ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬನ್ ಪಾರ್ಕ್‌ಗೆ ಕೃತಕ ಉಸಿರಾಟ ವ್ಯವಸ್ಥೆ: ಏನಿದು ಅವಸ್ಥೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಕಾರಣದಿಂದ ಕಬ್ಬನ್ ಉದ್ಯಾನದಲ್ಲಿ ಭಾನುವಾರ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಆದರೆ ಎಷ್ಟೇ ನಿಷೇಧ ಮಾಡಿದ್ದರೂ ಒಂದು ವರ್ಷ ನಿಯಮವನ್ನು ಪಾಲಿಸಲಾಯಿತು ಆದರೆ ಇದೀಗ ಕೆಲವು ವಾರ ವಾಹನಗಳು ನಿಯಮವನ್ನು ಮೀರಿ ಬರುತ್ತಿವೆ. ಅಷ್ಟೇ ಅಲ್ಲದೆ ದಿನನಿತ್ಯ ಸಾವಿರಾರು ವಾಹನಗಳು ಕಬ್ಬನ್ ಪಾರ್ಕ್ ಸುತ್ತಮುತ್ತಲು ಓಡಾಡುವುದರಿಂದ ವಾಯುಮಾಲಿನ್ಯ ವಿಪರೀತವಾಗಿದೆ.

ಕಬ್ಬನ್ ಪಾರ್ಕ್ ನಲ್ಲಿ‌ನ ಅಲಂಕಾರಿಕ ಮನೆಗಳ ಪುನಶ್ಚೇತನ ಶೀಘ್ರ ಕಬ್ಬನ್ ಪಾರ್ಕ್ ನಲ್ಲಿ‌ನ ಅಲಂಕಾರಿಕ ಮನೆಗಳ ಪುನಶ್ಚೇತನ ಶೀಘ್ರ

ಹಾಗಾಗಿ ತೋಟಗಾರಿಕೆ ಇಲಾಖೆಯು ಕಬ್ಬನ್ ಪಾರ್ಕ್ ಸುತ್ತಮುತ್ತ ಫೈನ್ ಡಸ್ಟ್ ಈಟರ್ ಎಂಬ ಹೆಸರಿನ ಎರಡು ಏರ್ ಪ್ಯೂರಿಫಾಯರ್‌ಗಳನ್ನು ಅಳವಡಿಸುತ್ತಿದೆ. ನ.1ರಂದು ಇವುಗಳಿಗೆ ಚಾಲನೆ ಸಿಗಲಿದೆ. ಉದ್ಯಾನದಲ್ಲಿ ಮರ-ಗಿಡಗಳು ಯಥೇಚ್ಛವಾಗಿದ್ದರೂ ಕಬ್ಬನ್‌ಪಾರ್ಕ್‌ನೊಳಗೆ (ಭಾನುವಾರ ಹೊರತುಪಡಿಸಿ) ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ.

ವಾಹನಗಳು ಉಗುಳುತ್ತಿವೆ ವಿಷಕಾರಿ ಹೊಗೆ

ವಾಹನಗಳು ಉಗುಳುತ್ತಿವೆ ವಿಷಕಾರಿ ಹೊಗೆ

ಈ ವಾಹನಗಳು ಉಗುಳುವ ಹೊಗೆಯಲ್ಲಿ ವಿಷಕಾರಿ ಧೂಳಿನ ಕಣಗಳಿರುತ್ತವೆ. ಹಾಗೆಯೇ ರಸ್ತೆಯಿಂದ ಬರುವ ಧೂಳಿನ ಕಣಗಳು ಉದ್ಯಾನಕ್ಕೆ ಬರುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೀಗಾಗಿ ಗಾಳಿಯಲ್ಲಿ ತೇಲುವ ಘನ ತ್ಯಾಜ್ಯಗಳನ್ನು ಹಿಡಿದಿಟ್ಟುಕೊಳ್ಳುವ ಯಂತ್ರಗಳನ್ನು ಅಳವಡಿಸಲು ಮುಂದಾಗಿದ್ದೇವೆ. ಕೆಲ ತಿಂಗಳ ಕಾಲ ಪ್ರಾಯೋಗಿಕವಾಗಿ ಅಳವಡಿಸಲಾಗುವುದು,'' ಎಂದು ಕಬ್ಬನ್‌ಪಾರ್ಕ್‌ನ ಉಪನಿರ್ದೇಶಕ ಮಹಾಂತೇಶ್‌ ಮುರಗೋಡ ಮಾಹಿತಿ ನೀಡಿದ್ದಾರೆ.

ಕಬ್ಬನ್‌ ಪಾರ್ಕ್‌ನಲ್ಲಿ ಯುವತಿ ಆತ್ಮಹತ್ಯೆ: ಪ್ರಿಯಕರನ ಬಂಧನ ಕಬ್ಬನ್‌ ಪಾರ್ಕ್‌ನಲ್ಲಿ ಯುವತಿ ಆತ್ಮಹತ್ಯೆ: ಪ್ರಿಯಕರನ ಬಂಧನ

ಏರ್ ಪ್ಯೂರಿಫಾಯರ್ ವಿಶೇಷತೆ ಏನು?

ಏರ್ ಪ್ಯೂರಿಫಾಯರ್ ವಿಶೇಷತೆ ಏನು?

