ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕ್‌ಟಾಕ್ ವಿಡಿಯೋ ಮಾಡ್ತೀರಾ?: ಈ ಅಂಶಗಳು ನಿಮ್ಮ ಗಮನದಲ್ಲಿರಲಿ

|
Google Oneindia Kannada News

ಬೆಂಗಳೂರು, ಆಗಸ್ಟ್ 1: ಮನರಂಜನೆಗೆಂದು ಆರಂಭವಾದ ಟಿಕ್‌ಟಾಕ್ ಅಪ್ಲಿಕೇಷನ್ ಮನಸ್ಸು ಹಾಳು ಮಾಡುವ ಮಾಧ್ಯಮವಾಗಿ ನಮ್ಮ ಮುಂದೆ ನಿಂತಿದೆ.

ಹೌದು ಟಿಕ್ ಟಾಕ್ ಯಾರು ಬಳಸುವುದಿಲ್ಲ ಹೇಳಿ, ಐದಾರು ವರ್ಷದ ಮಕ್ಕಳಿಂದ ಹಿಡಿದು 60 ವರ್ಷ ದಾಟಿದ ಅಜ್ಜ, ಅಜ್ಜಿಯಂದಿರು ಕೂಡ ಬಳಕೆ ಮಾಡುತ್ತಿದ್ದಾರೆ. ಕೆಲವರು ಊಟವಾದರೂ ಬಿಟ್ಟಾರು ಆದರೆ ದಿನಕ್ಕೊಂದು ಟಿಕ್‌ಟಾಕ್ ವಿಡಿಯೋ ಶೇರ್‌ ಮಾಡುವುದನ್ನು ಮಾತ್ರ ಮರೆಯೊಲ್ಲ ಅಂತಹ ಪರಿಸ್ಥಿತಿ ಇದೆ.

ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು? ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?

ನಿಮ್ಮ ಡಬ್ಬಿಂಗ್ ಪ್ರತಿಭೆ ಹೊರತರುವುದೋ ಅಥವಾ ಮನರಂಜನೆ ದೃಷ್ಟಿಯಿಂದ ಆರಂಭವಾದ ಟಿಕ್‌ಟಾಕ್‌ನಿಂದ ಸಿಹಿಗಿಂತ ಕಹಿ ಘಟನೆಗಳೇ ಹೆಚ್ಚಿವೆ. ಟಿಕ್‌ಟಾಕ್ ಅಪ್ಲಿಕೇಷನ್‌ನ್ನು ಕೇವಲ ಮನರಂಜನೆಗಾಗಿ ಬಳಸಿ ಮನಸ್ಸನ್ನು ಹಾಳು ಮಾಡಿಕೊಳ್ಳುವದಕ್ಕಲ್ಲ. ನೀವು ಟಿಕ್ ಟಾಕ್ ಅಪ್ಲಿಕೇಷನ್ ಬಳಸುವುದಾದರೆ ಈ ಕೆಲವು ಅಂಶಗಳು ನಿಮ್ಮ ಗಮನದಲ್ಲಿರಲಿ.

Few Tips to Keep you safe From the TikTok

ಮೊದಲು ಟಿಕ್‌ಟಾಕ್ ಎಂದರೇನು?: ಟಿಕ್ ಟಾಕ್ ಎನ್ನುವುದು ಆಂಡ್ರಾಯ್ಡ್ ಅಪ್ಲಿಕಷೇನ್, ಅದು ಶಾರ್ಟ್ ವಿಡಿಯೋ ಶೇರಿಂಗ್ ಅಪ್ಲಿಕೇಷನ್ ಆಗಿದ್ದು, ತಮ್ಮ ಎಕ್ಸ್‌ಪ್ರೆಷನ್‌ಗಳನ್ನು 15 ಸೆಕೆಂಡುಗಳ ವಿಡಿಯೋ ಮೂಲಕ ಅಭಿವ್ಯಕ್ತಪಡಿಸಬಹುದು. ಇದನ್ನು ಬೈಟ್‌ಡ್ಯಾನ್ಸ್ ಟೀಮ್ ಅಭಿವೃದ್ಧಿಪಡಿಸಿದೆ.

ಎಂಕರೇಜ್ ಪಾಸಿಟಿವಿಟಿ: ಟಿಕ್‌ಟಾಕ್‌ನಲ್ಲಿರುವ ಒಳ್ಳೆಯ ಅಂಶಗಳನ್ನು ಪ್ರೋತ್ಸಾಹಿಸಬೇಕು. ಯಾವುದು ಒಳ್ಳೆಯದು, ಯಾವು ಕೆಟ್ಟದ್ದು ಎಂಬುದನ್ನು ತಿಳಿಸಿಕೊಡಬೇಕಾಗಿರುವುದು ಪೋಷಕರ ಕರ್ತವ್ಯ ಕೂಡ ಆಗಿದೆ. ಟಿಕ್‌ಟಾಕ್‌ನಲ್ಲಿ ಬರುವ ಗುಡ್,ಪಾಸಿಟೀವ್ ಹ್ಯಾಷ್‌ಟ್ಯಾಗ್‌ಗಳನ್ನು ಫಾಲೋಮಾಡಬೇಕು. ಉದಾಹರಣೆಗೆ #eduTok ಎನ್ನುವುದಿದ್ದು ಅದರಲ್ಲಿ ನಿಮ್ಮ ಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗುವಂತಹ ವಿಡಿಯೋಗಳು ಅಲ್ಲಿ ಲಭ್ಯವಿದೆ.

