• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಡಿಕೆ ಬೆಳೆಗಾರರ ಮಾನ ಕಾಪಾಡಿದ ಚಹಾಕ್ಕೆ ಒಂದು ವರ್ಷ

By Prasad
|

ಬೆಂಗಳೂರು, ಜನವರಿ 24 : ವಿಶ್ವದ ಮೊದಲ, ವಿಶ್ವದರ್ಜೆಯ ಸ್ವದೇಶಿ ಉತ್ಪನ್ನವಾಗಿರುವ; ಆರೋಗ್ಯವರ್ಧಕ ಪೇಯ ಅರೇಕಾ ಟೀ' ಗೆ ಈಗ ಒಂದು ವರ್ಷ. ಸಾಂಪ್ರದಾಯಿಕ ಅಡಿಕೆ ಚಹಾ ಇಂದು ಅರೇಕಾ ಟೀ' ಆಗಿ ರೂಪುಗೊಳ್ಳಲು ಅಡಿಕೆ ಬೆಳೆಗಾರರು ನೀಡಿದ ಬೆಂಬಲ ಕಾರಣ. ಧನ್ಯವಾದಗಳು ಅಡಿಕೆ ಬೆಳೆಗಾರರೇ.

ಈ ಅಪ್ಪಟ ದೇಶಿ ಉತ್ಪನ್ನ ಆರಂಭವಾದ ಒಂದು ವರ್ಷದಲ್ಲೇ ವಿದೇಶಿ ಮಾರುಕಟ್ಟೆಗಳಿಗೂ ಲಗ್ಗೆ ಇಟ್ಟಿದೆ. ಈ ಸವಿನೆನಪಿನಲ್ಲಿ ಗ್ರೀನ್ ರೆಮಿಡೀಸ್ ಸಂಸ್ಥೆ ರೈತರನ್ನು ಅಭಿನಂದಿಸಲು ನಿರ್ಧರಿಸಿದೆ.[ಅಡಿಕೆ ಚಹಾಗೆ ವರ್ಷದ ಸಂಭ್ರಮ, ಜ.24ಕ್ಕೆ ಪತ್ರಿಕಾಗೋಷ್ಠಿ]

ಬದಲಾದ ಜೀವನ ಶೈಲಿ, ನಿಯಂತ್ರಣವಿಲ್ಲದ ಆಹಾರ ಸೇವನೆಯಿಂದ ನಮ್ಮ ಶರೀರ ಮಧುಮೇಹದ ಗೂಡಾಗುತ್ತಿದೆ. ಭಾರತವಂತೂ ಮಧುಮೇಹದ ತವರು ಎನಿಸಿಕೊಳ್ಳುತ್ತಿದೆ. ಇತ್ತೀಚಿನ ಆರೋಗ್ಯ ವರದಿಗಳಲ್ಲಿ ಮಧುಮೇಹಕ್ಕೆ ಮೊದಲ ಸ್ಥಾನ. ಕೇಂದ್ರ ಸರ್ಕಾರವಂತೂ ಮಧುಮೇಹ ಮುಕ್ತ ಭಾರತ' ಅಭಿಯಾನವನ್ನೇ ಆರಂಭಿಸಿಬಿಟ್ಟಿದೆ. ಇದಕ್ಕೆ ಪೂರಕವಾಗಿ ಗ್ರೀನ್ ರೆಮಿಡೀಸ್‌ನ ಅರೇಕಾ ಟೀ ಸಹ ಸ್ವಯಂಪ್ರೇರಣೆಯಿಂದ ಮಧುಮೇಹ ತಡೆ ಅಭಿಯಾನವನ್ನು ಶುರುಮಾಡಿದೆ.