ಈ ಪ್ಯೂರಿಫಾಯರ್ ಗೆ ಧೂಳು ಹೀರಿಕೊಳ್ಳಕೊಳ್ಳುವ ಮೂರು ಬಾಕ್ಸ್‌ಗಳನ್ನು ಒಳಗೊಂಡಿದೆ. ವಿದ್ಯುತ್ ಚಾಲಿತ ಯಂತ್ರಗಳು 200 ಮೀಟರ್
ಧೂಳು ಹೀರಿಕೊಳ್ಳುವ ಯಂತ್ರಗಳು ತಲಾ ಮೂರು ಬಾಕ್ಸ್‌ಗಳನ್ನು ಒಳಗೊಂಡಿದೆ. ವಿದ್ಯುತ್‌ ಚಾಲಿತ ಈ ಯಂತ್ರಗಳು ಸುಮಾರು 200 ಮೀಟರ್‌ ವ್ಯಾಪ್ತಿಯವರೆಗಿನ ತೇಲಾಡುವ ಘನ ತ್ಯಾಜ್ಯವನ್ನು ಹೀರಿಕೊಂಡು ಶುದ್ಧ ಗಾಳಿ ನೀಡುತ್ತವೆ. ಇಂತಹ ಗಾಳಿ ಸೇವಿಸಿದರೆ ಮನುಷ್ಯನ ದೇಹದ ಮೇಲಾಗುವ ಅಡ್ಡ ಪರಿಣಾಮ ನಿಯಂತ್ರಿಸಬಹುದು. ಸ್ಥಿರ ಯಂತ್ರವಾದರೆ 7 ಲಕ್ಷ ರೂ. ಹಾಗೂ ಸಂಚಾರಿ ಯಂತ್ರವಾದರೆ 15 ಲಕ್ಷ ರೂ. ಬೆಲೆ ಇದೆ. ಜರ್ಮನಿ ಮೂಲದ ಮನ್‌ ಹಮ್ಮಲ್‌ ಸಂಸ್ಥೆಯು ಯಂತ್ರಗಳನ್ನು ಉಚಿತವಾಗಿ ನೀಡಿದೆ. ಯಂತ್ರವೊಂದು 1.5 ಟನ್‌ ತೂಕವನ್ನು ಹೊಂದಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ಅತ್ಯಾಚಾರ, ಇಬ್ಬರಿಗೆ ಜೀವಾವಧಿ ಶಿಕ್ಷೆ ಕಬ್ಬನ್‌ ಪಾರ್ಕ್‌ನಲ್ಲಿ ಅತ್ಯಾಚಾರ, ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಬ್ಬನ್‌ಪಾರ್ಕ್‌ನಲ್ಲಿ ಕಾರ್ಯಕ್ರಮ

ಕಬ್ಬನ್‌ಪಾರ್ಕ್‌ನಲ್ಲಿ ಕಾರ್ಯಕ್ರಮ

ನ.1ರಂದು ಬೆಳಗ್ಗೆ 10.30ಕ್ಕೆ ಕಬ್ಬನ್‌ ಉದ್ಯಾನದ ಆವರಣದಲ್ಲಿರುವ ಕರ್ನಾಟಕ ಲಾನ್‌ ಟೆನ್ನಿಸ್‌ ಕಟ್ಟಡದ ಆವರಣದಲ್ಲಿ ಯಂತ್ರಗಳಿಗೆ ಚಾಲನೆ ಸಿಗಲಿದೆ. ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್‌ ಉದ್ಯಾನದ ಸಲಹಾ ಸಮಿತಿ ಅಧ್ಯಕ್ಷ ಡಾ. ಎ.ಎನ್‌. ಯಲ್ಲಪ್ಪರೆಡ್ಡಿ, ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್‌. ಪಾಟೀಲ್‌, ಶ್ವಾಸಕೋಶ ತಜ್ಞ ವೈದ್ಯ ಡಾ. ಎಚ್‌. ಪರಮೇಶ್‌, ಮಕ್ಕಳ ತಜ್ಞ ಡಾ. ಜಿ. ಶಶಿಧರ ಭಾಗವಹಿಸುವರು. ಉದ್ಘಾಟನೆ ನಂತರ ಧೂಳಿನಿಂದ ಬರುವ ಆರೋಗ್ಯದ ಸಮಸ್ಯೆಗಳ ಕುರಿತು ತಜ್ಞರು ಮಾಹಿತಿ ನೀಡುವರು.

ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!

ಒಟ್ಟು ಎಷ್ಟು ಯಂತ್ರ

ಒಟ್ಟು ಎಷ್ಟು ಯಂತ್ರ

ಕಬ್ಬನ್‌ಪಾರ್ಕ್‌ನ ಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಬಳಿ ಒಂದು ಸ್ಥಿರ ಯಂತ್ರವನ್ನು (ಸ್ಟೇಷನರಿ ಡಸ್ಟ್‌ ಈಟರ್‌) ಅಳವಡಿಸಲಾಗುವುದು. ಮತ್ತೊಂದು ಸಂಚಾರಿ ಯಂತ್ರವಾಗಿದ್ದು, ಇದು ವಿಧಾನಸೌಧ, ಹೈಕೋರ್ಟ್‌ ಸುತ್ತಮುತ್ತ ಸಂಚರಿಸಲಿದೆ. ದಿನವಿಡೀ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ ಎಂದು ಮಹಂತೇಶ್ ಮುರಗೋಡ ತಿಳಿಸಿದ್ದಾರೆ.

English summary
Department of horticulture is installing air purifier units at Cubbon park on November 1. These machines will purify the air in the particular premises and department has planned to control air pollution in the park area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X