ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

15 ವರ್ಷದ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಯ ವಿರುದ್ಧ ಈಗ ಎಫ್‌ಐಆರ್‌!

|
Google Oneindia Kannada News

ಬೆಂಗಳೂರು, ಮೇ 20: ಮೃತವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಯ ವಿರುದ್ಧ ಈಗ ಕಂದಾಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದಾರೆ.ಕ್ಯಾಟ್ ಫಿಶ್ ಸಾಕಣೆ ಕುರಿತು ದೂರು ನೀಡಿದ್ದು, ಪ್ರಭಾವಿ ವ್ಯಕ್ತಿಗಳನ್ನು ಕಾಪಾಡಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಾವಿಗೆ ಕಾರಣ ಬಹಿರಂಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಾವಿಗೆ ಕಾರಣ ಬಹಿರಂಗ

ಹೆಸರಘಟ್ಟ ಹೋಬಳಿ ಕಾಳತಮ್ಮನಹಳ್ಳಿಯಲ್ಲಿ ಕೃಷಿ ಜಮೀನಿನಲ್ಲಿ ಹೊಂಡಗಳನ್ನು ನಿರ್ಮಿಸಿ ಕ್ಯಾಟ್‌ಫಿಶ್ ಸಾಕುತ್ತಿದ್ದ ಮಾಹಿತಿ ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ನಿಷೇಧಿತ ಮೀನಿನ ಸಾಗಣೆಗೆ ಅವಕಾಶ ಮಾಡಿಕೊಟ್ಟ ಕಾರಣ ಮುನಿಯಪ್ಪ ಹಾಗೂ ಅವರ ಮಗ ನಾರಾಯಣ ಮೂರ್ತಿ ಹಾಗೂ ಮುತ್ತುರಾಯಪ್ಪ ಹಾಗೂ ಕ್ಯಾಟ್ ಫಿಶ್ ಸಾಕುತ್ತಿದ್ದ ಚಂದ್ರು ವಿರುದ್ಧ ದೂರು ದಾಖಲಾಗಿತ್ತು.

FIR registered against mutthurayappa after 15 years of his death

15 ವರ್ಷಗಳ ಹಿಂದೆಯೇ ತಂದೆ ಮೃತಪಟ್ಟಿದ್ದಾರೆ. ಪಕ್ಕದ ಜಮೀನಿನ ಮಾಲೀಕರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಅವರನ್ನು ರಕ್ಷಿಸುವ ಸಲುವಾಗಿ ತಂದೆಯ ವಿರುದ್ಧ ದೂರು ನೀಡಿದ್ದಾರೆ ನಮ್ಮ ಜಮೀನನಲ್ಲಿ ಮೀನು ಸಾಗಣೆ ಮಾಡಿಲ್ಲ ಎಂದು ಮುತ್ತುರಾಯಪ್ಪ ಅವರ ಮಗ ಚಿಕ್ಕಣ್ಣ ತಿಳಿಸಿದ್ದಾರೆ.

English summary
Revenue department filed FIR on Mutthurayappa who died 15 years back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X