ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದರೆ ದುಪ್ಪಟ್ಟು ದಂಡ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇನ್ಮುಂದೆ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ಕಟ್ಟುವವರು ಬಲು ಎಚ್ಚರವಾಗಿರಬೇಕಾಗುತ್ತದೆ.

ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ದುಪ್ಪಟ್ಟು ದಂಡವನ್ನು ವಿಧಿಸುವ ಕರ್ನಾಟಕ ನಗರಪಾಲಿಕೆಗಳ ಅಧಿನಿಯಮಕ್ಕೆ ತಿದ್ದುಪಡಿ ತರಲು ಮಸೂದೆಯೊಂದನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಸಿಎಜಿ ಬಿಚ್ಚಿಟ್ಟ ಲೆಕ್ಕ; ನಷ್ಟದಲ್ಲಿ ಸಾರ್ವಜನಿಕ ಉದ್ಯಮಗಳು ಸಿಎಜಿ ಬಿಚ್ಚಿಟ್ಟ ಲೆಕ್ಕ; ನಷ್ಟದಲ್ಲಿ ಸಾರ್ವಜನಿಕ ಉದ್ಯಮಗಳು

ಈಗಾಗಲೇ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಲ್ಲಿ ದುಪ್ಪಟ್ಟು ತೆರಿಗೆ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಬೆಂಗಳೂರು ಮಹಾ ನಗರದಲ್ಲಿ ಆ ವ್ಯವಸ್ಥೆ ಜಾರಿಗಾಗಿ ಕಾಯ್ದೆಗೆ ತಿದ್ದುಪಡಿ ತರಲು ಈ ಮಸೂದೆ ಮಂಡಿಸಲಾಗಿದೆ. ಈ ಮಸೂದೆ ಕಾಯ್ದೆ ರೂಪ ಪಡೆದುಕೊಂಡರೆ, ಇನ್ಮುಂದೆ ಅನಧಿಕೃತ ಕಟ್ಟಡಗಳ ಮಾಲಿಕರು ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ.

Fine Will Be Double For Illegal Constructed Buildings At BBMP Range

ಇದಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಕಿರುವ ಆಪ್ಟಿಕಲ್‌ ಫೈಬರ್‌ ಕೇಬಲ್‌ ಗಳನ್ನು ಒಳಗೊಂಡಂತೆ ಎಲ್ಲ ರೀತಿಯ ಕೇಬಲ್‌ಗಳ ಮೇಲೆ ಶುಲ್ಕ ಅಥವಾ ವಾರ್ಷಿಕ ಟ್ರಾಕ್‌ ಬಾಡಿಗೆಯನ್ನು ವಿಧಿಸಲೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

English summary
Fine Will Be Double For Illegal Constructed Buildings At BBMP Range. In Karnataka Vidhana Soudha Session Process The Bill regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X