ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ ಕೆಪಿಟಿಸಿಎಲ್ ಘಟಕದಲ್ಲಿ ಬೆಂಕಿ; 15 ಸಿಬ್ಬಂದಿಗೆ ಗಾಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02: ಯಲಹಂಕದ ಕೆಪಿಟಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹಲವು ಸಿಬ್ಬಂದಿ ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.

ಶುಕ್ರವಾರ ಮುಂಜಾನೆ 3.30ರ ವೇಳೆಗೆ ಕೆಪಿಟಿಸಿಎಲ್ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಘಟಕದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು.

ರೈತರು ಪೂಜಿಸುವ ಟ್ರಾಕ್ಟರ್ ಗೆ ಬೆಂಕಿ ಹಚ್ಚಿದ್ದೇಕೆ ಕಾಂಗ್ರೆಸ್ಸಿಗರು?: ಮೋದಿ ರೈತರು ಪೂಜಿಸುವ ಟ್ರಾಕ್ಟರ್ ಗೆ ಬೆಂಕಿ ಹಚ್ಚಿದ್ದೇಕೆ ಕಾಂಗ್ರೆಸ್ಸಿಗರು?: ಮೋದಿ

ಗಾಯಗೊಂಡ ಸಿಬ್ಬಂದಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Video: ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಗೆ ಬೆಂಕಿ! Video: ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಗೆ ಬೆಂಕಿ!

Fire Accident At KPTCL Plant In Yelahanka 15 Inured

"ಗ್ಯಾಸ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿತ್ತು. ಮಾಹಿತಿ ತಿಳಿದ ತಕ್ಷಣ 7 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿವೆ" ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬ ಹೇಳಿದ್ದಾರೆ.

ಪಾರ್ಟಿ ಮಾಡಲು ಹೋಗಿ ಕಾಡಿಗೆ ಬೆಂಕಿ ಇಟ್ಟರು..! ಪಾರ್ಟಿ ಮಾಡಲು ಹೋಗಿ ಕಾಡಿಗೆ ಬೆಂಕಿ ಇಟ್ಟರು..!

ಕೆಪಿಟಿಸಿಎಲ್ ಘಟಕದಲ್ಲಿ ಸ್ಪೋಟ ಉಂಟಾಗಿದೆ ಎಂಬ ಸುದ್ದಿಯ ಕುರಿತು ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Recommended Video

KXIP ತಂಡದ ಪರಿಸ್ಥಿತಿ ಕೂಡ RCB ಹಾಗೆಯೇ ಆಗಿದೆ | Oneindia Kannada

350 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ಕೆಪಿಟಿಸಿಎಲ್ ಘಟಕ ಇದಾಗಿದೆ. ಘಟನೆ ನಡೆಯುವಾಗ 15ಕ್ಕೂ ಹೆಚ್ಚು ಕಾರ್ಮಿಕರು ಘಟಕದಲ್ಲಿದ್ದರು.

English summary
Fire accident at Karnataka Power Transmission Corporation Limited (KPTCL) plant in Yelahanka, Bengaluru. 15 officials were injured in accident. Two officials at the plant were critically injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X