ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

|
Google Oneindia Kannada News

ಬೆಂಗಳೂರು, ಮೇ 21: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕರ್ನಾಟಕದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಎಫ್ ಐ ಆರ್ ಸಹ ಹಾಕಲಾಗಿದೆ.

Recommended Video

ರಾಜೀವ್ ಗಾಂಧಿಯವರಿಗೆ ನಮನ ಸಲ್ಲಿಸಿದ ಡಿಕೆ ಶಿವಕುಮಾರ್

ಪಿಎಂ ಕೇರ್ ನಿಧಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಸೋನಿಯಾ ಗಾಂಧಿ ಸರ್ಕಾರದ ಮೇಲೆ ಅಪನಂಬಿಕೆ ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿ ಪ್ರವೀಣ್ ಕುಮಾರ್ ಎಂಬ ಶಿವಮೊಗ್ಗ ಮೂಲದ ವಕೀಲ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

FIR Registered Against Sonia Gandhi in Karnataka Over Congress Part Tweet on PM cares Fund

ಲಾಕ್‌ಡೌನ್‌: ಶುಕ್ರವಾರ ವಿರೋಧ ಪಕ್ಷಗಳ ಸಭೆ ಕರೆದ ಸೋನಿಯಾ ಗಾಂಧಿಲಾಕ್‌ಡೌನ್‌: ಶುಕ್ರವಾರ ವಿರೋಧ ಪಕ್ಷಗಳ ಸಭೆ ಕರೆದ ಸೋನಿಯಾ ಗಾಂಧಿ

'ಕಾಂಗ್ರೆಸ್@ಐ ಎನ್ ಸಿ ಇಂಡಿಯಾ ಎಂಬ ಟ್ವಿಟ್ಟರ್ ಖಾತೆ ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೇ 11 ರಂದು ಸಂಜೆ 6 ಗಂಟೆ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರದ ವಿರುದ್ಧ, ಮೋದಿ ಅವರ ಕಾರ್ಯನಿರ್ವಹಣೆಯ ಬಗ್ಗೆ, ಪಿಎಂ ಕೇರ್ ನಿಧಿ ದುರಪಯೋಗವಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಮೋದಿ ಅವರ ಮೇಲೆ ಅಪನಂಬಿಕೆ ಹುಟ್ಟು ಹಾಕುತ್ತಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

'ಪಿಎಂ ಕೇರ್ ನಿಧಿ ವೈಯಕ್ತಿಕವಾಗಿ ಬಳಕೆಯಾಗುತ್ತಿದೆ. ಬಡಜನರ ಉಪಯೋಗಕ್ಕೆ ಬಳಸುತ್ತಿಲ್ಲ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಸಕಾರ ಹಾಗೂ ಮೋದಿ ಅವರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಹಾಗಾಗಿ, ಅವರ ಟ್ವಿಟ್ಟರ್ ಖಾತೆ ಹಾಗು ಸೋನಿಯಾ ಗಾಂಧಿ ವಿರುದ್ಧ ಕ್ರಮ ಜರುಗಿಸಬೇಕೆಂದು' ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. 20ನೇ ತಾರೀಕು ಈ ಕಂಪ್ಲೆಂಟ್ ನೀಡಲಾಗಿದೆ. ಎಫ್ ಐ ಆರ್ ಕಾಪಿಯನ್ನು ನ್ಯಾಯಾಲಯಕ್ಕೆ ಕೂಡ ಕಳುಹಿಸಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಬಿಜೆಪಿ ಕಾರ್ಯಕರ್ತನೊಬ್ಬ ಸೋನಿಯಾ ಗಾಂಧಿಯವರ ವಿರುದ್ಧ ಸುಳ್ಳು ದೂರು ನೀಡಿದ್ದಾನೆ ಎಂದು ಟೀಕಿಸಿದ್ದಾರೆ.

ಸುಳ್ಳು ದೂರು ಆಧರಿಸಿ ಎಫ್ಐಆರ್ ದಾಖಲಿಸಿರುವ ಸಾಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಿ, ಅವರ ವಿರುದ್ಧ ಅಧಿಕಾರ ದುರುಪಯೋಗ ಕೇಸು ದಾಖಲಿಸುವಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳು,‌ ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಶಿವಮೊಗ್ಗ ಎಸ್.ಪಿ ಗಳಿಗೆ‌ ಬರೆದಿದ್ದಾರೆ.

English summary
FIR registered against Congress President Sonia Gandhi In Shivamogga, Karnataka over Congress party's tweet on 11th May on PMCARES fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X