ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವು

|
Google Oneindia Kannada News

ಜೀವವೈವಿಧ್ಯ ವನ ನಿರ್ಮಾಣ ಕಾರ್ಯದ ಮೊದಲ ಕ್ಯಾಂಪ್ ಆರಂಭವಾಗಿದ್ದು ವಿ.ವಿ.ಆವರಣದ ಯೋಗಾ ಕೇಂದ್ರದಲ್ಲಿ. ಇದೀಗ ಅದೇ ವನವನ್ನು ಯೋಗಾ ವಿ.ವಿ. ನಿರ್ಮಿಸಲು ಧ್ವಂಸ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದೆಂಥ ವಿಪರ್ಯಾಸ...

ಹೌದು. ಬೆಂಗಳೂರು ವಿ.ವಿ. ಜ್ಞಾನಭಾರತಿ ಆವರಣದಲ್ಲಿ ಜೀವ ವೈವಿಧ್ಯವನ ನಿರ್ಮಾಣ ಕಾರ್ಯಕ್ಕೆ ಸುಮಾರು 300 ವಿದ್ಯಾರ್ಥಿ ಸ್ವಯಂಸೇವಕರ ಮೊದಲ ಕ್ಯಾಂಪ್ ನಡೆದದ್ದು ವಿವಿ ಆವರಣದ ಯೋಗಾ ಕೇಂದ್ರದಲ್ಲಿ. ನಾನಂದು ರಿಜಿಸ್ಟ್ರೇಶನ್ ಡೆಸ್ಕಿನಲ್ಲಿ ರಾಸೇಯೋ ಅಧಿಕಾರಿಗಳಾದ ಕುಂಟೋಜಿ ಮತ್ತೊಬ್ಬರೊಂದಿಗೆ ಕುಳಿತಿದ್ದೆ. 250 ವಿದ್ಯಾರ್ಥಿಗಳನ್ನು ಅಕಾಮಡೇಟ್ ಮಾಡುವ ಕ್ಯಾಂಪ್ ಅದು. ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಬರುತ್ತಿದ್ದರು.

ಮುಂದಿನ ಪೀಳಿಗೆಯ ಉಸಿರುಗಟ್ಟಿಸುವ ಕೆಲಸ ಆಗಬಾರದು...ಮುಂದಿನ ಪೀಳಿಗೆಯ ಉಸಿರುಗಟ್ಟಿಸುವ ಕೆಲಸ ಆಗಬಾರದು...

ಒಂದು ಘಳಿಗೆ ರಿಜಿಸ್ಟ್ರೇಷನ್ ನಿಲ್ಲಿಸಿ ಪ್ರೊ. ರೇಣುಕಪ್ಪ ಅವರಿಗೆ ತಿಳಿಸಿದೆ. ಅವರು ಎಂದಿನ ಶೈಲಿಯಲ್ಲಿ 'ಹೆಸ್ರು ಬರ್ಕೋಳಕೇಳು ಗುರೂ ಆಮೇಲೆ ನೋಡಾನ' ಅಂದರು. ನಾನು ಹೆಸರುಗಳನ್ನು ದಾಖಲಿಸುವ ಹೊತ್ತಿಗೆ ಹೆಡ್ ಆಫೀಸಿಗೋಗಿ ಆಗಿನ ಕುಲಪತಿ ಡಾ ಕೆ.ಸಿದ್ದಪ್ಪನವರ ಬಳಿ 50-80 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅನುದಾನವನ್ನು ಕೋರಿ ಒಪ್ಪಿಗೆ ಪಡೆದು ಬಂದರು. ಮುಂದೆ ಓದಿ...