ತುಮಕೂರು ಯುವಕನ ಜೀವನ ನರಕ ಮಾಡಿದ ಟಿಕ್‌ಟಾಕ್‌ತುಮಕೂರು ಯುವಕನ ಜೀವನ ನರಕ ಮಾಡಿದ ಟಿಕ್‌ಟಾಕ್‌

ಎಷ್ಟು ಹೊತ್ತು ಟಿಕ್‌ಟಾಕ್‌ನಲ್ಲಿ ಮುಳುಗಿರ್ತೀರಿ?: ನಿಮಗೆ ಆ ಟಿಕ್ ಟಾಕ್ ಗೀಳಿನಿಂದ ತಕ್ಷಣ ಹೊರಬರಲು ಸಾಧ್ಯವಾಗದಿದ್ದರೆ, ಒಂದು ಕಾಲಮಿತಿಯನ್ನು ಹಾಕಿಕೊಳ್ಳಿ. ಇಂತಿಷ್ಟು ಗಂಟೆ, ಅಥವಾ ಇಂತಿಷ್ಟು ನಿಮಿಷಗಳು ಮಾತ್ರ ಟಿಕ್‌ಟಾಕ್ ಆಪ್ ಬಳಸಬೇಕು ಎಂದು ಮನಸ್ಸಿನಲ್ಲಿ ನಿರ್ಧಾರ ಮಾಡಿಕೊಳ್ಳಿ. ಯುವಕರು ಆ ಸಮಯವನ್ನು ಮೀರಿ ದಿನಪೂರ್ತಿ ವಿಡಿಯೋ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ. ಅದರಿಂದ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಯಾವ ಬಗೆಯ ವಿಡಿಯೋವನ್ನು ನೋಡುತ್ತಾರೆ?: ಟಿಕ್‌ಟಾಕ್ ಅಪ್ಲಿಕೇಷನ್‌ನಲ್ಲಿರುವ ರಿಸ್ಟ್ರಿಕ್ಟೆಡ್ ಮೋಡ್ ಎನ್ನುವ ಫೀಚರ್ ಇದ್ದು ಅದು ಯುವಕರು ನೋಡುವಂತದ್ದಲ್ಲ, ಈ ಫೀಚರ್‌ ಕೇವಲ ಪಾಸ್‌ವರ್ಡ್ ಮೂಲಕ ಓಪನ್ ಆಗುತ್ತದೆ.

ಕೋಲಾರದಲ್ಲಿ ಟಿಕ್‌ಟಾಕ್ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು ಕೋಲಾರದಲ್ಲಿ ಟಿಕ್‌ಟಾಕ್ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು

13 ವರ್ಷ ಮೇಲ್ಪಟ್ಟವರು ಮಾತ್ರ ಟಿಕ್‌ಟಾಕ್‌ ಬಳಸಿ: 13 ವರ್ಷ ಮೇಲ್ಪಟ್ಟವರು ಮಾತ್ರ ಟಿಕ್‌ಟಾಕ್ ಬಳಕೆ ಮಾಡಬಹುದು. ಟಾಪ್ಲಿಕೇಷನ್‌ಲ್ಲಿರುವ ಏಜ್ ಗೇಟ್ ಫೀಚರ್ ಕೇವಲ 13 ವರ್ಷ ಮೇಲ್ಪಟ್ಟವನ್ನು ಮಾತ್ರ ಬಳಕೆಗೆ ಅನುವು ಮಾಡಿಕೊಡುತ್ತದೆ.

ಡಿವೈಸ್ ಮ್ಯಾನೇಜ್‌ಮೆಂಟ್: ಟಿಕ್‌ಟಾಕ್ ಅಪ್ಲಿಕೇಷನ್‌ನ್ನು ಬೈಟ್‌ಡ್ಯಾನ್ಸ್ ಟೆಕ್ನಾಲಜಿ ಟೀಮ್ ಅಭಿವೃದ್ಧಿಪಡಿಸಿದೆ. ಅದರಲ್ಲಿರುವ ಡಿವೈಸ್ ಮ್ಯಾನೇಜ್‌ಮೆಂಟ್ ಫೀಚರ್ ನ್ನು ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದೆ. ಅದರಲ್ಲಿ ಬೇರೆಯವರ ಅಕೌಂಟ್ ಮೂಲಕ ಟಿಕ್ ಟಾಕ್ ವಿಡಿಯೋ ವೀಕ್ಷಣೆ ಅಥವಾ ವಿಡಿಯೋ ಮಾಡುವುದನ್ನು ಇದು ತಡೆಯುತ್ತದೆ.

English summary
Here some tips to keep safe from TikTok, Therefore, in today’s digital age, teenagers need to be prepped for social media activity as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X