ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ

ಸೋಮವಾರ ತಡರಾತ್ರಿ ನೆಲಮಂಗಲದ ಅರಿಶೀನಕುಂಟೆ ಬಳಿ ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ ಹೊತ್ತಿಕೊಂದೆ. ಈ ಅಗ್ನಿ ದುರಂತದಲ್ಲಿ 10 ಜನರಿಗೆ ಸುಟ್ಟ ಗಾಯಗಳಾಗಿದ್ದ. ಓರ್ವ ಮಹಿಳೆ ಸಜೀವ ದಹನವಾಗಿದ್ದಾಳೆ.

By Ramesh
|
Google Oneindia Kannada News

ಬೆಂಗಳೂರು, ಫೆಬ್ರವರಿ.21 : ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟ ಕರಕಲಾದ ಘಟನೆ ನೆಲಮಂಗಲದ ಅರಿಶೀನಕುಂಟೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಈ ಅಗ್ನಿ ದುರಂತದಲ್ಲಿ ಪೀಣ್ಯದ ನಿವಾಸಿ 58 ವರ್ಷದ ಭಾಗ್ಯಮ್ಮ ಸಜೀವ ದಹನವಾಗಿದ್ದಾಳೆ. 10 ಜನರಿಗೆ ಸುಟ್ಟ ಗಾಯಗಳಾಗಿದ್ದು ಕೆಂಗೇರಿ ನಿವಾಸಿ ಮಮತಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಮಮತಾ ಹಾಗೂ ಈಕೆಯ ಮಗನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಲಿಸಲಾಗಿದೆ. ಉಳಿದ ಗಾಯಗಳುಗಳನ್ನು ನೆಲಮಂಗಲದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.[ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ]

Fire on KSRTC bus near Arishinakunte Nelamangala women injured

ಗಾಯಾಳುವಿನ ದೇಹ ಶೇ. 70ರಷ್ಟು ಸುಟ್ಟಿದ್ದು ಪ್ರಜ್ಞಾನಹೀನಾ ಸ್ಥತಿಯಲ್ಲಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದದ್ದಾರೆ. ಈ ಅಗ್ನಿ ದುರಂತ ಸ್ಥಳಕ್ಕೆ ಕೆಎಸ್ ಆರ್ ಟಿಸಿ ಅಧಿಕಾರಿ ಜಿ.ಎನ್ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಕೆಎಸ್ ಆರ್ ಟಿಸಿ ಎಂ.ಡಿ ರಾಜೇಂದ್ರ ಕುಮಾರ್ ಕಟಾರಿ ಪ್ರತಿಕ್ರಿಯಿಸಿದ್ದು 'ಬಸ್ ನ ಟಯರ್ ಗಳ ಚೆನ್ನಾದ್ದು ಟಯರ್ ಸ್ಫೋಟದಿಂದ ಬೆಂಕಿ ಸಂಭವಿಸಿಲ್ಲ.

ಹಾಗೂ ಇಂಜಿನ್ ನಿಂದಲೂ ಈ ದುರಂತ ಸಂಭವಿಸಿಲ್ಲ. ಇದರಿಂದ ಈ ದುರಂತಕ್ಕೆ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಲಾಗಿದೆ.

ಈ ಬಗ್ಗೆ ಫಾರನಿಕ್ಸ್ ತಂಡಕ್ಕೆ ಮನವಿ ಮಾಡಲಾಗಿದ್ದು ಈ ತಂಡ ಪರಿಶೀಲನೆ ಮಾಡಲಿದ್ದಾರೆ' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

English summary
Fire on Hassan to Bengaluru KSRTC bus near Arishinakunte Nelamangala on Ferbuary 20 late night. Women, injured shifted to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X