ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಸರಾ: ಬಾನೆತ್ತರಕ್ಕೇರಿದ ಬೂದುಗುಂಬಳ, ಹೂವಿನ ದರ

|
Google Oneindia Kannada News

Recommended Video

ಬೆಂಗಳೂರು : ಬಾನೆತ್ತರಕ್ಕೇರಿದ ಬೂದುಕುಂಬಳ , ಹೂವಿನ ದರ | Oneindia Kannada

ಬೆಂಗಳೂರು, ಅಕ್ಟೋಬರ್ 17: ವಿಜಯದಶಮಿ ಅಂಗವಾಗಿ ಅಂಗಡಿ ಪೂಜೆ, ವಾಹನಗಳ ಪೂಜೆ, ಕಚೇರಿಗಳ ಪೂಜೆ ಹೀಗೆ ಎಲ್ಲಾ ಪೂಜೆಗಳಿಗೂ ಬೂದು ಗುಂಬಳ ಶ್ರೇಷ್ಠ. ಹೂವು ಹಾಗೂ ಬೂದುಗುಂಬಳ ಬೆಲೆ ಬಾನೆತ್ತರಕ್ಕೇರಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ನಗರದ ಕೆಆರ್ ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿದೆ. ತಮಿಳುನಾಡಿನಿಂದ ಬರುವ ಮಲ್ಲಿಗೆ, ಮಾರಿಗೋಲ್ಡ್, ಸೇವಂತಿಗೆ, ಐಸ್‌ಬರ್ನ್ ಸೇವಂತಿಗೆ ದರ ಸ್ವಲ್ಪ ಏರಿಕೆಯಾಗಿದೆ.

ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ

ಆಯುಧಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ವಿತರಿಸುವ ಕಡ್ಲೆಪುರಿಗೆ ಹೆಚ್ಚು ಬೇಡಿಕೆ ಇದ್ದು, ಒಂದು ಸೇರಿಗೆ 7ರೂ.ನಿಂದ 10ರವರೆಗೆ ಮಾರಾಟವಾಗುತ್ತಿದೆ.

ನಿಂಬೆ ಹಾಗೂ ಹೂವಿಗೆ ಬಾರಿ ಬೇಡಿಕೆ

ನಿಂಬೆ ಹಾಗೂ ಹೂವಿಗೆ ಬಾರಿ ಬೇಡಿಕೆ

ಹಬ್ಬದವರೆಗೆ ಸ್ಥಿರತೆ ಕಾಯ್ದುಕೊಂಡಿದ್ದ ನಿಂಬೆ ಹಾಗೂ ಹೂವುಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಹೂವಿನ ಬೆಲೆ ನಿಗದಿಯಾಗಿದೆ. ಗೌರಿಬಿದನೂರು, ಮೈಸೂರು ಮತ್ತಿತರೆ ಭಾಗಗಳಿಂದ ಸೇವಂತಿ, ಚೆಂಡು ಹೂವು ಬಂದಿದೆ. ತಮಿಳುನಾಡು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಮಲ್ಲಿಗೆ ಬರುತ್ತಿದ್ದು, ಮಲ್ಲಿಗೆ ಮೊಗ್ಗು ಕೆಜಿಗೆ 400-500ರೂ ಆಗಿದೆ. ಬೆಂಗಳೂರು ಸುತ್ತಮುತ್ತ ಪಾಲಿಹೌಸ್‌ಗಳಲ್ಲಿ ಬೆಳೆದ ಸೇವಂತಿಗೆಗೆ ಹೆಚ್ಚು ಬೇಡಿಕೆ ಇದ್ದು, ಕೆಜಿಗೆ 200-250 ರೂಪಾಯಿಗೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಹೂವುಗಳ ದರ

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಹೂವುಗಳ ದರ

ಮಂಗಳವಾರ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಸೇವಂತಿಗೆ ಮೊಳಕ್ಕೆ 50 ರೂ ಇತ್ತು, ಮಲ್ಲಿಗೆ ಮೊಳಗ್ಗೆ 30ರೂ, ಕನಕಾಂಬರ 20ರೂಗೆ ಮಾರಾಟವಾಗುತ್ತಿತ್ತು. ಬೂದುಗುಂಬಳ ಗಾತ್ರಕ್ಕೆ ತಕ್ಕಂತೆ 50-60, ಸಪೋಟ 60ರೂ,ಮೂಸಂಬಿ 40, ದಾಳಿಂಬೆ 120, ಸೇಬು 100ರಿಂದ 150 ರರೆಗೆ ಮಾರಾಟ ಮಾಡಲಾಯಿತು.

ವರಮಹಾಲಕ್ಷ್ಮೀ ಹಬ್ಬದ ಹೆಸರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ದರವರಮಹಾಲಕ್ಷ್ಮೀ ಹಬ್ಬದ ಹೆಸರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ದರ

ದಸರಾಗೆ ತಮಿಳುನಾಡು, ಆಂಧ್ರದಿಂದ ಬಂದ ಬೂದುಗುಂಬಳ

ದಸರಾಗೆ ತಮಿಳುನಾಡು, ಆಂಧ್ರದಿಂದ ಬಂದ ಬೂದುಗುಂಬಳ

ದಸರಾ ಹಬ್ಬಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶದಿಂದ ರಾಶಿಗಟ್ಟಲೆ ಬೂದುಗುಂಬಳಕಾಯಿ ಕೆ.ಆರ್. ಮಾರುಕಟ್ಟೆಗೆ ಬಂದಿದೆ. ಇಳುವರಿ ಉತ್ತಮವಾಗಿದ್ದು ಈ ಬಾರಿ ಹೋಲ್‌ಸೇಲ್ ದರ ಕೆಜಿಗೆ 20ರಿಂದ 50ರವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ದಸರಾದಲ್ಲಿ 80-100ರೂಗೆ ಮಾರಾಟವಾಗಿತ್ತು.ನಿಂಬೆ ಹಣ್ಣು ದರ 3 ರೂ. ಇದೆ ಆದರೆ ಚಿಲ್ಲರೆಯಾಗಿ 5-10ರೂ,ವರೆಗೂ ಮಾರಾಟ ಮಾಡಲಾಗುತ್ತಿದೆ.

ಬಾಳೆಕಂಬ, ತೆಂಗಿನ ಕಾಯಿ ದರ

ಬಾಳೆಕಂಬ, ತೆಂಗಿನ ಕಾಯಿ ದರ

ವಿಜಯದಶಮಿಯಂದು ಬಾಳೆ ಕಂಬ ಇಲ್ಲದೆ ಪೂಜೆ ಮಾಡುವುದಿಲ್ಲ ಹಾಗಾಗಿ ಬಾಳೆ ಕಂಬ ಕೊಳ್ಳುವುದು ಅನಿವಾರ್ಯ, ಬಾಳೆ ಕಂಬ ಒಂದು ಜೋಡಿಗೆ 40-200ರೂ.ಇದೆ. ತೆಂಗಿನಕಾಯಿ ಜೋಡಿ 50ರೂ.ಗೆ ಮಾರಾಟವಾಗುತ್ತಿದೆ.

English summary
As people preparing to celebrate Vijay Dashami and Ayudha pooja on Thursday and Friday, pumpkin, lemon, flower mango and mango leaves prices are nearing sky in the market which is essential for Dussehra celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X