• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಟೋ, ರ‍್ಯಾಪಿಡೋ ಜಟಾಪಟಿ; ರ‍್ಯಾಪಿಡೋ ನಿಷೇಧಕ್ಕೆ ಒತ್ತಾಯ

By ಶ್ರೀಧರ್ ಎಂ ಬೂದಿಗೆರೆ
|
Google Oneindia Kannada News

ಬೆಂಗಳೂರು, ಜನವರಿ 27; ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಮತ್ತು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ನೀಡುವವರ ನಡುವೆ ಜಟಾಪಟಿ ಮುಂದುವರೆದಿದೆ. ಟ್ಯಾಕ್ಸಿ ಸೇವೆಯಿಂದ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ರ‍್ಯಾಪಿಡೋ ನಿಷೇಧಕ್ಕೆ ಆಟೋ ಚಾಲಕರು ಒತ್ತಾಯಿಸಿದ್ದಾರೆ.

ಮೊಬೈಲ್ ಅಪ್ಲಿಕೇಶನ್ ಮೂಲಕ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಬೈಕ್‌ಗಳಲ್ಲಿ ವಾಣಿಜ್ಯ ಸೇವೆ ಒದಗಿಸುವ ರ‍್ಯಾಪಿಡೋ ಸೇವೆ ನಿಲ್ಲಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ಸಹ ನಡೆಸುತ್ತಿದ್ದಾರೆ.

ಆಟೋಗಳು ಅಧಿಕೃತವಾಗಿ ಎಲ್ಲಾ ರೀರಿಯ ತೆರಿಗೆ ಕಟ್ಟಿ ಜನರ ಸೇವೆ ಮಾಡುತ್ತಿವೆ. ಆಟೋ ನಂಬಿ ನಾವು ಜೀವನ ಸಾಗಿಸುತ್ತಿದ್ದೇವೆ. ರ‍್ಯಾಪಿಡೋ ಬೈಕ್‌ಗಳ ಅನಧಿಕೃತ ಸೇವೆಯಿಂದ ನಮ್ಮ ಬದುಕು ದುಸ್ತರವಾಗಿದೆ ಎಂದು ಆಟೋ ಚಾಲಕರು ಬೀದಿಗೆ ಬಂದು ಪ್ರತಿಭಟನೆ ಮಾಡಿದರು.

 ರ್‍ಯಾಪಿಡೋ ಬೈಕ್ ಸವಾರರು ಮತ್ತು ಆಟೋ ಚಾಲಕರ ನಡುವೆ ಜಟಾಪಟಿ ರ್‍ಯಾಪಿಡೋ ಬೈಕ್ ಸವಾರರು ಮತ್ತು ಆಟೋ ಚಾಲಕರ ನಡುವೆ ಜಟಾಪಟಿ

ಹಲವಾರು ದಿನಗಳಿಂದ ರ‍್ಯಾಪಿಡೋ ಮತ್ತು ಆಟೋ ಚಾಲಕರ ನಡುವೆ ಮುಸುಕಿನ‌ ಗುದ್ದಾಟ ನಡೆಯುತ್ತಲೇ ಇದೆ. ಮೀಟರ್ ಹಾಕದೆ ಜನರನ್ನು ದೋಚುವ ಆಟೋಗಳ ಸಹವಾಸ ಬೇಡ ಎಂದು ಜನರು ರ‍್ಯಾಪಿಡೋ ಬುಕ್ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ದುಡಿಯುವ ಆಟೋ ಚಾಲಕರಿಗೂ ನಷ್ಟವಾಗುತ್ತಿದೆ.

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ; ಆಟೋ ಗ್ಯಾಸ್ ದರವೂ ಏರಿಕೆ!ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ; ಆಟೋ ಗ್ಯಾಸ್ ದರವೂ ಏರಿಕೆ!

ಬಸ್ ನಿಲ್ದಾಣ, ಆಟೋ ನಿಲ್ದಾಣದ ಬಳಿಯಿಂದಲೇ ರ‍್ಯಾಪಿಡೋಗಳು ಪ್ರಯಾಣಿಕರನ್ನು ಸೆಳೆದುಕೊಂಡು ಹೋಗುತ್ತಿವೆ. 11/8/2021ರಿಂದ ದೇಶಾದ್ಯಂತ ಬೈಕ್‌ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಆದರೆ ಇದಕ್ಕೆ ನಿಗದಿತವಾಗ ಮಾರ್ಗಸೂಚಿ ಇಲ್ಲ.

ಆಟೋ ಚಾಲಕರ ಸಮಯಪ್ರಜ್ಞೆ; ಸುರಕ್ಷಿತವಾಗಿ ಸಿಕ್ಕ ಬೆಂಗಳೂರಿನ ಮಕ್ಕಳು! ಆಟೋ ಚಾಲಕರ ಸಮಯಪ್ರಜ್ಞೆ; ಸುರಕ್ಷಿತವಾಗಿ ಸಿಕ್ಕ ಬೆಂಗಳೂರಿನ ಮಕ್ಕಳು!

ರಾಜ್ಯ ಇನ್ನೂ ಅಂತಿಮ ಒಪ್ಪಿಗೆ ಕೊಟ್ಟಿಲ್ಲ. ನಮ್ಮ ಸೇವೆಗೆ ಅವಕಾಶ ಕೊಡಿಸಿ ಎಂದು ಹೈಕೋರ್ಟ್‌ ಮೊರೆ ಹೋಗಿದೆ ರ‍್ಯಾಪಿಡೋ. ಆಟೋ ಚಾಲಕರು ಸಹ ರ‍್ಯಾಪಿಡೋ ಸೇವೆ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ ರ‍್ಯಾಪಿಡೋ ಸೇವೆ ನಡೆಸುವವರು ಅಪ್ಲಿಕೇಶನ್ ಮೂಲಕ ನಾವು ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ. ನಮಗೆ ಕಂಪನಿ ಹೇಳಿದಂತೆ ಕೆಲಸ ಮಾಡುತ್ತಿದ್ದೇವೆ. ಅವರ ಶ್ರಮ ಅವರದ್ದು, ನಮ್ಮ ದುಡಿಮೆ ನಮ್ಮದು ಅಂತಾರೆ.

ಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದು ಯಾರಿಗೂ ತೊಂದರೆಯಾಗದ ತೀರ್ಮಾನ ಕೈಗೊಳ್ಳಬೇಕು. ಸರ್ಕಾರ ಅಂತಿಮ ತೀರ್ಮಾನ ಮಾಡುವ ತನಕ ರ‍್ಯಾಪಿಡೋ ಮತ್ತು ಆಟೋ ಚಾಲಕರ ಜಟಾಪಟಿ ನಡೆಯುತ್ತಲೇ ಇರುತ್ತದೆ.

   Sachin ಪ್ರಕಾರ Rohit Sharma ಮತ್ತು Dravid ಮಾಡ್ಬೇಕಾಗಿರೋದೇನು? | Oneindia Kannada
   English summary
   Fight between Rapido bike taxi service and auto drivers. Auto drivers urged the government to ban bike taxi service.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion