ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟಿನಿಂದಾಗಿ ಸುಟ್ಟು ಕರಕಲಾಯಿತು ಬಹುಮಹಡಿ ಕಟ್ಟಡ

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 21: ನಗರದ ಹೆಗಡೆನಗರ ವೃತ್ತದ ಬಳಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ಥಿನ ಕಟ್ಟಡದಲ್ಲಿ ನಿನ್ನೆ (ಫೆ.21) ತಡ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ದಿನೇಶ್ ಎಂಬುವರಿಗೆ ಸೇರಿದ ಮೂರು ಅಂತಸ್ಥಿನ ಕಟ್ಟಡದ ಕೆಳಭಾಗದದಲ್ಲಿ ಬಟ್ಟೆ ಅಂಗಡಿಗೆ ತೆರೆಯಲಾಗಿತ್ತು, ಮೇಲಿನ ಎರಡು ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣ ಕೊನೆಯ ಹಂತದ ಕಾರ್ಯಗಳು ನಡೆಯುತ್ತಿದ್ದವು, ಮೂರೂ ಅಂತಸ್ಥು ಬೆಂಕಿಯ ಕೆನ್ನಾಲಗೆಗೆ ಸಿಲುಕಿವೆ.

ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ

ಬೆಂಕಿ ಹತ್ತಿ ಉರಿಯುತ್ತಿರುವುದು ಅಕ್ಕ ಪಕ್ಕದ ಮನೆಗಳವರ ಗಮನಕ್ಕೆ ಬಂದು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ 5 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.

Fire accident in Hegde nagar, a multi storage building caught fire

ಬೆಂಕಿ ಹೊತ್ತಿಕೊಂಡಿದ್ದು ಹೇಗೆ
ದಿನೇಶ್ ಅವರು ಕೆಳ ಮಹಡಿಯಲ್ಲಿ ಎರಡು ದಿನಗಳ ಹಿಂದೆಯಷ್ಟೆ ಬಟ್ಟೆ ಅಂಗಡಿ ತೆರೆದಿದ್ದರು. ಬಟ್ಟೆ ಅಂಗಡಿಯಲ್ಲಿ ನಿನ್ನೆ ತಡರಾತ್ರಿ ದಿನೇಶ್ ಅವರ ಮಗ ಸಿಗರೇಟು ಸೇದುತ್ತಿದ್ದ ಆಗ ಅಪ್ಪ ಬಂದರೆಂದು ಸಿಗರೇಟನ್ನು ಆರಿಸದೆ ಅಲ್ಲಿಯೇ ಎಸೆದಿದ್ದ, ಅದರಿಂದ ಬಟ್ಟೆಗಳಿಗೆ ಬೆಂಕಿ ಹೊತ್ತುಕೊಂಡು ನಂತರ ಅದು ಸಂಪೂರ್ಣ ಕಟ್ಟಡವನ್ನು ಆವರಿಸಿಕೊಂಡಿದೆ.

English summary
A multi storage building caught fire in Hegde Nagar Bengaluru. 5 fire brigade vehicles and 30 fire fighters worked to bring down the fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X