• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರ ಮೇಲೆ ಹಲ್ಲೆ: ಶಾಸಕ ಕಾಶಪ್ಪನವರ್ ಪರಾರಿ!

By Ashwath
|

ಬೆಂಗಳೂರು,ಜು.3: ತಡರಾತ್ರಿಯವರೆಗೆ ಪಾರ್ಟಿ‌ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಬಾಗಲಕೋಟೆಯ ಹುನಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಅವರ ಸಂಗಡಿಗರನ್ನು ಬಂಧಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿರುವುದದಕ್ಕೆ ಎಲ್ಲೆಡೆಯಿಂದ ಆಕ್ರೋಶಗಳು ಕೇಳಿಬರತೊಡಗಿದೆ.

ಶಾಸಕ ಕಾಶಪ್ಪನವರ್, ರೌಡಿ ಶೀಟರ್‌ ಸೋಮಶೇಖರ್‌ ಸೇರಿದಂತೆ ಐವರ ವಿರುದ್ಧ ಕಬ್ಬನ್‌‌ಪಾರ್ಕ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಫ್‌ಐಆರ್‌ನಲ್ಲಿ ಸೋಮಶೇಖರ್‌ ಗೌಡ ಮೊದಲ ಆರೋಪಿಯಾಗಿದ್ದು, ಎರಡನೇ ಆರೋಪಿಯಾಗಿ ಶಾಸಕ ವಿಜಯಾನಂದ ಹಾಗೂ ಇತರ ಐವರ ಹೆಸರನ್ನು ನಮೂದಿಸಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌143 (ಅಕ್ರಮ ಗುಂಪುಗಾರಿಕೆ), 304 (ಜೀವ ಬೆದರಿಕೆ), 353 (ಕರ್ತವ್ಯ ಅಡ್ಡಿ), 323 (ಹಲ್ಲೆ ಅಥವಾ ಥಳಿಸುವುದು) ಆರೋಪದಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಆರೋಪಿಗಳ ಪೈಕಿ ಸೋಮಶೇಖರ್‌ ಗೌಡ, 2009ರಿಂದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ರೌಡಿಪಟ್ಟಿಯಲ್ಲಿದ್ದಾನೆ.

ನಾಪತ್ತೆಯಾದ ಶಾಸಕ: ಹಲ್ಲೆ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಶಾಸಕ ವಿಜಯಾನಂದ ಕಾಶಪ್ಪನವರ್ ನಾಪತ್ತೆಯಾಗಿದ್ದಾರೆ. ಇವತ್ತಿನ ಸದನಕ್ಕೂ ಹಾಜರಾಗದ ಶಾಸಕರು ತಮ್ಮ ಶಾಸಕ ಭವನದಲ್ಲಾಗಲೀ, ಸಂಜಯನಗರದ ನಿವಾಸದಲ್ಲಾಗಲೀ ಕಂಡುಬರಲಿಲ್ಲ. ಸಾರ್ವಜನಿಕವಾಗಿ ಕಂಡುಬಂದರೆ ಬಂಧನಕ್ಕೊಳಗಾಗುವ ಹಿನ್ನೆಲೆಯಲ್ಲಿ ಶಾಸಕರು ಕಾಣೆಯಾಗಿದ್ದಾರೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಹಲ್ಲೆ ಪ್ರಕರಣ: ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಶಾಸಕರ ಹಲ್ಲೆ ಪ್ರಕರಣ ಪ್ರಶ್ನಿಸಿ ಚರ್ಚೆ‌ಗೆ ಅವಕಾಶ ನೀಡಬೇಕು ಎಂದು ಸ್ಪೀಕರ್‌ ಜೊತೆ ಮನವಿ ಮಾಡಿದಾಗ ಸ್ಪೀಕರ್‌ ಕಾಗೋಡು ತಿಮ್ಮಪ್ಪ, ಮೊದಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಿಸಿದ ಚರ್ಚೆ ನಡೆಯಲಿ ಬಳಿಕ ಕಾಶಪ್ಪನವರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ಮಾಡೋಣ ಎಂದು ಹೇಳಿ ತೆರೆ ಎಳೆದರು.