ಜೀವವೈವಿಧ್ಯ ವನದ ಕ್ಯಾಂಪ್

ಜೀವವೈವಿಧ್ಯ ವನದ ಕ್ಯಾಂಪ್

ಗಾಂಧಿ ಭವನದಲ್ಲಿ ಹುಡುಗರು, ಯೋಗಾ ಕೇಂದ್ರದಲ್ಲಿ ಹುಡುಗಿಯರ ವಾಸ್ತವ್ಯ. ಮೊದಲ ಹಂತದ ಜೀವವೈವಿಧ್ಯವನದ ಕೆಲಸ ವಿವಿ ಅತಿಥಿ ಗೃಹದ ಹಿಂಭಾಗದಲ್ಲಿ ಮತ್ತು ಕುಲಪತಿಗಳ ನಿವಾಸದ ಹಿಂಭಾಗ ಸಸಿಗಳನ್ನು ನೆಡುವುದು. ನಮ್ಮ ಕ್ಯಾಂಪಿಗೆ ಜೀವವೈವಿಧ್ಯವನದ ಸಲಹೆಗಾರರಾದ ಯಲ್ಲಪ್ಪರೆಡ್ಡಿ ಆಗಾಗ ಭೇಟಿ ಕೊಡುತ್ತಿದ್ದರು. ಒಂದು ದಿನ ಹೀಗಾಯಿತು...

ಸ್ವಯಂಸೇವಕರು ಶ್ರಮದಾನದಲ್ಲಿ ತೊಡಗಿದ್ದಾಗ ಹಾವು ಕಂಡಿದೆ. ತತ್ ಕ್ಷಣ ಹೊಡೆದು ಸಾಯಿಸಿದ್ದಾರೆ. ಅಂದೇ ಯಲ್ಲಪ್ಪರೆಡ್ಡಿ ಶ್ರಮದಾನ ವೀಕ್ಷಿಸಲು ಬಂದಿದ್ದರು. ಆ ಬಗ್ಗೆ ಅದೇ ಸ್ವಯಂಸೇವಕರ ಗುಂಪಿನಲ್ಲಿದ್ದವರೊಬ್ಬರು ಹಾವು ಕೊಂದ ವಿಷಯದ ಬಗ್ಗೆ ಯಲ್ಲಪ್ಪರೆಡ್ಡಿ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತತ್ ಕ್ಷಣ ಎಲ್ಲರನ್ನೂ ಅಲ್ಲಿಯೇ ಸೇರಲು ಹೇಳಿ ಜೀವವೈವಿಧ್ಯತೆಯ ಮಹತ್ವ, ಆಹಾರ ಸರಪಳಿ ಮುಂತಾಗಿ ಪಾಠ ಮಾಡಿದ್ದಲ್ಲದೆ ಮತ್ತೆಂದೂ ಯಾವುದೇ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡಬಾರದೆಂದು ಮನವಿ ಮಾಡಿಕೊಂಡರು. ಅಲ್ಲಿಂದಾಚೆಗೆ ಮುಂದಿನ ಹದಿನೈದಿಪ್ಪತ್ತು ಕ್ಯಾಂಪ್ ಶುರುವಿನ ದಿನವೇ ನಾವು ಸ್ವಯಂಸೇವಕರಿಗೆ ಹೇಳುತ್ತಿದ್ದ ಮೊದಲ ಪಾಠ "ಯಾವ ಪ್ರಾಣಿ ಪಕ್ಷಿ, ಹಾವು ಚೇಳುಗಳನ್ನು ಕೊಲ್ಲುವಂತಿಲ್ಲ" ಎಂಬುದಾಗಿತ್ತು. ಸ್ವಯಂಸೇವಕರು ಹಾಗೆಯೇ ನಡೆದುಕೊಳ್ಳುತ್ತಿದ್ದರು.

 ಮೊದಲ ಕ್ಯಾಂಪ್ ನ ಒಂದು ಘಟನೆ...

ಮೊದಲ ಕ್ಯಾಂಪ್ ನ ಒಂದು ಘಟನೆ...

