ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಯಾವಾಗ ಯಾವ ಪರೀಕ್ಷೆ?

|
Google Oneindia Kannada News

ಬೆಂಗಳೂರು, ನವೆಂಬರ್ 4: ಪದವಿಪೂರ್ವ ಶಿಕ್ಷಣ ಇಲಾಖೆಯು 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2020ರ ಮಾರ್ಚ್ ತಿಂಗಳಿನಿಂದ ಪರೀಕ್ಷೆಗಳು ಆರಂಭವಾಗಲಿವೆ. ಪ್ರತಿ ಬಾರಿಗಿಂತ ಪ್ರಸಕ್ತ ವರ್ಷ ತುಸು ಮೊದಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ.

15 ವರ್ಷಕ್ಕೆ ಕಾಲಿಟ್ಟವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು15 ವರ್ಷಕ್ಕೆ ಕಾಲಿಟ್ಟವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು

ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗಗಳಿಗೆ ಏಕಕಾಲದಲ್ಲಿ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 4ರಂದು ಆರಂಭವಾಗಲಿರುವ ಪರೀಕ್ಷೆ ಮಾರ್ಚ್ 23ಕ್ಕೆ ಮುಕ್ತಾಯವಾಗಲಿದೆ.

Final Time Table Of Second PUC Examination

ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:

* ಮಾರ್ಚ್ 4: ಇತಿಹಾಸ, ಭೌತಶಾಸ್ತ್ರ, ಮೂಲ ಗಣಿತ

* ಮಾರ್ಚ್ 5: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

* ಮಾರ್ಚ್ 6: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

* ಮಾರ್ಚ್ 7: ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ

* ಮಾರ್ಚ್ 9: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಆರೋಗ್ಯ, ಸೌಂದರ್ಯ ಮತ್ತು ಕ್ಷೇಮ

* ಮಾರ್ಚ್ 10: ಉರ್ದು

* ಮಾರ್ಚ್ 11: ಕನ್ನಡ ಐಚ್ಛಿಕ, ಅಕೌಂಟೆನ್ಸಿ, ಗಣಿತ

* ಮಾರ್ಚ್ 12: ಭೂಗೋಳ ಶಾಸ್ತ್ರ

* ಮಾರ್ಚ್ 13: ಶಿಕ್ಷಣ

* ಮಾರ್ಚ್ 14: ಮನೋವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್

* ಮಾರ್ಚ್ 16: ತರ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ

* ಮಾರ್ಚ್ 17: ಅರ್ಥಶಾಸ್ತ್ರ, ಜೀವಶಾಸ್ತ್ರ

* ಮಾರ್ಚ್ 18: ಹಿಂದಿ

* ಮಾರ್ಚ್ 19: ಕನ್ನಡ

* ಮಾರ್ಚ್ 20: ಸಂಸ್ಕೃತ

* ಮಾರ್ಚ್ 21: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

* ಮಾರ್ಚ್ 23: ಇಂಗ್ಲಿಷ್

English summary
PU Education department on Monday has released the final time table of 2nd PUC examination. Exams will be commenced from March 4 to March 23 of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X