ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುನಿಯಾ ವಿಜಯ್ ಮೇಲೆ ಎಫ್.ಐ.ಆರ್: 'ಕರಿಚಿರತೆ' ಫೋನ್ ಸ್ವಿಚ್ ಆಫ್.!

By Harshitha
|
Google Oneindia Kannada News

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಗೆ ಹೊಸ ಸಂಕಷ್ಟ ಎದುರಾಗಿದೆ. 'ಕರಿ ಚಿರತೆ' ದುನಿಯಾ ವಿಜಯ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 'ದು'ಸ್ಸಾಹಸ ಮಾಡಲು ಹೋಗಿ ಖಳ ನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಸುಂದರ್.ಪಿ.ಗೌಡ ಮೇಲೆ ರಾಮನಗರ ಜೆ.ಎಂ.ಎಫ್.ಸಿ ಕೋರ್ಟ್ ನಿಂದ ವಾರೆಂಟ್ ಜಾರಿ ಆಗಿತ್ತು.

'ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ

ರಾಮನಗರದ ಜೆ.ಎಂ.ಎಫ್.ಸಿ ಕೋರ್ಟ್ ನಿಂದ ತೀರ್ಪು ಹೊರಬೀಳುತ್ತಿದ್ದಂತೆಯೇ, ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ಮಾಪಕ ಸುಂದರ್.ಪಿ.ಗೌಡ ರವರನ್ನು ಬಂಧಿಸಲು ನಿನ್ನೆ (ಬುಧವಾರ) ರಾತ್ರಿ ಮುಂದಾದರು.

'ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಸುಂದರ್.ಪಿ.ಗೌಡ ಮನೆಗೆ ನಿನ್ನೆ ರಾತ್ರಿ ತಾವರೆಕೆರೆ ಪೊಲೀಸರು ಹಾಜರ್ ಆದರು. ಇದೇ ವೇಳೆ ಎಂಟ್ರಿ ಕೊಟ್ಟ ದುನಿಯಾ ವಿಜಯ್, ಸುಂದರ್.ಪಿ.ಗೌಡ ರವರನ್ನು ಬಂಧಿಸದಂತೆ ಪೊಲೀಸರನ್ನು ತಡೆದರು. ಈ ಗ್ಯಾಪ್ ನಲ್ಲಿ ನಿರ್ಮಾಪಕ ಸುಂದರ್.ಪಿ.ಗೌಡ ಎಸ್ಕೇಪ್ ಆದರು.

FIR filed against Kannada Actor Duniya Vijay

ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!

ತಾವರೆಕೆರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೋವಿಂದ ರಾಜು, ದುನಿಯಾ ವಿಜಯ್ ವಿರುದ್ಧ ದೂರು ನೀಡಿದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಐ.ಪಿ.ಸಿ ಸೆಕ್ಷನ್ 363 ಅನ್ವಯ ನಟ ದುನಿಯಾ ವಿಜಯ್ ಮೇಲೆ ಸದ್ಯ ಎಫ್.ಐ.ಆರ್ ದಾಖಲಾಗಿದೆ. ಎಫ್.ಐ.ಆರ್ ದಾಖಲಾದ ಮೇಲೆ ದುನಿಯಾ ವಿಜಯ್ ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರ ಸಂಪರ್ಕಕ್ಕೆ ದುನಿಯಾ ವಿಜಯ್ ಸಿಗುತ್ತಿಲ್ಲ.

'ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!

ದುನಿಯಾ ವಿಜಯ್ ತಡೆದಿದ್ದು ಯಾಕೆ.?

ಸುಂದರ್.ಪಿ.ಗೌಡ ರವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಸುಂದರ್.ಪಿ.ಗೌಡ ರನ್ನ ನಾಳೆ ತಾವೇ ಪೊಲೀಸ್ ಸ್ಟೇಷನ್ ಗೆ ಕರೆದು ತರುವುದಾಗಿ ಪೊಲೀಸರ ಬಳಿ ದುನಿಯಾ ವಿಜಯ್ ಕೇಳಿಕೊಂಡರಂತೆ. ಆದ್ರೆ, ಅಷ್ಟರಲ್ಲಿ ಸುಂದರ್.ಪಿ.ಗೌಡ ಪರಾರಿ ಆಗಿರುವುದು ದುನಿಯಾ ವಿಜಯ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

English summary
FIR filed against Kannada Actor Duniya Vijay as per the complaint lodged by Tavarekere Head Constable Govinda Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X