ಕ್ಯಾಂಪ್ ಆರಂಭದ ದಿನ ನಡೆದ ಒಂದು ಸಣ್ಣ ಘಟನೆ ಹೇಳಬೇಕು. ರಿಜಿಸ್ಟ್ರೇಶನ್ ನಡೀವಾಗ ಆಟೋ ಒಂದರಲ್ಲಿ ಬಂದಿಳಿದ ಇಬ್ಬರು ಹುಡುಗಿಯರು ಕ್ಯೂನಲ್ಲಿ ನಿಲ್ಲಲಿಲ್ಲ. ನೇರ ನನ್ನ ಬಳಿ ಬಂದು ತಾವು ಜ್ಯೋತಿನಿವಾಸ್ ಕಾಲೇಜಿನಿಂದ ಬಂದಿರುವುದಾಗಿ ಹೇಳಿ ಕಾಲೇಜಿನ ಪತ್ರ ತೋರಿದರು. ಕ್ಯೂನಲ್ಲಿ ಬರಹೇಳಿದೆ. ಅಲ್ಲಿಂದ ಹೊರಟರಾದರೂ ಕ್ಯೂ ನಲ್ಲಿ ನಿಲ್ಲಲಿಲ್ಲ. ಅಲ್ಲಿಯೇ ಅಡ್ಡಾಡಿಕೊಂಡಿದ್ದರು. ಕ್ಯೂ ಎಲ್ಲಾ ಮುಗಿದ ಮೇಲೆ ಬಂದು ಹೆಸರು ಬರೆಸಿದರು. ಅವರು ಉಳಿಯಲು ಏರ್ಪಾಡು ಮಾಡಿದ್ದ ಜಾಗ ತೋರಿದೆವು. Oh... no cot. Its impossible to stay here ಅಂದರು. ಅಲ್ಲಿಂದ ನಾನು ಹೊರಟೆ.

ಸಂಜೆ ಹೊತ್ತಿಗೆ ಯೋಗಾ ಕೇಂದ್ರದ ಹಾಲ್ ನಲ್ಲಿ ಎಲ್ಲಾ ಸ್ವಯಂಸೇವಕರು ಕುಳಿತಿದ್ದರು. ಆ ಹುಡುಗಿಯರೂ ಕೂಡ. ಟೀ ಬ್ರೇಕ್, ಲಂಚ್ ಬ್ರೇಕ್ ಗಳಲ್ಲಿ ಹಾಗಿರ್ಬೇಕು ಹೀಗಿರ್ಬೇಕು ಫೆಸಿಲಿಟೀಸ್ ಎಂದು ಹೇಳಿಕೊಳ್ಳುತ್ತಿದ್ದರು. ನೀವು ಸರಿಯಾಗೇ ಯೋಚಿಸ್ತಿದ್ದೀರಿ ಎಂದಷ್ಟೇ ಹೇಳುತ್ತಿದೆ. ಅವರೇಳುವ ವ್ಯವಸ್ಥೆ ಮಾಡಬೇಕಂದ್ರೆ ಅಶೋಕ ಹೋಟೆಲ್ ನಲ್ಲಿ ರೂಮ್ ಕೊಟ್ಟು ಗಾಲ್ಫ್ ಕ್ಲಬ್ಬಲ್ಲಿ ಶ್ರಮದಾನ ಮಾಡಿಸಬೇಕಷ್ಟೇ ಅಂದುಕೊಂಡು ಸುಮ್ಮನಾಗುತ್ತಿದ್ದೆ.