ವಿಶೇಷವೆಂದರೆ, ವೈದ್ಯರ ನೆರವು ಮತ್ತು ಸಲಹೆ, ಸೂಚನೆಯೊಂದಿಗೆ ಅನೇಕ ಮಧುಮೇಹ ರೋಗಿಗಳಿಗೆ ಅರೇಕಾ ಟೀ ನೀಡಲಾಗುತ್ತಿದೆ. ವಿಶೇಷವಾಗಿ ವೈದ್ಯರೂ ಸಹ ಮಧುಮೇಹ ನಿಯಂತ್ರಣಕ್ಕೆ ರೋಗಿಗಳಿಗೆ ಅರೇಕಾ ಟೀ ಬಳಸುವಂತೆ ಸಲಹೆ ನೀಡುತ್ತಿದ್ದಾರೆ. ಅರೇಕಾ ಟೀ ಸಮಾಜಕ್ಕೆ ವ್ಯಾಪಕವಾಗಿ ಪ್ರಚಾರಗೊಳಿಸುತ್ತಿರುವ ಗ್ರೀನ್ ರೆಮಿಡಿಸ್ ಇದಕ್ಕೆ ಪೂರಕ ಸಹಕಾರ ನೀಡುತ್ತಿದೆ. ಈ ಮೂಲಕ ಅರೇಕಾ ಟೀ ಮಧುಮೇಹ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಅರೇಕಾ ಟೀ ಸಾಮಾಜಿಕ ಹೆಜ್ಜೆ ಇರಿಸಿದೆ.

ದೇಶಿ ಉತ್ಪನ್ನ ಅರೇಕಾ ಟೀ ಕುರಿತು ವ್ಯಾಪಕ ಪ್ರಚಾರದ ಸಹಕಾರ ನೀಡುತ್ತಿರುವ ಮಾಧ್ಯಮ ಮಿತ್ರರಿಗೆ ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ ಹಾಗೂ ಗ್ರೀನ್ ರೆಮಿಡಿಸ್‌ನ ಎಂಡಿ ವೇಣುಗೋಪಾಲ್ ಹೆಬ್ಬಾರ್ ಅವರಿಂದ ಹೃತ್ಪೂರ್ವಕ ಅಭಿನಂದನೆ.

ಏನಿದು ಅರೇಕಾ ಟೀ? : ಸಾಮಾನ್ಯ ಅಡಿಕೆ ಮತ್ತು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಟೀ ಪೌಡರ್ ಇದು. ಶೇ.80ರಷ್ಟು ಚಿಟ್ಟಿ ಅಡಿಕೆಯನ್ನು ಸಂಸ್ಕರಿಸಿ ಮತ್ತು ಇದಕ್ಕೆ ಶೇ. 20ರಷ್ಟು ವಿವಿಧ ಗಿಡಮೂಲಿಕೆಗಳನ್ನು ಸೇರಿಸಿ ವಿಶೇಷ ಟೀ ಪೌಡರ್ ತಯಾರಿಸಲಾಗಿದೆ. ಇದಕ್ಕೆ ಅರೇಕಾ ಟೀ' ಎಂದು ಹೆಸರಿಸಲಾಗಿದೆ. ಗ್ರೀನ್ ಟೀಯಂತೆಯೇ ಇದೂ ಸಹ ಆರೋಗ್ಯಕರ ಪಾನೀಯ ಎಂದು ಪ್ರಯೋಗಗಳ ಮೂಲಕ ಸಾಬೀತಾಗಿದೆ.

ನಿವೇದನ್ ನಂಪೆ : ಗುಟುಕಾದಿಂದ ಮಾನ ಕಳೆದುಕೊಂಡಿದ್ದ ಅಡಿಕೆಯೊಳಗೆ ಇಂಥ ಅದ್ಭುತ ಔಷಧೀಯ ಗುಣಗಳಿಗೆ ಎಂಬುದನ್ನು ಕಂಡುಕೊಂಡಿದ್ದೇ ಈ ನಿವೇದನ್ ನಂಪೆ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಎಂಬ ಹಳ್ಳಿಯಲ್ಲಿ. ಓದಿದ್ದು ಆಸ್ಟ್ರೇಲಿಯಾದ ಸ್ವಿಂಬರ್ನ್ ವಿಶ್ವವಿದ್ಯಾಲಯದಲ್ಲಿ.