ಅಧಿವೇಶನದ ಸಮಯದಲ್ಲಿ ಶಾಸಕರನ್ನು ಬಂಧಿಸಬೇಕಾದರೆ ಸ್ಪೀಕರ್‌ ಅನುಮತಿ ಕಡ್ಡಾಯ. ಆದರೆ ಇಲ್ಲಿಯವರಿಗೂ ಪೊಲೀಸರು ಸ್ಪೀಕರ್‌ ಕಾಶಪ್ಪನವರ್ ಬಂಧಿಸುವ ಸಲುವಾಗಿ ಅನುಮತಿ ಪಡೆಯಲು ಯಾವುದೇ ಪ್ರಕ್ರಿಯೆಯನ್ನು ನಡೆಸಿಲ್ಲದಿರುವುದು ಸರ್ಕಾರದ ನಡೆಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.[ಪೊಲೀಸ್ ಪೇದೆಗಳಿಗೆ ಥಳಿಸಿದ ಹುನಗುಂದ ಶಾಸಕ]

ಮೌನಕ್ಕೆ ಶರಣಾದ ಗ್ರಹ ಸಚಿವರು: ಗ್ರಹ ಸಚಿವ ಕೆ. ಜೆ. ಜಾರ್ಜ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮದವರ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

ಶಾಸಕರ ರಕ್ಷಣೆಗೆ ನಿಂತ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ!: ಜನ ಸಾಮಾನ್ಯರು ತಪ್ಪು ಮಾಡಿದಾಗ ಕೂಡಲೇ ಕಾರ್ಯಪ್ರವೃತ್ತರಾಗುವ ಪೊಲೀಸರು ಈಗ ತಮ್ಮ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಶಾಸಕ ಮತ್ತು ಬೆಂಬಲಿಗರನ್ನು ಬಂಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕರು ಮತ್ತು ಸಂಗಡಿಗರು ಬಾರ್‌ನಲ್ಲಿ ಗಲಾಟೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಪೊಲೀಸರು ಇನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ. ಬಹುತೇಕ ಪ್ರಕರಣಗಳಲ್ಲಿ ಸಿಸಿಟಿವಿಯೇ ಪ್ರಬಲವಾದ ಸಾಕ್ಷ್ಯವಾಗುವುದರಿಂದ ಪೊಲೀಸರು ಕೂಡಲೇ ಮಾಧ್ಯಮಗಳಿಗೆ ಸಿಸಿಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವಾಳಿಯನ್ನು ಬಿಡುಗಡೆ ಮಾಡುತ್ತಾರೆ. ಆದರೆ ಘಟನೆ ನಡೆದು ಒಂದು ದಿನ ಕಳೆದರೂ ಇನ್ನು ಸಿಸಿಟಿವಿಯ ದೃಶ್ಯವನ್ನು ಮಾಧ್ಯಮಗಳಿಗೆ ನೀಡಿಲ್ಲ

ಪೊಲೀಸರಿಗೆ ಸಿಗದ ಆರೋಪಿ ಮೀಡಿಯದಲ್ಲಿ ಸಂದರ್ಶನ: ಎಫ್‌ಐಆರ್‌ನಲ್ಲಿ ಮೊದಲ ಆರೋಪಿಯಾಗಿರುವ ಸೋಮೇಗೌಡರ ಬಂಧನಕ್ಕೆ ವಿಶೇಷ ತಂಡ ರಚಿಸಿ ಪತ್ತೆಕಾರ್ಯ ಆರಂಭಿಸಿರುವ ಪೊಲೀಸರಿಗೆ ಇದುವರೆಗೂ ಸೋಮೇಗೌಡರನ್ನು ಬಂಧಿಸಲು ಸಾಧ್ಯವಾಗಿಲ್ಲ. ಅದರೆ ಖಾಸಗಿ ಮಾಧ್ಯಮವೊಂದಕ್ಕೆ ಅಜ್ಞಾತ ಸ್ಥಳದಿಂದ ಸಂದರ್ಶನ ನೀಡಿದ ಸೋಮೇಗೌಡ "ಕಾಶಪ್ಪನವರನ್ನು ಬಿಟ್ಟು ನನ್ನನ್ನು ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಹುನುಗುಂದ ಶಾಸಕರಿಗೆ ಟೇಬಲ್ ಬುಕ್ ಮಾಡಿದ್ದು ನಾನಲ್ಲ,ನಾನು ಸಹಾಯ ಮಾಡಿದ್ದೇನೆ ವಿನಾಃ ಸಹಾಯ ತಗೊಂಡಿಲ್ಲ" ಎಂದು ಹೇಳಿದ್ದಾನೆ.

