ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ. ಕಾಲೇಜು ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಕೆಲವು ಗೈಡ್​ಲೈನ್ಸ್ ಬಿಡುಗಡೆ ಆಗಿದೆ.

ಶೇಕಡಾ 2ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ತೆರೆಯಲು ಸೂಚನೆ ನೀಡಲಾಗಿದ್ದು, ಏಕಕಾಲದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ನಡೆಸಲಾಗುವುದು ಎಂದು ಹೇಳಲಾಗಿದೆ.

ವಾರದ ಮೊದಲ 3 ದಿನ ಶೇಕಡಾ 50ರಷ್ಟು ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಬೇಕು. ಶೇಕಡಾ 50ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬೇಕು.

First And Second PU Colleges Reopening In Karnataka From August 23- Govt Issues SOPs & Guidelines

ಉಳಿದ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಆನ್​​ಲೈನ್​ ತರಗತಿ ನಡೆಸುವುದು. ಗುರುವಾರ, ಶುಕ್ರವಾರ, ಶನಿವಾರ ಉಳಿದ ವಿದ್ಯಾರ್ಥಿಗಳಿಗೆ ತರಗತಿ​ ನಡೆಸುವ ಬಗ್ಗೆ ಸೂಚನೆ ಕೊಡಲಾಗಿದೆ.

ಆಗಸ್ಟ್ 23 ರಿಂದ ಪಿಯು ಕಾಲೇಜು ತರಗತಿಗಳು ಆರಂಭವಾಗಲಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಏಕಕಾಲಕ್ಕೆ ಆರಂಭ ಆಗಲಿದೆ. ಕಾಲೇಜು ಆರಂಭಿಸುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ನೀಡಿದೆ.

ಪಿಯು ಕಾಲೇಜು ಆರಂಭಕ್ಕೆ ಸೂಚಿಸಿದ ಮಾರ್ಗಸೂಚಿಯ ಇತರೆ ಅಂಶಗಳು ಇಲ್ಲಿದೆ:

* ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆ ಇರಬೇಕು.

* ವಿಶಾಲ ಕೊಠಡಿಗಳಿದ್ದರೆ ವಾರದ ಎಲ್ಲಾ ದಿನ ಭೌತಿಕ ತರಗತಿ ನಡೆಸಬಹುದು.

* ಕಾಲೇಜು ಆವರಣದಲ್ಲಿ ದೈಹಿಕ ಅಂತರ ಕಡ್ಡಾಯವಾಗಿರುತ್ತದೆ.

* ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಕಾಲೇಜು ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು.

* ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಪೋಷಕರ ಒಪ್ಪಿಗೆ ಇರಬೇಕು.

* ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೊವಿಡ್​​- 19 ನೆಗೆಟಿವ್ ವರದಿ ಕಡ್ಡಾಯ.

* ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ಗಮನಿಸಬೇಕು.

* ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯ ಬಳಕೆ .

* ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು, ಎಲ್ಲೆಂದರಲ್ಲಿ ಉಗುಳಬಾರದು.

* ಕಾಲೇಜು ಆರಂಭಕ್ಕೆ ಮುನ್ನ ಇಡೀ ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.

* ಕೋವಿಡ್​ ಸೋಂಕಿತರಿಗೆ ಬಳಸಿದ ಕಟ್ಟಡಗಳನ್ನು ಎರೆಡೆರಡು ಬಾರಿ ಸ್ಯಾನಿಟೈಸ್ ಮಾಡಬೇಕು.

* ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಎಲ್ಲಾ ಚಟುವಟಿಕೆಗಳಿಗೆ ಕೋವಿಡ್ ನಿಯಮ ಕಡ್ಡಾಯ.

* ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1365 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೆ 1,558 ಸೋಂಕಿತರು ಬಿಡುಗಡೆಯಾಗಿ, ರಾಜ್ಯಾದ್ಯಂತ 22 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 21,266 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ.0.76ರಷ್ಟಿದೆ. ಇನ್ನು ಬೆಂಗಳೂರಲ್ಲಿ ಇಂದು 327 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದರೆ, ಸಕ್ರಿಯ ಪ್ರಕರಣ 7,920 ಇವೆ.

Recommended Video

ಕಾಬೂಲ್ ನಲ್ಲಿ ಹಿಂದು ಅರ್ಚಕರ ದೇವಾಲಯ ಪ್ರೇಮ! | Oneindia Kannada

English summary
Karnataka schools will reopening from august 23. Here is the guidelines and SOPs issued by karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X