ಉತ್ಪಾದನೆ ಮತ್ತು ಮಾರುಕಟ್ಟೆ ಎಂಬ ವಿಷಯದಲ್ಲಿ ವಿದೇಶಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದ ನಿವೇದನ್‌ಗೆ 6 ಲಕ್ಷ ರೂಪಾಯಿ ಸಂಬಳ ಕೈಬೀಸಿ ಕರೆಯುತ್ತಿತ್ತು. ಅದೇ ಹೊತ್ತಲ್ಲಿ ರಾಜ್ಯದಲ್ಲಿ ಗುಟಕಾ ನಿಷೇಧಗೊಂಡಿತ್ತು. ಅಡಿಕೆಯಲ್ಲಿ ವಿಷಕಾರಕ ಅಂಶಗಳಿವೆ ಎಂಬ ಗುಲ್ಲೆದ್ದಿತ್ತು. ಇದರಿಂದ ರಾಜ್ಯದ 6 ಲಕ್ಷ ಅಡಿಕೆ ಬೆಳೆಗಾರರು ಕಂಗಾಲಾಗಿಹೋಗಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವದೇಶಕ್ಕೆ ಮರಳಿದ ನಿವೇದನ್, ಅಡಿಕೆಯ ಮಾನ ಉಳಿಸೋಕೆ ಮುಂದಾದರು.

ಭಾರತೀಯ ಸಂಪ್ರದಾಯದಲ್ಲಿ ಬೆರೆದುಹೋಗಿದ್ದ ಅಡಿಕೆಯೊಳಗಿನ ಗುಣಗಳ ಸಂಶೋಧನೆಯಲ್ಲಿ ತೊಡಗಿದರು. ಅಡಿಕೆಯ ಬಗ್ಗೆ ಇವರಿಗಿದ್ದ ನಂಬಿಕೆ ಹುಸಿಯಾಗಲಿಲ್ಲ. 2015ರಲ್ಲಿ ಅಡಿಕೆಯೊಳಗೆ ಇಂಥ ಅಗಾಧ ಔಷಧೀಯ ಗುಣಗಳಿಗೆ ಎಂಬುದನ್ನು ಪ್ರಯೋಗಗಳ ಮೂಲಕವೇ ಸಾಬೀತುಪಡಿಸಿದರು. 2014-15ರ ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2015ರಲ್ಲಿ ಇನೋವೇಟಿವ್ ಪ್ರೊಡಕ್ಟ್ ಆಫ್ ದಿ ಇಯರ್ ಪ್ರಶಸ್ತಿ. ಇವು ಅಡಿಕೆ ಚಹಾ (ಅರೇಕಾ ಟೀ)ಗೆ ಮೂಡಿರುವ ಹೆಮ್ಮೆಯ ಗರಿಗಳು.

2015ರಲ್ಲಿ ಧರ್ಮಸ್ಥಳ ಶ್ರೀವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಮಾರುಕಟ್ಟೆಗೆ ಬಿಡುಗಡೆಯಾದ ಅರೇಕಾ ಟೀ ಇಂದು ಫೈವ್‌ಸ್ಟಾರ್ ಹೋಟೆಲ್‌ಗಳಿಗೂ ಲಗ್ಗೆ ಇಟ್ಟಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ಅರೇಕಾ ಟೀಯನ್ನು ಕೇಳಿ ಪಡೆದು ಅದರ ಸ್ವಾದವನ್ನು ಸವಿಯುತ್ತಿದ್ದಾರೆ.

English summary
First Area Tea of the World has completed one year. Green Remedies, the makers of the areca tea, wholeheartedly thank the support extended by the areca growers and media, for the grand success of the product.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X