ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫುಟ್‌ಪಾತ್ ಪಕ್ಕ ಗಿಡನೆಟ್ಟಿದ್ದಕ್ಕೆ ನಿವಾಸಿಗಳ ವಿರುದ್ಧ ಎಫ್‌ಐಆರ್ ದಾಖಲು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ನೂರು ಅಡಿ ರಸ್ತೆಯಲ್ಲಿ ಗಿಡ ನೆಟ್ಟಿದ್ದಕ್ಕೆ ಫುಟ್‌ಪಾತ್ ಹಾಳಾಗಿದೆ ಎಂಬ ಆರೋಪದ ಮೇಲೆ ಸಂಚಾರಿ ಪೊಲೀಸರು ದಾಖಲಿಸಿದ ಎಫ್‌ಐಆರ್ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಟ್ರಾಫಿಕ್ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ನಿವಾಸಿಗಳನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದಿರಾನಗರದ ನೂರು ಅಡಿ ರಸ್ತೆಯಲ್ಲಿ ಅಕ್ಟೋಬರ್ 2 ರಂದು ಪ್ಲಾಂಟಷನ್ ಡ್ರೈವ್ ಆಯೋಜಿಸಲಾಗಿತ್ತು. ಆದರೆ ಫುಟ್‌ಪಾತ್‌ನ್ನು ಪಾರ್ಕಿಂಗ್ ಬಳಸಲಾಗಿತ್ತು.

FIR Against Indiranagar Residents

ಫುಟ್‌ಪಾತ್‌ಗಳನ್ನು ವಾಹನ ನಿಲ್ಲಿಸಿರುವ ಕುರಿತು ಇನ್‌ಸ್ಪೆಕ್ಟರ್ ಮತ್ತು ಎಸಿಪಿಗೆ ತಿಳಿಸಲಾಯಿತು.ಪಾದಚಾರಿಗಳಿಗೆ ನಡೆಯಲು ಮೂರು ಅಡಿ ಜಾಗ ಸಾಕು ಮತ್ತು ಉಳಿದ ಜಾಗವನ್ನು ವಾಹನ ನಿಲುಗಡೆಗೆ ಬಳಸಬಹುದು ಎಂದು ಹೇಳಾಗಿತ್ತು.

ಫುಟ್‌ಪಾತ್‌ನಿಂದ ವಾಹನವನ್ನೂ ಕೂಡ ತೆರವುಗೊಳಿಸಿದ್ದರು. ಅಕ್ಟೋಬರ್ 2 ರಂದು ಕಾರ್ಯಕ್ರಮ ಸುಗಮವಾಗಿ ನಡೆದಿತ್ತುಆದರೆ ಸದಸ್ಯರ ವಿರುದ್ಧ ದೂರು ದಾಖಲಾಗಿದೆ.

ಎಫ್‌ಐಆರ್ ದಾಖಲಿಸಿರುವ ಕುರಿತು ಅಕ್ಟೋಬರ್ 20 ರಂದು ಮಾಹಿತಿ ಲಭ್ಯವಾಗಿದೆ. ಆದರೆ ಎಫ್‌ಐಆರ್ ಕಾಪಿ ಕೊಡಿ ಎಂದರೂ ಕೊಡಲು ತಯಾರಿಲ್ಲ.ಆರ್‌ಟಿಐ ಮೂಲಕ ಪಡೆದುಕೊಳ್ಳುವುದಾರೆ ಪಡೆದುಕೊಳ್ಳುವಂತಾಗಿದೆ.

ಈ ದೂರನ್ನು ಇಲ್ಲಿಯೇ ಕೈಬಿಡಬೇಕು ಎಂಬುದು ಒತ್ತಾಯವಾಗಿದೆ. ಆದರೆ ಡಿಸಿಪಿ, ಎಸಿಪಿಯವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

English summary
The residents of Indiranagar are protesting against an FIR filed against them by traffic police for allegedly damaging the footpath during a tree plantation drive on 100 Feet Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X