ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ: ಏರೋ ಇಂಡಿಯಾ ಅಗ್ನಿ ಅವಘಡದಲ್ಲಿ ಸುಟ್ಟ ಕಾರುಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಏರೋ ಇಂಡಿಯಾದಲ್ಲಿ ಇಂದು ನಡೆದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ.

ಆಕಾಶಕ್ಕೆ ಕಣ್ಣಿಟ್ಟು ಲೋಹದ ಹಕ್ಕಿಗಳ ಪಲ್ಟಿ ನೋಡುತ್ತಿದ್ದ ಜನರ ಕಾರುಗಳು ಅಗ್ನಿಗೆ ಸಿಲುಕಿ ಎಲುಬಿನ ಹಂದರಗಳಂತಾಗಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಆದರೆ ಆಗಿರುವ ನಷ್ಟ ಕೋಟ್ಯಂತರ.

ಏರೋ ಇಂಡಿಯಾ : ಅಗ್ನಿಯ ಆಕ್ರೋಶಕ್ಕೆ ಬಲಿಯಾದ ವಾಹನಗಳೆಷ್ಟು?

ಎರಡು ಗಂಟೆಗೂ ಹೆಚ್ಚು ಕಾಲ ಉರಿದ ಬೆಂಕಿ, ಸುಮಾರು 300ಕ್ಕೂ ಹೆಚ್ಚು ಕಾರುಗಳನ್ನು ಕರಕಲಾಗಿಸಿವೆ. ಒಮಿನಿಗಳಿಂದ ಹಿಡಿದು ಆಡಿಗಳು ಸುಟ್ಟು ಕರಕಲಾಗಿವೆ.

ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ? ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ?

ಇದೀಗ ಅಗ್ನಿ ಶಾಂತವಾಗಿದ್ದು, ಮಾಲೀಕರು ತಮ್ಮ-ತಮ್ಮ ಕಾರುಗಳನ್ನು ಹುಡುಕುತ್ತಿದ್ದಾರೆ. ಸುಟ್ಟ ಕಾರುಗಳಲ್ಲಿ ಜನ ಏನಾದರೂ ಅಳಿದು-ಉಳಿದಿದೆಯಾ ನೋಡುತ್ತಿದ್ದಾರೆ. ಪೊಲೀಸರು ಈಗಾಗಲೇ ಸ್ಥಳವನ್ನು ಸುಪರ್ದಿಗೆ ತೆಗೆದುಕೊಂಡಿದ್ದು, ಕಾರು ಕಳೆದುಕೊಂಡವರಿಗಾಗಿ ಹೆಲ್ಪ್‌ಲೈನ್ ಆರಂಭಿಸಿದ್ದಾರೆ.

ಸಾಲಾಗಿ ನಿಂತಿವೆ ಸುಟ್ಟಕಾರುಗಳು

ಸಾಲಾಗಿ ನಿಂತಿವೆ ಸುಟ್ಟಕಾರುಗಳು

ಒಣಗಿದ ಹುಲ್ಲಿನ ಮೇಲೆ ಸೇದಿ ಬಿಸಾಕಿದ ಸಿಗರೇಟು ಈ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಮೊದಲಿಗೆ ಒಣಹುಲ್ಲಿಗೆ ಹೊತ್ತಿಕೊಂಡ ಬೆಂಕಿ, 5ನೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ, ದ್ವಿಚಕ್ರ ವಾಹನಗಳಿಗೆ ವ್ಯಾಪಿಸಿ 300ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಕೆಲ ಟಿವಿ ಚಾನಲ್ಲುಗಳು ವಾಹನಗಳ ಸಂಖ್ಯೆಯನ್ನು 400ಕ್ಕೂ ಹೆಚ್ಚು ಎಂದು ಹೇಳುತ್ತಿವೆ.

Viral Video: ಏರೋ ಇಂಡಿಯಾದಲ್ಲಿ ಧಗಧಗಿಸಿದ ಕಾರುಗಳುViral Video: ಏರೋ ಇಂಡಿಯಾದಲ್ಲಿ ಧಗಧಗಿಸಿದ ಕಾರುಗಳು

2 ಕಿ.ಮೀ ದೂರ ಟ್ರಾಫಿಕ್ ಜೋಮ್‌

2 ಕಿ.ಮೀ ದೂರ ಟ್ರಾಫಿಕ್ ಜೋಮ್‌

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಯಲಹಂದಿಂದ 2 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಪೊಲೀಸರು ಹರಸಾಹಸ ಪಡಬೇಕಾಗಿ ಬಂತು.

ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ?ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ?

ಏರ್‌ ಶೋ ತಾತ್ಕಾಲಿಕವಾಗಿ ರದ್ದುಮಾಡಲಾಗಿತ್ತು

ಏರ್‌ ಶೋ ತಾತ್ಕಾಲಿಕವಾಗಿ ರದ್ದುಮಾಡಲಾಗಿತ್ತು

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಶೋವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು. ಆದರೆ ನಂತರ 2:30 ಗೆ ಶೋ ಪ್ರಾರಂಭವಾಯಿತು.

ಏರೋ ಇಂಡಿಯಾದಲ್ಲಿ ಅಗ್ನಿ ಅವಘಡ: 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ ಏರೋ ಇಂಡಿಯಾದಲ್ಲಿ ಅಗ್ನಿ ಅವಘಡ: 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ

ವಿಮಾ ಸಂಸ್ಥೆಯ ಕೌಂಟರ್‌

ವಿಮಾ ಸಂಸ್ಥೆಯ ಕೌಂಟರ್‌

ಏರೋ ಇಂಡಿಯಾನಲ್ಲಿ ಕಾರು ಕಳೆದುಕೊಂಡವರು ಕಾರು ಹುಡುಕಲಾದವರ ಸಹಾಯಕ್ಕಾಗಿ ಬೆಂಗಳೂರು ಪೊಲೀಸರು ಹೆಲ್ಪ್‌ ಡೆಸ್ಕ್‌ ಆರಂಭಿಸಿದ್ದಾರೆ. ಅದಲ್ಲದೆ ವಿಮೆ ಸಂಸ್ಥೆ ಸಹ ಸ್ಥಳದಲ್ಲಿಯೇ ಕೌಂಟರ್ ತೆರೆದಿದೆ.

ವಿಮೆ ಹೇಗೆ ಸಿಗಲಿದೆ?

ವಿಮೆ ಹೇಗೆ ಸಿಗಲಿದೆ?

ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಬೆಂದು ಹೋಗಿವೆ. ಏರೋ ಇಂಡಿಯಾ ಶೋ ಪಾರ್ಕಿಂಗ್‌ ನಲ್ಲಿನ ಬೆಂಕಿ ಅವಘಡ ಆಕಸ್ಮಕವಾಗಿ ಸಂಭವಿಸಿದೆ. ಇದು ಕಾರಿನಿಂದಾಗಿ ಅಥವಾ ಮಾಲೀಕರಿಂದಾಗಿ ನಡೆದ ಅನಾಹುತವಲ್ಲ. ಈ ಕಾರುಗಳಿಗೆ OD(Own damage) ಅಥವಾ Natural Disasters ವಿಮೆ ಅಡಿಯಲ್ಲಿ ಮಾಲೀಕರಿಗೆ ಮೊತ್ತ ಸಿಗಲಿದೆ.

ಆರಂಭಕ್ಕೂ ಮೊದಲೇ ಸಂಭವಿಸಿತ್ತು ಅಪಘಾತ

ಆರಂಭಕ್ಕೂ ಮೊದಲೇ ಸಂಭವಿಸಿತ್ತು ಅಪಘಾತ

ಏರ್‌ ಶೋ ಆರಂಭಕ್ಕೂ ಮೊದಲೇ ವಿಮಾನದ ತಾಲೀಮಿನ ವೇಳೆ ಎರಡು ಸೂರ್ಯಕಿರಣ ವಿಮಾನಗಳು ಪರಸ್ಪರ ಆಗಸದಲ್ಲೇ ಢಿಕ್ಕಿ ಹೊಡೆದು ಅವಘಡ ಸಂಭಸಿತು. ಅಪಘಾತದಲ್ಲಿ ಒಬ್ಬ ಪೈಲೆಟ್ ಹುತಾತ್ಮರಾದರು. ಇಬ್ಬರು ಪೈಲೆಟ್‌ಗಳು ಗಾಯಗೊಂಡರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋದ ಪಾರ್ಕಿಂಗ್ ಲಾಟ್ ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 300 ಕ್ಕೂ ಹೆಚ್ಚು ಕಾರುಗಳು ಧಗಧಗನೇ ದಹಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಎಲ್ಲೆಡೆ ಅಗ್ನಿ ಅವಘಡದ ವಿಡಿಯೋಗಳು ಹರಿದಾಡುತ್ತಿವೆ.

English summary
Fire breaks in Aero India burnt more than 300 cars. Here are some pictures of burnt cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X