ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ಸಿ. ಎನ್. ಮಂಜುನಾಥ್ ವಿರುದ್ಧ ಎಫ್‌ಐಆರ್

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಔಷಧ ದುರುಪಯೋಗದ ಆರೋಪದ ಮೇಲೆ ಡಾ. ಸಿ. ಎನ್. ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ತಿಲಕ್ ನಗರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್,
ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯ ಡಾ. ಕೆ. ಜಿ. ಕಲ್ಲೂರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಎಫ್‌ಐಆರ್ ದಾಖಲಾಗಿದೆ.

ಕಲಬುರಗಿ; ಜಯದೇವದಿಂದ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣಕಲಬುರಗಿ; ಜಯದೇವದಿಂದ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣ

ಮೈಸೂರು ಮೂಲದ ಸಾಮಾಜಿಕ ಹೋರಾಟಗಾರ ಸ್ನೇಹಮಣಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರನ್ನು ಆಧರಿಸಿ ಇಬ್ಬರ ವಿರುದ್ಧ ತನಿಖೆ ನಡೆಸಿ 2020ರ ಮೇ 21ರ ಒಳಗೆ ವರದಿ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿದೆ. ನ್ಯಾಯಾಲಯದ ಸೂಚನೆಯಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವೈದ್ಯ ಲೋಕದ ಅಚ್ಚರಿ; 7.4 ಕೆ.ಜಿ. ಕಿಡ್ನಿ ಹೊರತೆಗೆದ ವೈದ್ಯರು!ವೈದ್ಯ ಲೋಕದ ಅಚ್ಚರಿ; 7.4 ಕೆ.ಜಿ. ಕಿಡ್ನಿ ಹೊರತೆಗೆದ ವೈದ್ಯರು!

Dr C N Manjunath

ಆರೋಪವೇನು? : ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬರುವ ಕೆಲವು ರೋಗಿಗಳ ಪರೀಕ್ಷೆಗೆ ನ್ಯೂಕ್ಲಿಯರ್ ಕಾಂಪೋನೆಂಟ್ (ಐಸೋಟಾಪ್) ಎಂಬ ಔಷಧಗಳು ವಿದೇಶದಿಂದ ಪ್ರತಿ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತವೆ.

ಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿ

ಔಷಧಗಳನ್ನು ನಿಲ್ದಾಣದಿಂದ ಜಯದೇವ ಆಸ್ಪತ್ರೆ ಸಿಬ್ಬಂದಿ ಪಡೆದುಕೊಳ್ಳಬೇಕು. ಆದರೆ, ಸಂಸ್ಥೆಯ ನ್ಯೂಕ್ಲಿಯರ್‌ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಡಾ. ಕೆ. ಜಿ. ಕಲ್ಲೂರ ಎಂಬುವರ ಕಾರಿನ ಚಾಲಕ ಪಡೆದುಕೊಳ್ಳುತ್ತಿದ್ದಾರೆ.

ಈ ಔಷಧ ದುರುಪಯೋಗದ ಕುರಿತು ಇಬ್ಬರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿದೆ. ನ್ಯಾಯಾಲಯ ಈ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿದೆ.

English summary
FIR field in Tilak Nagar police station against Director of the Sri Jayadeva Institute of Cardiovascular Sciences and Research Dr. C. N. Manjunath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X