ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮೊದಲ ಬಾರಿ ಕೋವಿಡ್ ವ್ಯಕ್ತಿಯ ಶವಪರೀಕ್ಷೆ: ಕುತೂಹಲಕಾರಿ ಸಂಗತಿ ಬಹಿರಂಗ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಕೊರೊನಾ ವೈರಸ್ ಸಾವಿನ ಪ್ರಕರಣಗಳು ವರದಿಯಾದ 6-7 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ರೋಗಿಯ ದೇಹವನ್ನು ಬೆಂಗಳೂರಿನಲ್ಲಿ ಶವಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಕೆಲವು ಅಪರೂಪದ ಸಂಗತಿಗಳು ಬಹಿರಂಗವಾಗಿದೆ.

ಕೋವಿಡ್ ಸೋಂಕಿತ ರೋಗಿಯೊಬ್ಬರು ಮೃತಪಟ್ಟ 15 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ಪರಿಣತ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್‌ನ ಡಾ. ದಿನೇಶ್ ರಾವ್ ಅವರಿಗೆ, ಮೃತವ್ಯಕ್ತಿಯ ಮುಖದ ಚರ್ಮ, ಕುತ್ತಿಗೆ ಅಥವಾ ಉಸಿರಾಟದ ಮಾರ್ಗ ಸೇರಿದಂತೆ ಒಳಾಂಗಗಳು ಹಾಗೂ ಶ್ವಾಸಕೋಶದಲ್ಲಿ ಯಾವುದೇ ವೈರಸ್ ಪತ್ತೆಯಾಗಿಲ್ಲ. ದೇಹದ ಅನೇಕ ಕಡೆಗಳಿಂದ ಅವರು ಸ್ವಾಬ್ ಸಂಗ್ರಹಿಸಿದ್ದು, ಅವುಗಳಲ್ಲಿ ವೈರಸ್ ಕಂಡುಬಂದಿಲ್ಲ.

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಒಂದು ಲಕ್ಷ ಕೊರೊನಾ ಪರೀಕ್ಷೆಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಒಂದು ಲಕ್ಷ ಕೊರೊನಾ ಪರೀಕ್ಷೆ

ಆದರೆ ಕೋವಿಡ್‌ನಿಂದ ಮೃತಪಟ್ಟ 60 ವರ್ಷದ ಪುರುಷನ ಮೂಗು ಮತ್ತು ಗಂಟಲಿನಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ವೈರಸ್ ಕಂಡುಬಂದಿದೆ. ಸಾಮಾನ್ಯವಾಗಿ ಮೃದುವಾದ ಸ್ಪಾಂಜ್ ಚೆಂಡಿನಂತೆ ಇರುವ ಶ್ವಾಸಕೋಶಗಳು ಈ ಮೃತವ್ಯಕ್ತಿಯಲ್ಲಿ ಲೆದರ್ ಚೆಂಡಿನಂತೆ ಗಟ್ಟಿಯಾಗಿತ್ತು ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಮುಂದೆ ಓದಿ.

ಹೆಪ್ಪುಗಟ್ಟಿದ್ದ ರಕ್ತ

ಹೆಪ್ಪುಗಟ್ಟಿದ್ದ ರಕ್ತ

'ಶ್ವಾಸಕೋಶಗಳು ಸಾಮಾನ್ಯವಾಗಿ 600-700 ಗ್ರಾಂ ತೂಕ ಇರುತ್ತವೆ. ಆದರೆ ಈ ಕೋವಿಡ್ ವ್ಯಕ್ತಿಯ ಶ್ವಾಸಕೋಶಗಳು ಸೇರಿ 2.1 ಕೆಜಿ ಇದ್ದವು. ಹಾಗೆಯೇ ಅದರ ಮೇಲ್ಮೈ ಮೃದು ಅಥವಾ ಸ್ಪಾಂಜಿಯಾಗಿರಲಿಲ್ಲ. ಲೆದರ್‌ನಂತೆ ಇತ್ತು. ಶ್ವಾಸಕೋಶದಲ್ಲಿ ರಕ್ತ ಹೆಪ್ಪಗಟ್ಟಿದ್ದವು. ಶ್ವಾಸಕೋಶದ ಮೇಲೆ ವೈರಸ್ ಮಾಡಿರುವ ದಾಳಿ ಆಘಾತ ಮೂಡಿಸುವಂತಿತ್ತು' ಎಂದು ಡಾ. ದಿನೇಶ್ ರಾವ್ ಹೇಳಿದ್ದಾಗಿ ವರದಿ ತಿಳಿಸಿದೆ.

ಭಾರತದಲ್ಲಿ ವೈರಸ್ ದಾಳಿ ವಿಭಿನ್ನ

ಭಾರತದಲ್ಲಿ ವೈರಸ್ ದಾಳಿ ವಿಭಿನ್ನ

14 ದಿನಕ್ಕೂ ಹೆಚ್ಚು ಸಮಯ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು. ಇಟಲಿ ಅಥವಾ ಜಗತ್ತಿನ ಬೇರೆ ದೇಶಗಳಲ್ಲಿ ಕಂಡುಬಂದ ವೈರಸ್ ಸ್ವರೂಪಕ್ಕಿಂತ ಭಾರತದಲ್ಲಿ ವಿಭಿನ್ನವಾಗಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಉದಾಹರಣೆಗೆ ಭಾರತೀಯ ರೋಗಿಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್ ದಾಳಿ ನಡೆಸುವ ರೀತಿ ವಿಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವುಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು

ಮತ್ತಷ್ಟು ಸಂಶೋಧನೆ ನಡೆಯಬೇಕು

ಮತ್ತಷ್ಟು ಸಂಶೋಧನೆ ನಡೆಯಬೇಕು

ಈ ಅಧ್ಯಯನ ಶೀಘ್ರದಲ್ಲಿಯೇ ವೈಜ್ಞಾನಿಕ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಳ್ಳಲಿದೆ. ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಕಾಯಿಲೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದಿದ್ದಾರೆ.

ಮೃತದೇಹ ಸ್ಪರ್ಶಿಸಬಹುದೇ?

ಮೃತದೇಹ ಸ್ಪರ್ಶಿಸಬಹುದೇ?

ಮೃತ ವ್ಯಕ್ತಿಯ ದೇಹ ಸ್ಪರ್ಶಿಸಲು ಅವರ ಸಂಬಂಧಿಕರಿಗೆ ಅವಕಾಶ ನೀಡುವ ವಿಚಾರದಲ್ಲಿ ಕೂಡ ಮತ್ತಷ್ಟು ಅಧ್ಯಯನ ನಡೆಯಬೇಕಿದೆ. ವ್ಯಕ್ತಿ ಸತ್ತಾಗ ವೈರಸ್ ಕೂಡ ಸಾಯಬಹುದು. ಆದರೆ ಬ್ಯಾಕ್ಟೀರಿಯಾ ಸೋಂಕುಗಳು ಹೆಚ್ಚುವ ಅಪಾಯವಿರುತ್ತದೆ ಎಂದು ತಿಳಿಸಿದ್ದಾರೆ.

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada

English summary
Forensic Expert Dr Dinesh Rao has conducted first auopsy on Covid-19 victim in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X