊಮ್ಮನಹಳ್ಳಿಯಲ್ಲಿ ರಾಜ್ಯದ ಮೊದಲ ಕಾರ್ ಪಾರ್ಕ್ ನಿರ್ಮಾಣಬೊಮ್ಮನಹಳ್ಳಿಯಲ್ಲಿ ರಾಜ್ಯದ ಮೊದಲ ಕಾರ್ ಪಾರ್ಕ್ ನಿರ್ಮಾಣ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಬಿಎಂಪಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದಲ್ಲೇ ವಿಶಿಷ್ಟವಾದ ಪಾರ್ಕ್ ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವುದು ಬಹಳ ಸಂತಸದ ವಿಷಯ. ರಾಮ್ ಮೋಹನ್ ರಾಜ್ ಅವರ ಕಲ್ಪನೆ ಇಲ್ಲಿ ಸಾಕಾರಗೊಂಡಿದೆ ಎಂದರು.

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ವಾರ್ಡ ನಲ್ಲಿ ಹಲವಾರು ಅಭಿವೃದ್ದಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಸದ ಕ್ವಾರಿಯನ್ನು ಪರಿವರ್ತಿಸುವ ಮೂಲಕ ಬಂಡೇ ಪಾರ್ಕ್ ಸೇರಿದಂತೆ ಹಲವಾರು ಆಟದ ಮೈದಾನಗಳನ್ನು ನಿರ್ಮಿಸಲಾಗಿದೆ. ಇಂತಹ ಹಲವಾರು ಅಭಿವೃದ್ದಿ ಕಾರ್ಯಗಳು ಇನ್ನೂ ನಡೆಯಲಿವೆ ಎಂದರು.

ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್

ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್

ಕಾರ್ಯಕ್ರಮದ ರೂವಾರಿ ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್ ಮಾತನಾಡಿ, ನೂರು ಅಡಿ ಎತ್ತರಕ್ಕೆ ಜೋಡಿಸಿಟ್ಟ ವಿಂಟೇಜ್ ಕಾರ್ ಗಳು. 3 ಸಾವಿರ ಜನರು ಒಟ್ಟಿಗೆ ಕುಳಿತು ಸಂಭ್ರಮಿಸಬಹುದಾದ ಅತ್ಯಾಧುನಿಕ ಸಾಮಗ್ರಿಗಳನ್ನು ಹೊಂದಿರುವ ಬಯಲು ರಂಗ ಮಂದಿರ. ಕಿವಿಗೆ ತಂಪು ನೀಡುವ ಹಕ್ಕಿಗಳ ಕಲವರವ. ಸಮುದ್ರದ ಮರಳಿನ ಮೇಲೆ ಮಕ್ಕಳಿಗೆ ಕುಣಿದಾಡಲು ಅವಕಾಶ ಮಾಡಿ ಕೊಡುವ ಸ್ಯಾಂಡ್ ಪಿಟ್, ಆಮೆಗಳ ಹಾಗೂ ಮೊಲಗಳ ಸದ್ದು... ಇವು ಫೆಬ್ರವರಿ 27 ರಂದು ಬೊಮ್ಮನಹಳ್ಳಿಯಲ್ಲಿ ಉದ್ಘಾಟನೆಯಾದ ರಾಜ್ಯದ ಮೊದಲ "ಕಾರ್ ಪಾರ್ಕ್" ನ ಹೈಲೈಟ್ಸ್.

ಬಳಕೆಯಾಗದೇ ಇದ್ದ ಜಾಗ ಈಗ ಹೆಸರುವಾಸಿ

ಬಳಕೆಯಾಗದೇ ಇದ್ದ ಜಾಗ ಈಗ ಹೆಸರುವಾಸಿ

ಹಲವಾರು ವರ್ಷಗಳಿಂದ ಸಮರ್ಪಕವಾಗಿ ಬಳಕೆಯಾಗದೇ ಇದ್ದ ಜಾಗವನ್ನು ರಾಜ್ಯದಲ್ಲೆ ಹೆಸರುವಾಸಿ ಯಾಗುವಂತೆ ಮಾಡಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ ಅವರ ಸಹಕಾರದಿಂದಾಗಿ ರಾಜ್ಯದಲ್ಲೇ ಇಲ್ಲದಂತಹ ಉದ್ಯಾನವನ್ನು ನಿರ್ಮಿಸಲು ಸಾಧ್ಯವಾಗಿದೆ.

ಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಉದ್ಯಾನವನಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಉದ್ಯಾನವನ

ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರ

ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರ

ವಾರ್ಡ್ ನ ಜನರು ಮೂಲಭೂತ ಸೌಕರ್ಯಗಳ ಜೊತೆಯಲ್ಲಿಯೇ ಆರೋಗ್ಯಕರವಾದ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿತ್ತು. ಯುವ ಜನರಲ್ಲಿ ಮೊಬೈಲ್ ಗೀಳನ್ನು ಬಿಡಿಸಿ ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ಈ ಹಿನ್ನಲೆಯಲ್ಲಿ ಮಕ್ಕಳಾಟಕ್ಕೆ ಅಗತ್ಯವಾದ ಸಲಕರಣೆಗಳು. ಓಪನ್ ಜಿಮ್ ಹಾಗೂ ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರವನ್ನು ಇಲ್ಲಿ ನಿರ್ಮಿಸಿದ್ದೇವೆ ಎಂದರು.

ಶಾಸಕರಾದ ಸತೀಶ್ ರೆಡ್ಡಿ

ಶಾಸಕರಾದ ಸತೀಶ್ ರೆಡ್ಡಿ

ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ ಅವರ ಸಹಕಾರದಿಂದಾಗಿ ರಾಜ್ಯದಲ್ಲೇ ಇಲ್ಲದಂತಹ ಉದ್ಯಾನವನ್ನು ನಿರ್ಮಿಸಲು ಸಾಧ್ಯವಾಗಿದೆ. ವಾರ್ಡ್ ನ ಜನರು ಮೂಲಭೂತ ಸೌಕರ್ಯಗಳ ಜೊತೆಯಲ್ಲಿಯೇ ಆರೋಗ್ಯಕರವಾದ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿತ್ತು.

English summary
Karnataka's First Car Park inaugurated by BBMP Mayor Gangambika Mallikarjuna, Former Deputy Chief Minister R Ashok, MLA Sathish Reddy & BBMP Corporator Ram Mohan Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X