ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಧಿ,ನೆಹರು ಬಗ್ಗೆ ಲೇಖಕಿಯಿಂದ ವಿವಾದಾತ್ಮಕ ಟ್ವೀಟ್: ಎಫ್‌ಐಆರ್ ದಾಖಲು

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರು ವಿರುದ್ಧ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ಲೇಖಕಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗಾಂಧಿ ಹಾಗೂ ನೆಹರು ಸಲಿಂಗಿಗಳು ಎಂದು ಮಾಡಿರುವ ವಿವಾದಾತ್ಮಕ ಟ್ವೀಟ್ ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದು ಹೊಸದೇನಲ್ಲ ಲೇಖಕಿ ಮಧು ಪೂರ್ಣಿಮಾ ಕಿಶ್ವರ್ ಹೀಗೆ ಸಾಕಷ್ಟು ಟ್ವೀಟ್‌ಗಳನ್ನು ಮಾಡುತ್ತಲೇ ಇರುತ್ತಾರೆ.

ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್

ಜೂನ್ 2019ರಲ್ಲಿ ಮಧು ಕಿಶ್ವರ್ ಅವರ ಈ ಟ್ವೀಟ್ ವಿವಾದ ಸೃಷ್ಟಿಸಿತ್ತು. ಟ್ವೀಟ್​​ನಲ್ಲಿ ಮಧು ಮಹಾತ್ಮಾ ಗಾಂಧಿ ಮತ್ತು ನೆಹರು ಅವರ ನಡುವೇ ಸಲಿಂಗಕಾಮ ಸಂಬಂಧ ಇತ್ತು ಎಂದು ಹೇಳಿದ್ದರು. ಈ ಬಗ್ಗೆ ದಕ್ಷಿಣ ಭಾರತದ ಸ್ನೇಹಿತರೊಬ್ಬರು ಮಧು ಅವರಿಗೆ ಹೇಳಿದ್ದರಂತೆ. ಹೀಗಾಗಿ ಇಬ್ಬರೂ ಒಮ್ಮೆ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ಟ್ವೀಟ್​​ ಮಾಡಿದ್ದರು ಮಧು. ಈ ಟ್ವೀಟ್​​ ಭಾರೀ ಚರ್ಚೆಗೆ ಕಾರಣವಾಗಿತ್ತು.

FIR Registered Against Writer Madhu Kishwar

ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್​​ನ ಆದರ್ಶ್ ಅಯ್ಯರ್, ಮಧು ವಿರುದ್ಧ ದೂರು ದಾಖಲಿಸಿದ್ದರು.

ಅಷ್ಟೇ ಅಲ್ಲದೆ ಮಧು ಕೀಶ್ವರ್ ಅವರ ಟ್ವೀಟ್ ಅನ್ನು ನಾವು ಜೂನ್ 2019ರಲ್ಲಿ ನೋಡಿದ್ದೆವು. ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಬದಲಾಗಿ ಲೈಂಗಿಕ ವಿಷಯದ ಅತಿರೇಕ, ಅತಿರಂಜಿತ ಸುಳ್ಳು ಎಂದು ಹೇಳಿದ್ದಾರೆ.

ರಾಹುಲ್ ಲೈಂಗಿಕತೆಯನ್ನೂ ಉಚಿತ ನೀಡುತ್ತಾರಾ : ಮಧು ಕಿಶ್ವರ್ ಟ್ವೀಟ್ರಾಹುಲ್ ಲೈಂಗಿಕತೆಯನ್ನೂ ಉಚಿತ ನೀಡುತ್ತಾರಾ : ಮಧು ಕಿಶ್ವರ್ ಟ್ವೀಟ್

ಇದರಿಂದ ಮುಂದಿನ ಜನಾಂಗಕ್ಕೆ ತಪ್ಪು ಸಂದೇಶ ಹೋದಂತಾಗುತ್ತದೆ. ಇಂತಹ ಟ್ವೀಟ್ ಮಾಡುವ ಪರಂಪರೆಯನ್ನು ನಿಲ್ಲಬೇಕು ಎಂದು ನಾವು ನಿರ್ಧರಿಸಿ ದೂರು ನೀಡಿದ್ದೇವೆ ಎಂದು ಕೂಡ ತಿಳಿಸಿದ್ದಾರೆ.

ಟ್ವಿಟರ್ ಬಳಕೆ ಆರಂಭಿಸಿದಾಗಿನಿಂದ ಅವರು ಸರಿ ಸುಮಾರು 34,000 ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಭಾವಶಾಲಿ ವ್ಯಕ್ತಿ ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಬೇಕಲ್ಲವೇ ಎಂದು ಖಾರವಾಗಿಯೇ ನುಡಿದಿದ್ದಾರೆ.

English summary
Janadhikara sangharsha Samiti Registered FIR against Writer Madhu Kishwar Over Statement against Mahatma Gandhi and Nehru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X