ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಾಲ ಸೇವೆಗಳು ಶೀಘ್ರದಲ್ಲೇ ಆನ್ ಲೈನ್ ನಲ್ಲಿ ಲಭ್ಯ

|
Google Oneindia Kannada News

Sakala
ಬೆಂಗಳೂರು, ಅ, 23 : ಸಕಾಲ ಯೋಜನೆಯನ್ನು ಜನಸ್ನೇಹಿಯಾಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಕಾಲ ಯೋಜನೆಯ ಕೆಲವು ಸೇವೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಕೆಲಸಕ್ಕೆ ಕಡಿವಾಣ ಬೀಳಲಿದೆ.

ಸಕಾಲ ಯೋಜನೆಯನ್ನು ಜನಸ್ನೇಹಿಯಾಗಿಲು ಆನ್ ಲೈನ್ ಮೂಲಕ ನೋಂದಣಿ ಮಾಡುವ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕ ಆಡಳಿತ ಮತ್ತು ಸುಧಾರಣೆ ಇಲಾಖೆ ಪ್ರಸ್ತಾವನೆ ರಚಿಸಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.

ಆನ್ ಲೈನ್ ಮೂಲಕ ಕೆಲವು ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಇಲಾಖೆ ಅರ್ಜಿಯನ್ನು ಸ್ವೀಕರಿಸಿ ನಿಮಗೆ ಬೇಕಾದ ದಾಖಲೆ ಪತ್ರಗಳನ್ನು ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. ಇದರಿಂದ ಕಚೇರಿಗಳಿಗೆ ಅಲೆದಾಡುವ ಕಾರ್ಯಕ್ಕೆ ತೆರೆ ಬೀಳಲಿದೆ.

ಕೆಲವು ಇಲಾಖೆಗಳ ನಾಗರೀಕ ಸೇವೆಗಳಿಗೆ ಮಾತ್ರ ಈ ಆನ್ ಲೈನ್ ವ್ಯವಸ್ಥೆ ಅನ್ವಯವಾಗಲಿದೆ. ಪ್ರಮಾಣಪತ್ರಗಳ ನವೀಕರಣ, ಭೂ ದಾಖಲಾತಿ ಮುಂತಾದವುಗಳನ್ನು ಈ ಸೇವೆ ಮೂಲಕ ನೀಡಲು ಆಡಳಿತ ಸುಧಾರಣಾ ಇಲಾಖೆ ಉದ್ದೇಶಿಸಿದೆ.

ಆದರೆ, ಕುಡಿಯುವ ನೀರಿನ ಸಂಪರ್ಕ ಮುಂತಾದ ಸೇವೆಗಳನ್ನು ಪಡೆಯಲು ಬಯಸುವ ಸಾರ್ವಜನಿಕರು ಹತ್ತಿರದ ಕಚೇರಿಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಕೆಲವು ಸೇವೆಗಳಿಗೆ ಮಾತ್ರ ಆನ್ ಲೈನ್ ವ್ಯವಸ್ಥೆ ಅನ್ವಯಿಸಲಿದೆ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ದಾಖಲೆಗನ್ನು ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಆಡಳಿತ ಸುಧಾರಣಾ ಇಲಾಖೆ ಚಿಂತನೆ ನಡೆಸಿದೆ. ಆನ್ ಲೈನ್ ನಲ್ಲಿ ಯಾವ ಸೇವೆಗಳನ್ನು ಒದಗಿಸಬಹುದು ಎಂದು ಎಲ್ಲಾ ಇಲಾಖೆಗಳಿಂದ ಮಾಹಿತಿ ನೀಡುವಂತೆ ಸೂಚನೆ ಕಳುಹಿಸಲಾಗಿದೆ.

ಆನ್ ಲೈನ್ ಮೂಲಕ ಸೇವೆ ಒದಗಿಸುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಜನರು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ, ನಂತರ ಮತ್ತೆ ಕಚೇರಿಗೆ ದಾಖಲೆ ತೆಗೆದುಕೊಂಡು ಹೋಗಲು ಆಗಮಿಸುವುದಕ್ಕೆ ತಡೆ ಬೀಳಲಿದೆ.

English summary
To make Sakala scheme more user-friendly, the government is proposing to go online. services under Sakala scheme, can, in due course, be availed by applying online and await delivery at one’s doorstep by post. Department of Public Administration & Reforms (DPAR) officials said, the proposal was a preliminary stage and would need cabinet approval to be put into place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X