 ಜೀವ ವೈವಿಧ್ಯ ತಾಣದ ಭೂಮಿ ಪರಭಾರೆ; ಬೆಂಗಳೂರು ವಿವಿ ವಿವಾದ ಜೀವ ವೈವಿಧ್ಯ ತಾಣದ ಭೂಮಿ ಪರಭಾರೆ; ಬೆಂಗಳೂರು ವಿವಿ ವಿವಾದ

 ಗಿಡ ನೆಡಲು ಹೇಳಿ ಹೋಗಿದ್ದೆ

ಗಿಡ ನೆಡಲು ಹೇಳಿ ಹೋಗಿದ್ದೆ

ಶ್ರಮದಾನ ಮಾಡುವಾಗ ತಂಡದ ಟಾರ್ಗೆಟ್ ಮುಟ್ಟುವಲ್ಲಿ ಇವರ ಪಾತ್ರ ಕಾಣುತ್ತಿರಲಿಲ್ಲ. ಒಂದು ದಿನ ಅವರಿಬ್ಬರನ್ನೇ ಕರೆದು ಐದು ಗುಂಡಿ ಹೊಡೆದು ಐದು ಗಿಡ ನೆಡಲೇಬೇಕು. ಪ್ರಯತ್ನ ಮಾಡಿ ಎಂದು ಹೇಳಿ ಹೋದೆ. ಆ ಕೆಲಸ ಅವರಿಂದ ಸಾಧ್ಯವಾಗಿತ್ತು.
ಕಡೆಯದಾಗಿ ಕ್ಯಾಂಪ್ ನಿಂದ ಹೊರಡುವ ದಿನ ಅವರಿಬ್ಬರ ಮುಖದಲ್ಲೂ ಒಂದು ಸಾರ್ಥಕ ಭಾವ, ಹೊಸದೇನನ್ನೋ ಕಲಿತ ಭಾವ, ಎಲ್ಲರೊಳಗೊಂದಾಗಿ ಬದುಕಬಹುದೆಂದು ಅರಿತ ಭಾವವನ್ನು ಕಂಡೆ. Sir... This is a lifetime experience to both of us. We come from different background. Learnt many things. thanks ಅಂದರು. ಥ್ಯಾಂಕ್ಸ್ ರಾ.ಸೇ.ಯೋಜನೆಗೆ ಹೇಳಿ. ಜಯವಾಗಲಿ ಹೋಗಿ ಬನ್ನಿ ಎಂದಷ್ಟೇ ಹೇಳಿದೆ.

Recommended Video

ಇದೆ ನೋಡಿ NASA ಹೊಸ ದಾಖಲೆ | Oneindia Kannada
 ಅವರೇ ಬೆಳೆಸಿದ್ದ ವನವನ್ನು ಕಾಯಲು ಬದ್ಧರಾಗಿದ್ದಾರೆ

ಅವರೇ ಬೆಳೆಸಿದ್ದ ವನವನ್ನು ಕಾಯಲು ಬದ್ಧರಾಗಿದ್ದಾರೆ

ಈ ಹುಡುಗಿಯರು ಉದಾರಹಣೆಯಷ್ಟೇ. ಹತ್ತಾರು ಪುಂಡ ಹುಡುಗರು ಕ್ಯಾಂಪ್ ಗಳಲ್ಲಿ ಮಾಗಿದ್ದನ್ನು ಕಂಡಿದ್ದೇವೆ. ಹೊಸ ಮನುಷ್ಯರಾಗಿದ್ದನ್ನು ಕಂಡಿದ್ದೇವೆ. ಜ್ಞಾನ ಭಾರತಿ ಆವರಣದಲ್ಲಿ ಅವರೇ ನೆಟ್ಟ ಗಿಡ ಮರಗಳು ಹುಲುಸಾಗಿ ಆರೋಗ್ಯವಾಗಿ ಬೆಳೆದಂತೆ ನಮ್ಮ ರಾ.ಸೇ.ಯೋ ಸ್ವಯಂಸೇವಕರೂ ಬೆಳೆದಿದ್ದಾರೆ. ಈಗ ಅವರೇ ನೆಟ್ಟು ಬೆಳೆಸಿದ ವನವನ್ನು ಕಾಯ್ದುಕೊಳ್ಳಲು ಬದ್ಧರಾಗಿದ್ದಾರೆ.

English summary
The first camp for biodiversity work was started at Bangalore University campus yoga center. But now, it is decided to demolish park for building Yoga University,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X