ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

|
Google Oneindia Kannada News

ಬೆಂಗಳೂರು, ಜುಲೈ 19: ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ. ಆದರೆ, ಇದು ಡ್ರೋನ್ ಬಗ್ಗೆ ಸುಳ್ಳು ಹೇಳಿ ಜನರನ್ನು ವಂಚಿಸಿದ ಪ್ರಕರಣವಲ್ಲ, ಇದು ಕೊವಿಡ್ 19ಗೆ ಸಂಬಂಧಿಸಿದ ವಿಷಯ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಮಳವಳ್ಳಿ ಮೂಲದ ಡ್ರೋನ್ ಪ್ರತಾಪ್ ವಿರುದ್ಧ ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಕೊವಿಡ್ 19 ಸೋಂಕಿತರೊಬ್ಬರ ಸಂಪರ್ಕದಲ್ಲಿದ್ದ ಪ್ರತಾಪ್ ಅವರು ನಿಯಮ ಉಲ್ಲಂಘಿಸಿ ಹೋಂ ಕ್ವಾರಂಟೈನ್ ನಿಂದ ಹೊರಕ್ಕೆ ಬಂದಿದ್ದಾರೆ ಎಂದು ಡಾ. ಪ್ರಯಾಗ್ ಎಂಬುವರು ದೂರು ನೀಡಿದ್ದಾರೆ.

'ಡ್ರೋಣ್' ಎಂದು ಕಾಗೆ ಹಾರಿಸಿದ್ದ 'ಪ್ರತಾಪ್' ವಿರುದ್ಧ ದೂರು ದಾಖಲು!'ಡ್ರೋಣ್' ಎಂದು ಕಾಗೆ ಹಾರಿಸಿದ್ದ 'ಪ್ರತಾಪ್' ವಿರುದ್ಧ ದೂರು ದಾಖಲು!

ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರಿನ ತಲಘಟ್ಟಪುರ ಠಾಣೆ ಪೊಲೀಸರು, ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ಹಾಕಿದ್ದಾರೆ.

FIR against Drone Pratap for violating home-quarantine norms

ಕೊರೊನಾವೈರಸ್ ಸೋಂಕು ಹರಡದಂತೆ ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಹಲವಾರು ಜನರು ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಹೊರಗೆ ಸುತ್ತಾಡಲು ಬಂದಿದ್ದಾರೆ.

ಹೋಂ ಕ್ವಾರಂಟೈನ್ ಗೆ ಒಳಗಾದವರು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುವುದು ಮತ್ತು ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗುವುದು ಇಲ್ಲವೇ ಇನ್ಯಾರಿಗಾದರೂ ಮೊಬೈಲ್ ಕೊಟ್ಟ ಸಂದರ್ಭಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾದರಿ ಮಾರ್ಗಸೂಚಿಗಳ ಅನ್ವಯ ಎಫ್.ಐ.ಆರ್ ದಾಖಲಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆ 271 ಪ್ರಕಾರ, 6 ತಿಂಗಳು ಜೈಲುವಾಸ ಅಥವಾ ದಂಡ ವಿಧಿಸಲಾಗುತ್ತದೆ ಅಥವಾ ಜೈಲು ಹಾಗೂ ದಂಡ ಎರಡನ್ನು ವಿಧಿಸಬಹುದು.

English summary
First Information Report (FIR) has been filed against Drone Pratap for violating home-quarantine norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X