ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಐಟಿ ದಾಳಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 21 ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಎಲ್ಲ ಅಧಿಕಾರಿಗಳು ಉದ್ಯಮಿಯೊಬ್ಬರಿಗೆ ಲಂಚ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಧಿಕಾರಿಗಳ ವಿರುದ್ಧ ಉದ್ಯಮಿಯು ದೂರು ನೀಡಿದ್ದರು.

ಪ್ರಕಾಶ್ ರಾಜ್ ಪ್ರಣಾಳಿಕೆಯಲ್ಲಿ ಟ್ರಾಫಿಕ್ ನಿಂದ ರಿಪೋರ್ಟ್ ಕಾರ್ಡ್ ತನಕ ಪ್ರಕಾಶ್ ರಾಜ್ ಪ್ರಣಾಳಿಕೆಯಲ್ಲಿ ಟ್ರಾಫಿಕ್ ನಿಂದ ರಿಪೋರ್ಟ್ ಕಾರ್ಡ್ ತನಕ

ಬೆಂಗಳೂರಿನ ಎಂ.ಡಿ.ಕೃಪಲಾನಿ ಎಂಬ ಉದ್ಯಮಿಯೊಬ್ಬರು 2017 ರಲ್ಲಿ ಕೆಲವು ವಸ್ತುಗಳನ್ನು ಆಮದು ಮಾಡಿಕೊಂಡಿದ್ದರು, ಆದರೆ ಅದನ್ನು ಕಸ್ಟಮ್ಸ್ ಅಧಿಕಾರಿಗಳು ತಡೆ ಹಿಡಿದಿದ್ದರು, ಅವನ್ನು ಬಿಡುಗಡೆ ಮಾಡಲು 10 ಲಕ್ಷ ಲಂಚ ನೀಡಬೇಕೆಂದು ಉದ್ಯಮಿಗೆ ಒತ್ತಾಯಿಸಿದ್ದರು.

FIR against Kempegowda international airports 21 officers

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೂಪರಿಟೆಂಡೆಂಟ್ ಆಫ್ ಕಸ್ಟಮ್ಸ್​, ಡೆಪ್ಯೂಟಿ ಸೂಪರಿಟೆಂಡೆಂಟ್ ಹಾಗೂ ಇನ್ಸ್​ಪೆಕ್ಟರ್ ಆಫ್ ಕಸ್ಟಮ್ಸ್‌ ಅಧಿಕಾರಿಗಳು ಸಹ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಇದರ ಜೊತೆಗೆ ಸೆಂಟ್ರಲ್ ಜಿಎಸ್‌ಟಿಯ 7 ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್

ಕೃಪಲಾನಿ ಅವರು ಲಂಚ ನೀಡಲು ಒಪ್ಪದೇ ಇದ್ದಾಗ ನಕಲಿ ದಾಖಲೆ ಸೃಷ್ಟಿಸಿ, ಸೆಂಟ್ರಲ್ ಜಿಎಸ್‌ಟಿ ಅಧಿಕಾರಿಗಳ ಸಹಾಯ ಪಡೆದು ಕೃಪಲಾನಿ ಅವರ ಮನೆ ಮೇಲೆ ದಾಳಿ ಮಾಡಿ ಹುಡುಕಾಟ ನಡೆಸಿದ್ದರು ಎಂದು ದೂರಿನಲ್ಲಿ ಕೃಪಲಾನಿ ಹೇಳಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ 3 ಪ್ರತ್ಯೇಕ ಎಫ್‌ಐಆರ್ ದಾಖಲುಮಂಡ್ಯದಲ್ಲಿ ಜೆಡಿಎಸ್ ವಿರುದ್ಧ 3 ಪ್ರತ್ಯೇಕ ಎಫ್‌ಐಆರ್ ದಾಖಲು

ತಮ್ಮ ವಿರುದ್ಧ ನಡೆದ ಉದ್ದೇಶಪೂರಿತ ದಾಳಿ ಬಗ್ಗೆ ಕೃಪಲಾನಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿಕೊಂಡಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತು, ಅಂತೆಯೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

English summary
FIR against Kempegowda international airport costumes officers. alleged that they ask for bribe to a Bengluru's businessman, and then make a fake it raid on his house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X