ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶೋತ್ಸವ ವೇಳೆ ಬೆಂಕಿ ಅವಘಡ ತಪ್ಪಿಸುವುದು ಹೇಗೆ?

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರಲ್ಲಿ ಗಣೇಶ ಚತುರ್ಥಿಗೆ ಸಿದ್ಧತೆ ಆರಂಭವಾಗಿದೆ, ಸೆಪ್ಟೆಂಬರ್ 13ರಂದು ಹಬ್ಬ ನಡೆಯಲಿದ್ದು ಆ ಸಮಯದಲ್ಲಿ ಅಗ್ನಿ ಅವಘಡ ತಡೆಗಟ್ಟಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ತಿಳಿಸಿದೆ.

ಪೆಂಡಾಲ್ ಗಳನ್ನು ರಸ್ತೆಗಳಲ್ಲಿ ನಿರ್ಮಿಸಲಾಬರದು, ಜಿಂಕ್ ಶೀಟ್ ಅಥವಾ ಇತರೆ ಅಗ್ನಿ ನಿರೋಧಕ ವಸ್ತಿಗಳನ್ನು ಬಳಸಬೇಕು, ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಪೆಂಡಾಲ್ ಗಳನ್ನು ತಲುಪಲು ಸೂಕ್ತ ರಸ್ತೆಯ ವ್ಯವಸ್ಥೆಯನ್ನು ಮಾಡಬೇಕು.

ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು

ಪ್ರತಿಯೊಂದು ಪೆಂಡಾಲ್ ನಲ್ಲಿ 5 ಕೆಜಿ ಸಾಮರ್ಥ್ಯದ ಅಗ್ನಿನಂದಕ, ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಫ್ರೇಜರ್ ಮಾದರಿ ಅಗ್ನಿನಂದಕ ಮತ್ತು 2 ಬಕೇಟ್ ಗಳಲ್ಲಿ ಮರಳು ಹಾಗೂ ಎರಡು ಬಕೇಟುಗಳಲ್ಲಿ ನೀರನ್ನು ಇಟ್ಟಿರಬೇಕು.

Fire safety measures during Ganesha festival in public places

ಪ್ರತಿಯೊಂದು ಪೆಂಡಾಲ್ ಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಅಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ರಕ್ಷಣಾ ಕಾರ್ಯಕರ್ತರು ಪೆಂಡಾಲ್ ಗೆ ಪ್ರವೇಶಿಸಿ ಒಳಗಿದ್ದವರನ್ನು ರಕ್ಷಿಸಬಹುದಾಗಿದೆ.ವಿದ್ಯುತ್ ಸಂಪರ್ಕವನ್ನು ನುರಿತ ಕೆಲಸಗಾರರ ಮೂಲಕ ಕಲ್ಪಿಸತಕ್ಕದ್ದು ಹಾಗೂ ತೆರೆದ ವೈರ್‌ಗಳನ್ನು ಇರಿಸಬಾರದು.

ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ

ಪ್ರತಿಯೊಂದು ಪೆಂಡಾಲ್ ನ ಪಕ್ಕದಲ್ಲಿ ಎರಡು ಡ್ರಮ್‍ನಲ್ಲಿಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು. ಪೆಂಡಾಲ್ ಗಳಲ್ಲಿ ಪಟಾಕಿಗಳನ್ನು ಶೇಖರಿಸಿಡಬಾರದು ಹಾಗೂ ಹತ್ತಿರದಲ್ಲಿ ಪಟಾಕಿಗಳನ್ನು ಸಿಡಿಸಲು ಅವಕಾಶ ಕಲ್ಪಿಸಬಾರದು ಹಾಗೂ ಪೆಂಡಾಲ್‍ಗಳಲ್ಲಿ ಯಾವುದೇ ರೀತಿಯ ಹೊತ್ತಿ ಉರಿಯುವ ಸಾಮಗ್ರಿಗಳನ್ನು ಇಡಕೂಡದು.

ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ

ಪ್ರತಿ ಪೆಂಡಾಲ್ ನಲ್ಲಿ ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆ 101 ಹಾಗೂ ಸ್ಥಳೀಯ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ 100 ಅನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಸಿಡಬೇಕು ಎಂದು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Department of fire safety and emergency services has appealed to take measure during Ganesha installation in public places and domestic as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X