ಸೋಮೇಗೌಡ ಯಾರು?

ಕಾಶಪ್ಪನವರ ಅವರ ಆಪ್ತ ಸೋಮಶೇಖರ್ ಗೌಡ (43) ಕುಖ್ಯಾತ ರೌಡಿಯಾಗಿದ್ದು, ಆತನ ವಿರುದ್ಧ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ನಗರದ ವಿವಿಧ ಠಾಣೆಯಲ್ಲಿ ದಾಖಲಾಗಿವೆ.

ಪ್ರಮುಖ ರಾಜಕಾರಣಿಗಳಿಗೆ ಮತ್ತು ಅವರ ಮಕ್ಕಳಿಗೆ ನಗರದ ಪಂಚತಾರ ಹೊಟೇಲ್‌ಗಳಲ್ಲಿ ಮೋಜಿನ ಕೂಟ ಏರ್ಪಡಿಸಿ, ಬಳಿಕ ಶುಲ್ಕವನ್ನು ಪಾವತಿ ಮಾಡದೇ ಹೊಟೇಲ್‌ ಮಾಲೀಕರೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ ರಾಜಕಾರಣಿಗಳ ಹೆಸರನ್ನು ಹೇಳಿ ಮಾಲೀಕರಿಗೆ ಜೀವ ಬೆದರಿಕೆ ಹಾಕುತ್ತಿದ್ದ.

ಸೋಮಶೇಖರ್ ಗೌಡ ಮತ್ತು ಆತನ ಸಹಚರರು 2009ರಲ್ಲಿ ನಗರದ ಪ್ಯಾಲೆಸ್‌ ಕ್ರಾಸ್‌ ರಸ್ತೆಯ ಓಪಸ್ ರೆಸ್ಟೋರೆಂಟ್‌ನಲ್ಲಿ ಇದೇ ರೀತಿ ದಾಂದಲೆ ಮಾಡಿದ್ದರು. ಈ ಪ್ರಕರಣದಲ್ಲಿ ಸೋಮಶೇಖರ್‌ನನ್ನು ಬಂಧಿಸಿದ್ದ ಹೈಗ್ರೌಂಡ್ಸ್‌ ಪೊಲೀಸರು, ರೌಡಿಗಳ ಪಟ್ಟಿಯಲ್ಲಿ ಆತನ ಹೆಸರು ಸೇರಿಸಿದ್ದರು. ಆ ನಂತರ ಕೂಡ ಆರೋಪಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೂರು ತಿಂಗಳ ಹಿಂದೆ ಸೋಮಶೇಖರ್‌ನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಶಾಸಕ ಕಾಶಪ್ಪನವರ್‌ ಪೊಲೀಸರಿಗೆ ಕರೆ ಮಾಡಿ ಸೋಮಶೇಖರ್‌ನ್ನು ಬಿಡುಗಡೆ ಮಾಡುವಂತೆ ಬೆದರಿಕೆ ಹಾಕಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಸಭೆಯಲ್ಲಿ ಭಾಗಿಯಾಗಿದ್ದ ಸೋಮಶೇಖರ್‌: ನಗರದಲ್ಲಿ ಇತ್ತೀಚೆಗೆ ಮುಕ್ತಾಯವಾದ ಕಾಂಗ್ರೆಸ್ ಆತ್ಮವಲೋಕನ ಸಭೆಯಲ್ಲಿ ಭಾಗಿಯಾಗಿದ್ದ ಸೋಮಶೇಖರ್‌ ಮುಂದಿನ ಆಸನದಲ್ಲಿ ಕುಳಿತುಕೊಂಡಿದ್ದ. ಕೆಪಿಸಿಸಿ ವಿಸಿಟಿಂಗ್‌ ಕಾರ್ಡ್‌ ಸಹ ಮಾಡಿಸಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
An FIR has been filed against Hungund MLA, Congress leader Vijayanand Kashappanavar for allegedly assaulting police on duty at a night club in Bangalore. Kashappanavar is said to be absconding. Home minister KJ George has refused to stand by the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more