ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗ್ನಿಶಾಮಕ ಸಿಬ್ಬಂದಿಗೆ ಮಾರಾಟವಾಗದ ಬಿಡಿಎ ಫ್ಲಾಟ್‌ಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಬಿಡಿಎ ನಿವೇಶನ ನೀಡುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಬಿಡಿಎ ಮಾತುಕತೆ ನಡೆಸಿದೆ.

ನಗರದ ಹಲವೆಡೆ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟವಾಗದ ಬಿಡಿಎ ಫ್ಲಾಟ್‌ಗಳನ್ನು ಅಗ್ನಿಶಾಮಕ ಸಿಬ್ಬಂದಿಗಳಿಗೆ ನೀಡಲು ನಿರ್ಧರಿಸಿದೆ. ಈ ಹಿಂದೆ ಇಲಾಖೆಗೆ ಅಗತ್ಯವಾದ ವಸತಿ ಸಮುಚ್ಚಯಗಳನ್ನು ಪೊಲೀಸ್ ಗೃಹ ನಿರ್ಮಾಣ ಮಂಡಳಿಯೇ ನಿರ್ಮಿಸುತ್ತಿತ್ತು.

ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ

ಆದರೆ ಇತ್ತೀಚಿನ ಇನಗಳಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಇತರೆ ಸಲಕರಣೆಗಳ ಬೆಲೆಯೂ ಹೆಚ್ಚಾಗಿದೆ.

ಆ ಹಿನ್ನೆಲೆಯಲ್ಲಿ ಗೃಹ ರಕ್ಷಕ ಮತ್ತು ಅಗ್ನಿಸಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ತನ್ನ ಸಿಬ್ಬಂದಿಗೆ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

ಮೈಸೂರು ರಸ್ತೆಯಲ್ಲಿವೆ ಹಲವಾರು ಫ್ಲಾಟ್‌ಗಳು

ಮೈಸೂರು ರಸ್ತೆಯಲ್ಲಿವೆ ಹಲವಾರು ಫ್ಲಾಟ್‌ಗಳು

ಇನ್ನೊಂದೆಡೆ ಬಿಡಿಎ ಮೈಸೂರು ರಸ್ತೆಯ ಕಣ್‌ಮಿಣಿಕೆಯಲ್ಲಿ ಹಲವು ವಸತಿ ಸಮುಚ್ಚಯ ನಿರ್ಮಿಸಿದ್ದು, ಫ್ಲಾಟ್‌ಗಳು ಮಾರಾಟವಾಗದೆ ಹಾಗೆಯೇ ಉಳಿದಿದೆ. ಈ ಫ್ಲಾಟ್‌ಗಳನ್ನು ಗೇಹ ರಕ್ಷಕ ಮತ್ತು ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ತನ್ನ ಸಿಬ್ಬಂದಿ ಬಳಕೆಗೆ ಖರೀದಿಸಲು ಚಿಂತನೆ ನಡೆಸಿದೆ.

ಎಲ್ಲೆಲ್ಲಿದೆ ಅಪಾರ್ಟ್‌ಮೆಂಟ್

ಎಲ್ಲೆಲ್ಲಿದೆ ಅಪಾರ್ಟ್‌ಮೆಂಟ್

ಬಿಡಿಎ ಈಗಾಗಲೇ ನಗರದ ಬೇರೆ-ಬೇರೆ ಕಡೆಗಳಲ್ಲಿ ಫ್ಲಾಟ್‌ಗಳನ್ನು ನಿರ್ಮಿಸಿದೆ. ಆಲೂರು, ಗುಂಜೂರು, ಕಣಮಿಣಿಕೆ, ಕೊಮ್ಮಘಟ್ಟ, ದೊಡ್ಡಬನಹಳ್ಳಿ, ವಡೇರಹಳ್ಳಿ ಇನ್ನಿತರೆ ಪ್ರದೇಶಗಳಲ್ಲಿ ಸುಸಜ್ಜಿತವಾದ ಅಪಾರ್ಟ್‌ಮೆಂಟ್‌ ಗಳನ್ನು ನಿರ್ಮಿಸಿದೆ. ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಸಭೆಯಲ್ಲಿ ಈ ಕುರಿತು ಚರ್ಚೆ

ಸಭೆಯಲ್ಲಿ ಈ ಕುರಿತು ಚರ್ಚೆ

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಗೃಹ ಇಲಾಖೆಯ ಜತೆಗೆ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ, ಹೀಗಾಗಿ, ಖರೀದಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ. ಇತ್ತೀಚೆಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಮೈಸೂರು ರಸ್ತೆ ಸಮೀಪದ ಕಣಮಿಣಿಕೆಯಲ್ಲಿ ಹಲವು ಫ್ಲಾಟ್‌ಗಳು ಮಾರಾಟವಾಗದೆ ಉಳಿದಿವೆ.

ಬಿಡಿಎ ವಿಲ್ಲಾಗಳಿಗೆ ಭಾರಿ ಬೇಡಿಕೆ

ಬಿಡಿಎ ವಿಲ್ಲಾಗಳಿಗೆ ಭಾರಿ ಬೇಡಿಕೆ

ಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ.

ಕಳೆದ ಎರಡು ವರ್ಷಗಳಿಂದ ಬಹುತೇಕ ಬಿಡಿಎ ಅಪಾರ್ಟ್ ಮೆಂಟ್‌ಗಳು ಖಾಲಿ ಇವೆ, ರಿಯಾಯ್ತಿಯನ್ನು ಘೋಷಿಸಿದರೂ ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಮೈಸೂರು ರಸ್ತೆ ಬಳಿ ಇನ್ನಿತರೆ ಕಡೆಗಳಲ್ಲಿ ಬಿಡಿಎ ನಿರ್ಮಿಸಿರುವ ಪ್ಲಾಟ್‌ಗಳು ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎನ್ನುವುದು ಒಂದು ಕಾರಣವಾಗಿದೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

English summary
Bengaluru Development Authority(BDA) flats are not attracting general public, so government is planning to give the flats to fire and safety Department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X